ಬೆಂಗಳೂರು: ಬಿಜೆಪಿಯ ಮೂವರು ಶಾಸಕರು ಕಾಂಗ್ರೆಸ್ ಪಕ್ಷ ಕರೆದಿದ್ದ ಶಾಸಕಾಂಗ ಪಕ್ಷದ ಸಭೆ ಹಾಗೂ ಡಿಕೆಶಿ ಆಯೋಜಿಸಿದ್ದ ಔತಣಕೂಟದಲ್ಲಿ ಕಾಣಿಸಿಕೊಂಡಿದ್ದಾರೆ. ಇದರೊಂದಿಗೆ ರಾಜ್ಯದ ಇನ್ನಷ್ಟು ಪ್ರಮುಖ ಸುದ್ದಿಗಳಿಗಾಗಿ (Karnataka Live News) ಇಲ್ಲಿ ನೋಡಿ.
ದೇಶದಲ್ಲಿ ಕರ್ನಾಟಕ ಅತಿಹೆಚ್ಚು ಸಿರಿಧಾನ್ಯ ಬೆಳೆಯುವ ರಾಜ್ಯವಾಗಬೇಕು: ಸಿಎಂ
ಸಾವಯವ ಕೃಷಿಯತ್ತ ಜನರು ಮುಖ ಮಾಡಿದ್ದು, ಸಾವಯವ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಿದೆ. ಜನರಲ್ಲಿ ಸಿರಿಧಾನ್ಯಗಳ ಬಗ್ಗೆ ಜಾಗೃತಿ ಮೂಡಿಸುವುದರ ಜತೆಗೆ ಮಾರುಕಟ್ಟೆ ಒದಗಿಸಬೇಕು. ಸಿರಿಧಾನ್ಯ (Millets and Organics Fair) ಬೆಳೆಯಲ್ಲಿ ಕರ್ನಾಟಕವು ದೇಶದಲ್ಲಿ 4ನೇ ಸ್ಥಾನದಲ್ಲಿದೆ. ಆದರೆ, ದೇಶದಲ್ಲಿಯೇ ಕರ್ನಾಟಕ ಅತಿಹೆಚ್ಚು ಸಿರಿಧಾನ್ಯ ಬೆಳೆಯುವ ರಾಜ್ಯವಾಗಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ತಿಳಿಸಿದರು.
Millets and Organics Fair: ದೇಶದಲ್ಲಿ ಕರ್ನಾಟಕ ಅತಿಹೆಚ್ಚು ಸಿರಿಧಾನ್ಯ ಬೆಳೆಯುವ ರಾಜ್ಯವಾಗಬೇಕು: ಸಿಎಂ
ನಾಲ್ಕು ಏರ್‌ಪೋರ್ಟ್‌ಗಳಿಗೆ ನಾಮಕರಣ; ಟಿಪ್ಪು ಹೆಸರಿಡಲು ಕೈ ಶಾಸಕ ಆಗ್ರಹ
ರಾಜ್ಯದ ನೂತನ ನಾಲ್ಕು ವಿಮಾನ ನಿಲ್ದಾಣಗಳಿಗೆ ಐತಿಹಾಸಿಕ ವ್ಯಕ್ತಿಗಳ ಹೆಸರು ನಾಮಕರಣ ಮಾಡಲು ರಾಜ್ಯ ಸರ್ಕಾರ ತೀರ್ಮಾನ ಮಾಡಿದೆ. ಈ ಕುರಿತ ನಿರ್ಣಯಕ್ಕೆ ವಿಧಾನಸಭೆಯಲ್ಲಿ (Belagavi Winter Session) ಸರ್ವಾನುಮತದ ಅಂಗೀಕಾರ ನೀಡಲಾಗಿದೆ. ಬೆಳಗಾವಿ, ಶಿವಮೊಗ್ಗ, ಹುಬ್ಬಳ್ಳಿ ಹಾಗೂ ವಿಜಯಪುರ ನಿಲ್ದಾಣಗಳಿಗೆ ನಾಮಕರಣ ಮಾಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಕಳುಹಿಸಲು ನಿರ್ಧರಿಸಲಾಗಿದೆ.
