Site icon Vistara News

Karnataka live news: ರಾಜ್ಯಕ್ಕೆ ಮತ್ತೆ ಕಾವೇರಿ ಹೊಡೆತ; ಇನ್ನೂ 15 ದಿನಗಳ ಕಾಲ 5000 ಕ್ಯೂಸೆಕ್‌ ನೀರು ಬಿಡಲು CWRC ಆದೇಶ

Cauvery Water

ಬೆಂಗಳೂರು: ರಾಜ್ಯಕ್ಕೆ ಮತ್ತೆ ಕಾವೇರಿ ಬರೆ ಬಿದ್ದಿದೆ. ಮಂಗಳವಾರ ನಡೆದ ಕಾವೇರಿ ನೀರು ನಿಯಂತ್ರಣ ಸಮಿತಿಯ ಸಭೆಯಲ್ಲಿ ಇನ್ನೂ 15 ದಿನಗಳ ಕಾಲ ಪ್ರತಿ ದಿನ 5000 ಕ್ಯೂಸೆಕ್‌ ನೀರು ಬಿಡುವಂತೆ ರಾಜ್ಯಕ್ಕೆ ಆದೇಶ ನೀಡಲಾಗಿದೆ. ಈಗಾಗಲೇ ಕಳೆದ 15 ದಿನಗಳಿಂದ ಕರ್ನಾಟಕ ತಮಿಳುನಾಡಿಗೆ ನೀರು ಬಿಡುತ್ತಲೇ ಇದೆ. ಮಳೆ ಇಲ್ಲದೆ ನೀರಿಲ್ಲದೆ ಕೆ.ಆರ್‌.ಎಸ್‌ ಮಟ್ಟ ಕಡಿಮೆಯಾಗುತ್ತಿದ್ದರೂ ಲೆಕ್ಕಿಸದೆ ಕೋರ್ಟ್‌ ಆದೇಶವೆಂಬ ನೆಲೆಯಲ್ಲಿ ನೀರು ಬಿಟ್ಟಿರುವ ರಾಜ್ಯಕ್ಕೆ ಈಗ ಮತ್ತೆ ಗುದ್ದು ನೀಡಲಾಗಿದೆ. ಇದರೊಂದಿಗೆ ರಾಜ್ಯದ ದಿನದಿನದ ಇನ್ನಷ್ಟು ಮಹತ್ವದ ಸುದ್ದಿಗಳನ್ನು (Karnataka live news) ಇಲ್ಲಿ ಗಮನಿಸಿ.

Deepa S

ಸೆ.12ರಂದು ರಾಜ್ಯದ ಇಲ್ಲೆಲ್ಲ ಮಳೆ ನಿರೀಕ್ಷೆ

ರಾಜ್ಯಾದ್ಯಂತ ಪ್ರತ್ಯೇಕ ಕಡೆಗಳಲ್ಲಿ ವ್ಯಾಪಕ ಮಳೆಯಾಗುವ (Rain News) ಸಾಧ್ಯತೆ ಇದೆ. ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾದರೆ, ಮಲೆನಾಡು ಮತ್ತು ಉತ್ತರ ಒಳನಾಡಿನ ಕೆಲವು ಕಡೆ ಚದುರಿದ (Weather report) ಮಳೆಯಾಗಲಿದೆ. ದಕ್ಷಿಣ ಒಳನಾಡಲ್ಲಿ ಪ್ರತ್ಯೇಕ ಸ್ಥಳಗಳಲ್ಲಿ ಮಿಂಚು ಸಹಿತ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.

Weather Report : ಸೆ.12ರಂದು ರಾಜ್ಯದ ಇಲ್ಲೆಲ್ಲ ಮಳೆ ನಿರೀಕ್ಷೆ
Harish Kera

ಇಂದು ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆ

ಬೆಂಗಳೂರು: ಬರಗಾಲದ ಕಾರಣದಿಂದ ಕಾವೇರಿ ನೀರು ಹಂಚಿಕೆ ವಿವಾದ ಕಗ್ಗಂಟಾಗಿರುವ ಹಿನ್ನೆಲೆಯಲ್ಲಿ, ಇಂದು ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆ (CWRC) ನಡೆಯಲಿದೆ. ಇಂದು ಮಧ್ಯಾಹ್ನ 2:30ಕ್ಕೆ ಸಭೆ ನಿಗದಿಯಾಗಿದೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಯಲಿದ್ದು, ಕಾವೇರಿ ನಿಗಮದ ಹಿರಿಯ ಅಧಿಕಾರಿಗಳು, ಎಂಜನಿಯರ್‌ಗಳು ಭಾಗಿಯಾಗಲಿದ್ದಾರೆ. CWRC ಅಧ್ಯಕ್ಷರು ದೆಹಲಿಯಿಂದಲೇ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಭಾಗಿಯಾಗಲಿದ್ದಾರೆ.

Exit mobile version