Site icon Vistara News

Karnataka live news: Weather Report : ಕರಾವಳಿಯಲ್ಲಿ ನಾಳೆ ಮಳೆ ವೈಲೆಂಟ್‌; ದಕ್ಷಿಣ ಒಳನಾಡಿನಲ್ಲಿ ಫುಲ್‌ ಸೈಲೆಂಟ್‌!

Karnataka Live News Updates

ಬೆಂಗಳೂರು: ರಾಜ್ಯದ ಹವಾಮಾನ ಮುನ್ಸೂಚನೆ ಹೊರಬಿದ್ದಿದ್ದು, ಕರಾವಳಿಯಲ್ಲಿ ನಾಳೆ ಜೋರಾಗಿ ಮಳೆ ಸುರಿಯಲಿದೆ. ದಕ್ಷಿಣ ಒಳನಾಡಿನಲ್ಲಿ ಮಳೆ ಇರುವುದಿಲ್ಲ. ಇನ್ನಿತರ ರಾಜ್ಯದ ಮಹತ್ವದ ಸುದ್ದಿ ಬೆಳವಣಿಗೆಗಳಿಗಾಗಿ (Karnataka live news) ಇಲ್ಲಿ ಗಮನಿಸಿ.

Deepa S

ಯುವಕನ ಬರ್ಬರ ಹತ್ಯೆ

ಬೆಳಗಾವಿಯ ಪೀರನವಾಡಿಯಲ್ಲಿ ಯುವಕನೊಬ್ಬ (26) ಹತ್ಯೆಯಾಗಿ (Murder case) ಹೋಗಿದ್ದಾನೆ. ಬೆಳಗಾವಿಯ ಪೀರನವಾಡಿ ನಿವಾಸಿ ಅರ್ಬಾಜ್ ರಫೀಕ್ ಮುಲ್ಲಾ ಕೊಲೆಯಾದ ಯುವಕ.

Murder Case : ಜೈನ್‌ ಎಂಜಿನಿಯರಿಂಗ್‌ ಕಾಲೇಜು ಹಿಂಭಾಗ ಯುವಕನ ಬರ್ಬರ ಹತ್ಯೆ
Deepa S

ಪೋಷಕರಿಂದಲೇ ನವವಿವಾಹಿತೆ ಕಿಡ್ನ್ಯಾಪ್‌ ಕೇಸ್‌ ಸುಖಾಂತ್ಯ

ಮನೆಯವರನ್ನು ಧಿಕ್ಕರಿಸಿ ಪ್ರೀತಿಸಿದವನ ಕೈಹಿಡಿದಳೆಂದು ಸಿಟ್ಟಿಗೆದ್ದ ಪೋಷಕರೇ ಮನೆಗೆ ನುಗ್ಗಿ ಮಗಳನ್ನು ಕಿಡ್ನ್ಯಾಪ್‌ ಮಾಡಿಬಿಟ್ಟಿದ್ದರು. ಈ ಪ್ರಕರಣ ಪೊಲೀಸ್‌ ಠಾಣೆ ಮೆಟ್ಟಿಲೇರಿ, ಕಿಡ್ನ್ಯಾಪ್‌ ಕೇಸ್‌ (Kidnap Case) ದಾಖಲಾಗಿತ್ತು. ಇದೀಗ ಬಲವಂತದಿಂದ ಕರೆದೊಯ್ದ ಪ್ರಕರಣವು ಸುಖಾಂತ್ಯಗೊಂಡಿದೆ. ಪೋಷಕರ ಜತೆಗೆ ನಾನೇ ಹೋಗಿದ್ದು ಎಂದು ಯುವತಿ ಹೇಳಿಕೆ ನೀಡಿ ಪ್ರಕರಣಕ್ಕೆ ತೆರೆ ಎಳೆದಿದ್ದಾಳೆ.

