Site icon Vistara News

Karnataka live news: Weather Report : ಕರಾವಳಿಯಲ್ಲಿ ನಾಳೆ ಮಳೆ ವೈಲೆಂಟ್‌; ದಕ್ಷಿಣ ಒಳನಾಡಿನಲ್ಲಿ ಫುಲ್‌ ಸೈಲೆಂಟ್‌!

Karnataka Live News Updates

ಬೆಂಗಳೂರು: ರಾಜ್ಯದ ಹವಾಮಾನ ಮುನ್ಸೂಚನೆ ಹೊರಬಿದ್ದಿದ್ದು, ಕರಾವಳಿಯಲ್ಲಿ ನಾಳೆ ಜೋರಾಗಿ ಮಳೆ ಸುರಿಯಲಿದೆ. ದಕ್ಷಿಣ ಒಳನಾಡಿನಲ್ಲಿ ಮಳೆ ಇರುವುದಿಲ್ಲ. ಇನ್ನಿತರ ರಾಜ್ಯದ ಮಹತ್ವದ ಸುದ್ದಿ ಬೆಳವಣಿಗೆಗಳಿಗಾಗಿ (Karnataka live news) ಇಲ್ಲಿ ಗಮನಿಸಿ.

Prabhakar R

ಗೃಹ ಲಕ್ಷ್ಮಿ ಯೋಜನೆಗೆ ಪ್ರಜಾಪ್ರತಿನಿಧಿಗಳ ನೇಮಕಕ್ಕೆ ಆದೇಶ

ಗೃಹ ಲಕ್ಷ್ಮಿ ಯೋಜನೆಯನ್ನು (Gruha Lakshmi Scheme) ಸಮರ್ಪಕವಾಗಿ ಜಾರಿ ಮಾಡಲು ಪ್ರಜಾಪ್ರತಿನಿಧಿಗಳ ನೇಮಕಕ್ಕೆ ರಾಜ್ಯ ಸರ್ಕಾರ ನಿರ್ಧಾರ ಮಾಡಿದ್ದು, ಪ್ರತಿ 1000 ಜನರಿಗೆ ಅಥವಾ 1000 ಜನಸಂಖ್ಯೆ ಒಂದು ಗ್ರಾಮಕ್ಕೆ ಇಬ್ಬರು ಪ್ರಜಾಪ್ರತಿನಿಧಿಗಳನ್ನು (citizen volunteer) ನೇಮಕ ಮಾಡಲು ಆದೇಶ ಹೊರಡಿಸಲಾಗಿದೆ.

Gruha Lakshmi Scheme: ಗೃಹ ಲಕ್ಷ್ಮಿ ಯೋಜನೆಗೆ ಪ್ರಜಾಪ್ರತಿನಿಧಿಗಳ ನೇಮಕಕ್ಕೆ ಆದೇಶ
Krishna Bhat

ಮಂಗಳೂರು: ಕರಾವಳಿಯ ಮುಸ್ಲಿಂ ಯುವತಿ (Muslim woman from Mangalore) ಶಮಾ ವಾಜಿದ್‌ (Shama Wajid) ಅವರು ಪ್ರತಿಷ್ಠಿತ ಗ್ಲೋಬಲ್ ಮಿಸೆಸ್ ಇಂಡಿಯಾ ಇಂಟರ್‌ನ್ಯಾಷನಲ್‌ ಯೂನಿವರ್ಸ್ – 2023 (Global mrs india international universe 2023) ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಗ್ಲೋಬಲ್ ಇಂಡಿಯಾ (Mrs India) ಎಂಟರ್‌ಟೈನ್‌ಮೆಂಟ್‌ ಪ್ರೊಡಕ್ಷನ್ಸ್ ಆಯೋಜಿಸಿರುವ ಸ್ಪರ್ಧೆಯಲ್ಲಿ ವಿಜಯಿಯಾಗಿರುವ ಅವರು ಇದೀಗ 2024ರ ಗ್ಲೋಬಲ್ ಮಿಸೆಸ್ ಯೂನಿವರ್ಸ್ (Global Mrs Universe) ಸ್ಪರ್ಧೆಗೆ ಭಾರತವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ.