Belagavi Winter Session: ನಾಲ್ಕು ಏರ್‌ಪೋರ್ಟ್‌ಗಳಿಗೆ ನಾಮಕರಣ; ಟಿಪ್ಪು ಹೆಸರಿಡಲು ಕೈ ಶಾಸಕ ಆಗ್ರಹ
ಗಾಂಜಾ ರಿಕವರಿ ಕೇಸ್; ಒರಿಸ್ಸಾದಲ್ಲಿ ಜೈಲುಪಾಲಾಗಿದ್ದ ಕರ್ನಾಟಕ ಪೊಲೀಸ್ ರಿಲೀಸ್!
ಗಾಂಜಾ ರಿಕವರಿ (Drugs Case) ಮಾಡಿ ಆರೋಪಿಗಳನ್ನು ಬಂಧಿಸಲು ಹೋಗಿದ್ದ ಜಿಗಣಿ ಪೊಲೀಸರನ್ನೇ (Jigani Police) ಒರಿಸ್ಸಾ ಪೊಲೀಸರು ಬಂಧಿಸಿದ್ದರು. ಇದೀಗ ಒರಿಸ್ಸಾ ಜೈಲಿನಿಂದ ಕೋರ್ಟ್ ಜಾಮೀನು ಪಡೆದು ಕ್ರೈಂ ಪೇದೆ ಆನಂದ್ ಬಿಡುಗಡೆ ಆಗಿದ್ದಾರೆ.
Drugs Case : ಗಾಂಜಾ ರಿಕವರಿ ಕೇಸ್; ಒರಿಸ್ಸಾದಲ್ಲಿ ಜೈಲುಪಾಲಾಗಿದ್ದ ಕರ್ನಾಟಕ ಪೊಲೀಸ್ ರಿಲೀಸ್!
ಮಂಗಳೂರಿಗೆ ಇನ್ನು 10 ದಿನ ರೈಲು ಸಂಚಾರ ಬಂದ್!
ನೈರುತ್ಯ ರೈಲ್ವೆಯು (South Western Railway) ಭಾಗಶಃ ಬೆಂಗಳೂರು ಮತ್ತು ಮಂಗಳೂರು ನಡುವಿನ (Bengaluru and Mangaluru) ಎಲ್ಲ ರೈಲುಗಳನ್ನು (Train services) ಇಂದಿನಿಂದ (ಡಿ.14) ರದ್ದುಗೊಳಿಸಿದೆ. ಹಾಸನ ಜಂಕ್ಷನ್ ರೈಲ್ವೆ ನಿಲ್ದಾಣದಲ್ಲಿ ಯಾರ್ಡ್ ಮರುನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಂಡಿದೆ. ಈ ಹಿನ್ನೆಲೆಯಲ್ಲಿ ನೈರುತ್ಯ ರೈಲ್ವೆ ಡಿಸೆಂಬರ್ 14 ರಿಂದ ಡಿಸೆಂಬರ್ 22 ರವರೆಗೆ ಬೆಂಗಳೂರು ಮತ್ತು ಮಂಗಳೂರು ನಡುವಿನ ಬಹುತೇಕ ಎಲ್ಲಾ ರೈಲುಗಳನ್ನು ರದ್ದುಗೊಳಿಸಿದೆ.
Train services: ಮಂಗಳೂರಿಗೆ ಇನ್ನು 10 ದಿನ ರೈಲು ಸಂಚಾರ ಬಂದ್!
ನಾಳೆ ಮಳೆ ಮಾಯ; ನಾಡಿದ್ದು ಪೂರ್ತಿ ಮಳೆಮಯ!
ಬುಧವಾರ (ಡಿ.13) ರಾಜ್ಯಾದ್ಯಂತ ಒಣಹವೆ (Dry weather) ಇದ್ದು, ವಿಜಯಪುರದಲ್ಲಿ ಕಡಿಮೆ ಉಷ್ಣಾಂಶ 11.8 ಡಿ.ಸೆ ದಾಖಲಾಗಿದೆ. ಮುಂದಿನ 24 ಗಂಟೆಯಲ್ಲಿ ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗುವ (Rain News) ಮುನ್ಸೂಚನೆಯನ್ನು ಹವಾಮಾನ ಇಲಾಖೆ (Karnataka Weather Forecast) ನೀಡಿದೆ. ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಒಣಹವೆಯೇ ಮುಂದುವರಿಯಲಿದೆ.
ನಾಳೆ ಮಳೆ ಮಾಯ; ನಾಡಿದ್ದು ಪೂರ್ತಿ ಮಳೆಮಯ! http://vistaranews.com/weather/karnataka-weather-dry-weather-tomorrow-day-of-tomorrow-rain-forecast/532530.html