Kidnap Case : ಪೋಷಕರ ಕಿಡ್ನ್ಯಾಪ್‌ ಕೇಸ್‌ ಸುಖಾಂತ್ಯ; ಗಂಡನ ಮನೆ ಸೇರಿದ ನವವಿವಾಹಿತೆ
Deepa S

ಆಯತಪ್ಪಿ ಬಾವಿಗೆ ಬಿದ್ದ ತಂಗಿಯನ್ನು ಕಾಪಾಡಿದ ಅಕ್ಕ

ತುಮಕೂರಿನ ಕುಚ್ಚಂಗಿಪಾಳ್ಯದಲ್ಲಿ ಸಹೋದರಿಯ ಜೀವ ರಕ್ಷಿಸಲು 8 ವರ್ಷದ ಬಾಲಕಿಯೊಬ್ಬಳು ಬಾವಿಗೆ ಹಾರಿದ ಘಟನೆ ನಡೆದಿದೆ. ಶಾಲು (8) ಎಂಬಾಕೆ ಬಾವಿಗೆ ಹಾರಿ ತಂಗಿಯ ರಕ್ಷಣೆಯನ್ನು ಮಾಡಿದ್ದಾಳೆ.

ಆಯತಪ್ಪಿ ಬಾವಿಗೆ ಬಿದ್ದ ತಂಗಿ; ಪ್ರಾಣವನ್ನು ಲೆಕ್ಕಿಸದೇ ನೀರಿಗೆ ಹಾರಿದ ಅಕ್ಕ!

Deepa S

ಶಾಲಾ ಮಕ್ಕಳ ಕರೆದೊಯ್ಯುತ್ತಿದ್ದ ಟಾಟಾ ಮ್ಯಾಜಿಕ್ ಪಲ್ಟಿ

ಬೆಳಗಾವಿಯ ಗಣಾಚಾರಿ ಶಿಕ್ಷಣ ಸಂಸ್ಥೆಯ ಎಕ್ಸಲಂಟ್ ಎಜುಕೇಷನ್ ಸೊಸೈಟಿಗೆ ಸೇರಿದ ಶಾಲಾ ವಾಹನವು (Road Accident) ಪಲ್ಟಿಯಾಗಿದೆ. ಸುಮಾರು 37 ಮಕ್ಕಳನ್ನು ಕರೆದೊಯ್ಯುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ, ರಸ್ತೆ ಪಕ್ಕದ ಹಳ್ಳಕ್ಕೆ ಉರುಳಿ ಬಿದ್ದಿದೆ.

Road Accident : 30ಕ್ಕೂ ಹೆಚ್ಚು ಶಾಲಾ ಮಕ್ಕಳ ಕರೆದೊಯ್ಯುತ್ತಿದ್ದ ಟಾಟಾ ಮ್ಯಾಜಿಕ್ ಪಲ್ಟಿ!
Deepa S

ಬೆಂಗಳೂರು ಸೇರಿ ಕರಾವಳಿ, ಮಲೆನಾಡಿನಲ್ಲಿ ಮಳೆ ದಾಳಿ

ಕರ್ನಾಟಕ ಕರಾವಳಿಯಲ್ಲಿಂದು ಗುಡುಗು ಸಹಿತ ಭಾರಿ ಮಳೆಯಾಗುವ (Rain News) ಎಚ್ಚರಿಕೆಯನ್ನು ಹವಾಮಾನ ಇಲಾಖೆ (Weather report) ನೀಡಿದೆ. ಕರಾವಳಿಯಲ್ಲಿ ನೈರುತ್ಯ ಮುಂಗಾರು (Southwest monsoon) ಚುರುಕಾಗಿದ್ದರೆ, ಒಳನಾಡಿನಲ್ಲಿ ಸಾಮಾನ್ಯವಾಗಿದೆ. ಜು.16ರವರೆಗೆ 20 ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುವ ಮುನ್ಸೂಚನೆಯನ್ನು ನೀಡಲಾಗಿದೆ.

Weather Report : ಬೆಂಗಳೂರು ಸೇರಿ ಕರಾವಳಿ, ಮಲೆನಾಡಿನಲ್ಲಿ ಮಳೆ ಸಾಧ್ಯತೆ ಎಷ್ಟು?
Exit mobile version