Deepa S

ಕರಾವಳಿಯಲ್ಲಿ ನಾಳೆ ಭಾರಿ ಮಳೆ ಸಾಧ್ಯತೆ

ರಾಜ್ಯಾದ್ಯಂತ ಮುಂದಿನ 4 ದಿನಗಳಲ್ಲಿ ಭಾರಿ ಮಳೆಯಾಗುವ (Rain news) ಸಾಧ್ಯತೆ ಇದ್ದು, ಹವಾಮಾನ ಇಲಾಖೆ (Weather report) ಯೆಲ್ಲೋ ಅಲರ್ಟ್‌ ನೀಡಿದೆ. ಮಹಾರಾಷ್ಟ್ರ ದಕ್ಷಿಣದಿಂದ ಕರಾವಳಿಯ ಉತ್ತರಕ್ಕೆ ಸಮುದ್ರದ ಮಟ್ಟದಲ್ಲಿ ಟ್ರಫ್‌ ಹಾದುಹೋಗಿದೆ. ಇದರ ಪ್ರಭಾವದಿಂದಾಗಿ ಕರಾವಳಿ ಭಾಗದಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ಇದೆ.

Weather Report : ಕರಾವಳಿಯಲ್ಲಿ ನಾಳೆ ಮಳೆ ವೈಲೆಂಟ್‌; ದಕ್ಷಿಣ ಒಳನಾಡಿನಲ್ಲಿ ಫುಲ್‌ ಸೈಲೆಂಟ್‌!
Deepa S

ವಂಶಿಕಾ ಹೆಸರಿನಲ್ಲಿ ಹಣ ಪೀಕಿದ ನಿಶಾಗೆ 14 ದಿನಗಳ ನ್ಯಾಯಾಂಗ ಬಂಧನ

ಸೋಶಿಯಲ್‌ ಮೀಡಿಯಾ ಹಾಗೂ ರಿಯಾಲಿಟಿ ಸ್ಟಾರ್ ಆಗಿರುವ ವಂಶಿಕಾ ಹೆಸರಿನಲ್ಲಿ (Vanshika Anjani kashyapa) ನಿಶಾ ನರಸಪ್ಪ ಎಂಬಾಕೆ ಹಣ ಲೂಟಿ ಮಾಡುತ್ತಿರುವ ಆರೋಪ ಕೇಳಿ ಬಂದಿತ್ತು. ಹೀಗಾಗಿ ಮಾಸ್ಟರ್‌ ಆನಂದ್‌ ಕುಟುಂಬಸ್ಥರು ಠಾಣೆ ಮೆಟ್ಟಿಲೇರಿದ್ದರು. ಇದೀಗ ನಿಶಾ ನರಸಪ್ಪಳನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ 39ನೇ ಎಸಿಎಮ್‌ಎಮ್ ಕೋರ್ಟ್ ಆದೇಶ ಹೊರಡಿಸಿದೆ.

Vanshika Anjani kashyapa : ವಂಶಿಕಾ ಮಾಸ್ಟರ್‌ ಆನಂದ್‌ ಹೆಸ್ರಲ್ಲಿ ಹಣ ಪೀಕಿದ ನಿಶಾಗೆ 14 ದಿನಗಳ ನ್ಯಾಯಾಂಗ ಬಂಧನ

Deepa S

ಆಸ್ತಿಗಾಗಿ ಅಣ್ಣನನ್ನೇ ಅಟ್ಟಾಡಿಸಿ ಚೂರಿ ಹಾಕಿದ ತಮ್ಮಂದಿರು

ಕೊಡಗಿನ ಮಡಿಕೇರಿ ತಾಲೂಕಿನ ಸಂಪಾಜೆ ಬಳಿಯ ಚೆಂಬು ಗ್ರಾಮದಲ್ಲಿ ಆಸ್ತಿ ವಿವಾದಕ್ಕೆ (Property dispute) ಸಹೋದರರು ಸೇರಿ ಅಣ್ಣನನ್ನೇ ಕೊಂದು (Murder Case) ಮುಗಿಸಿದ್ದಾರೆ. ಕುದುರೆಪಾಯ ನಿವಾಸಿ ಉಸ್ಮಾನ್ ಹತ್ಯೆಯಾದ ದುರ್ದೈವಿ.

Murder Case : ಆಸ್ತಿಗಾಗಿ ಅಣ್ಣನನ್ನೇ ಅಟ್ಟಾಡಿಸಿ ಚೂರಿ ಹಾಕಿದ ತಮ್ಮಂದಿರು
Exit mobile version