ಬೆಂಗಳೂರು: ಒಂದು ಕಡೆ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಸಾರ್ವಜನಿಕರಿಗೆ ನಿಷೇಧ ವಿಧಿಸಲಾಗಿದೆ. ಇನ್ನೊಂದೆಡೆ ಮೈಸೂರಿನಲ್ಲಿ ಮಹಿಷ ದಸರಾ (Mahisha dasara) ರ್ಯಾಲಿ ನಿರಾತಂಕವಾಗಿ ನಡೆಯುತ್ತಿದೆ. ಇದರೊಂದಿಗೆ ರಾಜ್ಯದ ಇನ್ನಷ್ಟು ಸುದ್ದಿಗಳನ್ನು (Karnataka live news) ಇಲ್ಲಿ ಗಮನಿಸಿ.
ರೈತರಿಗೆ ಕನಿಷ್ಠ 5 ಗಂಟೆ ನಿರಂತರ ವಿದ್ಯುತ್ ಪೂರೈಸಿ: ಎಸ್ಕಾಂ ಎಂ.ಡಿ.ಗಳಿಗೆ ಸಿಎಂ ಖಡಕ್ ಸೂಚನೆ
ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ವಿದ್ಯುತ್ ಬೇಡಿಕೆ ಗಣನೀಯವಾಗಿ ಹೆಚ್ಚಿರುವುದರಿಂದ ರೈತರಿಗೆ ಪ್ರತಿ ದಿನ ಮೂರು ಪಾಳಿಗಳಲ್ಲಿ ನಿರಂತರ ಐದು ಗಂಟೆಗಳ ಕಾಲ ವಿದ್ಯುತ್ ಪೂರೈಕೆ ಮಾಡುವ ಮೂಲಕ ಲೋಡ್ ಶೆಡ್ಡಿಂಗ್ (Load Shedding) ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ಎಸ್ಕಾಂಗಳ ಎಂ.ಡಿ.ಗಳಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಸೂಚನೆ ನೀಡಿದರು.
Load Shedding: ರೈತರಿಗೆ ಕನಿಷ್ಠ 5 ಗಂಟೆ ನಿರಂತರ ವಿದ್ಯುತ್ ಪೂರೈಸಿ: ಎಸ್ಕಾಂ ಎಂ.ಡಿ.ಗಳಿಗೆ ಸಿಎಂ ಖಡಕ್ ಸೂಚನೆ
ಬೆಂಗಳೂರಲ್ಲಿ ಮಳೆ ಮಾಯ; ಕರಾವಳಿ ಮಳೆ ಮಯ!
ವಾರಾಂತ್ಯದಲ್ಲಿ ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಚದುರಿದಂತೆ ಹಗುರದಿಂದ ಸಾಧಾರಣ ಮಳೆಯಾಗುವ (Rain News) ನಿರೀಕ್ಷೆ ಇದೆ. ಒಂದೆರಡರು ಕಡೆ ಗುಡುಗು, ಮಿಂಚಿನ ಸಾಧ್ಯತೆಯೂ ಇದೆ. ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನಲ್ಲಿ ಲಘು ಮಳೆ (Karnataka weather Forecast) ಸಂಭವ ಇದೆ. ಉಳಿದಂತೆ ಎಲ್ಲೆಡೆ ಒಣಹವೆಯಿಂದ ಕೂಡಿರಲಿದೆ.
https://vistaranews.com/weather/karnataka-weather-cloudy-weather-likely-in-bengaluru-heavy-rains-likely-in-coastal-areas/479679.html
ದಸರಾ ಹಬ್ಬಕ್ಕಾಗಿ ವಿಶೇಷ ರೈಲುಗಳ ಸಂಚಾರ
ದಸರಾ ಹಬ್ಬದ ಪ್ರಯುಕ್ತ (Mysore Dasara) ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚುವರಿ ರೈಲುಗಳ ಸಂಚಾರ (SPECIAL TRAINS) ಇರಲಿದೆ. ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ಕಡಿಮೆ ಮಾಡುವ ಸಲುವಾಗಿ ಮೈಸೂರು ಟು ಬೆಂಗಳೂರು ಮತ್ತು ಮೈಸೂರು ಟು ಚಾಮರಾಜನಗರ ನಿಲ್ದಾಣಗಳ ನಡುವೆ ವಿಶೇಷ ರೈಲುಗಳನ್ನು ಓಡಿಸಲು ನೈರುತ್ಯ ರೈಲ್ವೆ ವಲಯವು ನಿರ್ಧರಿಸಿದೆ. ಅಕ್ಟೋಬರ್ 20 ರಿಂದ 24ರವರೆಗೆ ಹೆಚ್ಚುವರಿ ರೈಲುಗಳ ಸಂಚಾರ ಇರಲಿದೆ.
https://vistaranews.com/horoscope-religion/religious/mysore-dasara-2022/mysore-dasara-swr-to-run-special-trains-for-dasara-festival/479746.html
ಪಶು ವೈದ್ಯಕೀಯ ಕಾಲೇಜುಗಳ ಸಮಸ್ಯೆಗಳಿಗೆ ಶೀಘ್ರ ಪರಿಹಾರ: ಡಿಕೆಶಿ
ಕೋಳಿ ಉದ್ಯಮ ಸಂಕಷ್ಟದಲ್ಲಿದ್ದು, ಮೊಟ್ಟೆ ಹಾಗೂ ಕೋಳಿಯ ಬೆಲೆ (World Egg Day) ಸಾಕಷ್ಟು ಏರಿಳಿತ ಕಾಣುತ್ತಿದೆ. ಈ ಸಮಸ್ಯೆಗಳ ಜತೆಗೆ ಪಶುವೈದ್ಯಕೀಯ ಕಾಲೇಜುಗಳ ಸಮಸ್ಯೆಗಳ ಪರಿಹಾರಕ್ಕೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಭರವಸೆ ನೀಡಿದರು.
World Egg Day: ಪಶು ವೈದ್ಯಕೀಯ ಕಾಲೇಜುಗಳ ಸಮಸ್ಯೆಗಳಿಗೆ ಶೀಘ್ರ ಪರಿಹಾರ: ಡಿಕೆಶಿ
ಗ್ರಾ.ಪಂ ಆವರಣದಲ್ಲೇ ಅಧ್ಯಕ್ಷೆ-ಸದಸ್ಯನ ಹೊಡಿಬಡಿ
ಮುಳುಬಾಗಿಲಿನ ದೇವರಾಯಸಮುದ್ರ ಗ್ರಾಮ ಪಂಚಾಯಿತಿಯ ಸಾಮಾನ್ಯ ಸಭೆಯಲ್ಲಿ ಗ್ರಾ.ಪಂ ಅಧ್ಯಕ್ಷೆ ಹಾಗೂ ಸದಸ್ಯರೊಬ್ಬರ ನಡುವೆ ಮಾತಿನ ಚಕಮಕಿ (Assault Case) ನಡೆದಿದೆ. ಮಾತಿಗೆ ಮಾತು ಬೆಳೆದು ಹೊಡಿಬಡಿ ಹಂತಕ್ಕೂ ತಲುಪಿದೆ. ಆವರಣದಲ್ಲೇ ಅಧ್ಯಕ್ಷೆ-ಸದಸ್ಯನ ಮಾರಾಮಾರಿಯನ್ನು ಸ್ಥಳೀಯರು ವಿಡಿಯೊ ಮಾಡಿದ್ದಾರೆ.
https://vistaranews.com/karnataka/kolara/assault-case-ruckus-at-general-body-meeting-of-devarayasamudra-grama-panchayat/479588.html