ಬೆಂಗಳೂರು: ಚಿಕ್ಕೋಡಿ ತಾಲೂಕಿನ ಹಿರೇಕೋಡಿಯ ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಹತ್ಯೆ (Jain monk Murder) ಹಿಂದೆ ನಡೆದಿದ್ದ ಪ್ಲ್ಯಾನ್ ಹಾಗೂ ನಂತರದ ಸಂಗತಿಗಳ ಬಗ್ಗೆ ಆರೋಪಿಗಳು ಬಾಯಿಬಿಟ್ಟಿದ್ದಾರೆ. ಇದೂ ಸೇರಿದಂತೆ ಇನ್ನಿತರ ಮಹತ್ವದ ಕ್ಷಣಕ್ಷಣದ ಸುದ್ದಿ ಬೆಳವಣಿಗೆಗಳಿಗೆ (Karnataka live news) ಇಲ್ಲಿ ನೋಡಿ.
Kidnap Case : ಪೋಷಕರಿಂದ ನವವಿವಾಹಿತೆ ಅಪಹರಣ! ಗರ್ಭಿಣಿ ಮೇಲೆ ಹಲ್ಲೆ
ಮನೆಯವರನ್ನು ಧಿಕ್ಕರಿಸಿ ಪ್ರೀತಿಸಿದವನ ಕೈಹಿಡಿದವಳ ಕಿಡ್ನ್ಯಾಪ್ ಆಗಿದೆ. ಕಿಡ್ನ್ಯಾಪ್ ಮಾಡಿದವರು ಬೇರೆ ಯಾರೂ ಅಲ್ಲ, ಆಕೆಯ ಪಾಲಕರೇ ಎಂಬ ಅಂಶ ಬೆಳಕಿಗೆ ಬಂದಿದೆ. ಈಗ ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
Kidnap Case : ಪೋಷಕರಿಂದಲೇ ನವವಿವಾಹಿತೆ ಅಪಹರಣ! ಮತ್ತೆ ಮನೆ ಸೇರುತ್ತಾಳಾ ಮಡದಿ?
ಠಾಣೆಯಲ್ಲಿ ನೇಣು ಬಿಗಿದುಕೊಂಡ ಕಾನ್ಸ್‌ಟೇಬಲ್
ಹುಬ್ಬಳ್ಳಿಯಲ್ಲಿ ಪೊಲೀಸ್ ಕಾನ್ಸ್‌ಟೇಬಲ್ (Police Constable) ಆತ್ಮಹತ್ಯೆ (self harming) ಮಾಡಿಕೊಂಡಿದ್ದಾರೆ. ಬೆಳಗಾವಿ ಜಿಲ್ಲೆಯ ಸಂಗೊಳ್ಳಿ ಗ್ರಾಮದ ಮಲ್ಲಿಕಾರ್ಜುನ್ ರುದ್ರಾಪುರ ಎಂಬುವವರು ಮೃತರು.
Self Harming : ಠಾಣೆಯಲ್ಲಿ ನೇಣು ಬಿಗಿದುಕೊಂಡ ಕಾನ್ಸ್‌ಟೇಬಲ್!
ಅಂಗನವಾಡಿಯಲ್ಲಿ ಮಕ್ಕಳು, ಮಹಿಳೆಯರಿಗೆ ಕೊಳೆತ ಮೊಟ್ಟೆ ಪೂರೈಕೆ; ಸರ್ಕಾರಕ್ಕೆ ಕಳಪೆ ಕಳಂಕ ಬೆಂಗಳೂರು: ಒಂದು ಕಡೆ ರಾಜ್ಯ ಸರ್ಕಾರ ರಾಜ್ಯ ಎಲ್ಲ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಅಂದರೆ 1ರಿಂದ 10ನೇ ತರಗತಿಯ ಎಲ್ಲ ಮಕ್ಕಳಿಗೆ ವಾರಕ್ಕೆ ಎರಡು ಮೊಟ್ಟೆ ವಿತರಿಸುವ ಪ್ಲ್ಯಾನ್ ಪ್ರಕಟಿಸಿದೆ. ಅದರ ನಡುವೆಯೇ ರಾಜ್ಯದ ಕೆಲವೆಡೆ ಅಂಗನವಾಡಿಗಳಿಗೆ (Anganwadis) ಪೂರೈಸಲಾಗುತ್ತಿರುವ ಮೊಟ್ಟೆ ಕಳಪೆಯಾಗಿದೆ (Rotten Eggs) ಎಂಬ ಆರೋಪ ಕೇಳಿಬಂದಿದ್ದು, ಜನಾಕ್ರೋಶ ಜೋರಾಗಿದೆ. ಇದು ಈಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ಅವರ ಗಮನಕ್ಕೂ ಬಂದಿದೆ.
Shakti Scheme : ಬಸ್ ನಿಲ್ಲಿಸದ್ದಕ್ಕೆ ಕಲ್ಲೆಸೆದ ವಿದ್ಯಾರ್ಥಿಗಳು; ಗಾಜು ಪೀಸ್ ಪೀಸ್!
ಶಕ್ತಿ ಯೋಜನೆ ಬಂದ ಮೇಲೆ ಸರ್ಕಾರಿ ಬಸ್‌ಗಳಲ್ಲಿ ಜನವೋ ಜನ. ಕೆಲವೊಮ್ಮೆ ನಿಲ್ಲಲೂ ಜಾಗವಿಲ್ಲದ ಪರಿಸ್ಥಿತಿ. ಇಂತಹ ವೇಳೆ ಬಸ್‌ನವರು ಸಹ ನಿಲ್ದಾಣಗಳಲ್ಲಿ ನಿಲ್ಲಿಸದೇ ಹೋಗುವ ಸ್ಥಿತಿ ಇದೆ. ಇದೇ ರೀತಿ ಯಾದಗಿರಿಯ ಅಲ್ಲಿಪುರದಲ್ಲಿ ಬಸ್ ನಿಲ್ಲಸದೇ ಇದ್ದಿದ್ದಕ್ಕೆ ವಿದ್ಯಾರ್ಥಿಗಳು ಕಲ್ಲೆಸಿದ್ದಾರೆ. ಗಾಜು ಪುಡಿಯಾಗಿರುವ ವರದಿಯಾಗಿದೆ.
ರಸ್ತೆ ದಾಟುತ್ತಿದ್ದ ವಿದ್ಯಾರ್ಥಿಗೆ ಲಾರಿ ಡಿಕ್ಕಿಯಾಗಿ ಸಾವು
ಹಾಲಿನ ಡೈರಿ ಲಾರಿ ಡಿಕ್ಕಿಯಾಗಿ ವಿದ್ಯಾರ್ಥಿಯೊಬ್ಬ (Student Dead) ಜೀವ ಕಳೆದುಕೊಂಡಿದ್ದಾನೆ. ಎಚ್.ಕೆ.ಆರ್ ನಗರದ ನಿವಾಸಿ ಮನೋಜ್ ಕುಮಾರ್ (20) ಮೃತ ದುರ್ದೈವಿ. ದಾವಣಗೆರೆಯ ಹಳೇ ಬಾತಿ ಕೆರೆ ಬಳಿ ಅಪಘಾತ (Road Accident) ಸಂಭವಿಸಿದೆ.
Road Accident : ರಸ್ತೆ ದಾಟುತ್ತಿದ್ದ ವಿದ್ಯಾರ್ಥಿಗೆ ಲಾರಿ ಡಿಕ್ಕಿಯಾಗಿ ಸಾವು