ಕೆಎಸ್ಆರ್ಟಿಸಿ ಇನ್ಮುಂದೆ ಕರ್ನಾಟಕದ್ದೇ; ಮದ್ರಾಸ್ ಹೈಕೋರ್ಟ್ ಮಹತ್ವದ ತೀರ್ಪು
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಕೆಎಸ್ಆರ್‌ಟಿಸಿ ಹೆಸರು ಬಳಕೆಗೆ ಇದ್ದ ಕಾನೂನು ತೊಡಕು (KSRTC Logo) ಅಂತ್ಯವಾಗಿದೆ. ಕರ್ನಾಟಕದಲ್ಲಿ ಕೆಎಸ್ಆರ್‌ಟಿಸಿ ಹೆಸರನ್ನು ಬಳಸಲು ಇನ್ನು ಮುಂದೆ ಯಾವುದೇ ಅಭ್ಯಂತರವಿಲ್ಲ. ಕೇರಳ RTC ಇದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯು ಮದ್ರಾಸ್ ಹೈಕೋರ್ಟ್‌ನಲ್ಲಿ (Madras High Court) ವಜಾಗೊಂಡಿದೆ.
KSRTC Logo : ಕೆಎಸ್‌ಆರ್‌ಟಿಸಿ ಇನ್ಮುಂದೆ ಕರ್ನಾಟಕದ್ದೇ; ಮದ್ರಾಸ್ ಹೈಕೋರ್ಟ್ ಮಹತ್ವದ ತೀರ್ಪು
ನೆರವೇರಿದ ಸಾಕಾನೆ ಅರ್ಜುನನ 11ನೇ ಕಾರ್ಯ; ಬಿಕ್ಕಿ ಬಿಕ್ಕಿ ಅತ್ತ ಮಾವುತರು
ಸಾಕಾನೆ ಅರ್ಜುನನ ಕಳೆದುಕೊಂಡು 11 ದಿನಗಳು ಕಳೆದರೂ (Elephant Arjuna) ಮಾವುತರ ದುಃಖ ಮಾತ್ರ ಹಾಗೇ ಇದೆ. ಅರಣ್ಯ ಇಲಾಖೆಯ ಕಾಡಾನೆ ಸೆರೆ ಕಾರ್ಯಾಚರಣೆಯಲ್ಲಿ ಸಾಕಾನೆ ಅರ್ಜುನ ಸಾವನ್ನಪ್ಪಿತ್ತು. ಮಾವುತರು, ಕಾವಾಡಿಗರು, ಅರಣ್ಯ ಇಲಾಖೆ ಹಾಗೂ ಯಸಳೂರು ಸುತ್ತಮುತ್ತಲ ಗ್ರಾಮಸ್ಥರು 11ನೇ ದಿನದ ತಿಥಿ ಕಾರ್ಯವನ್ನು ನೆರವೇರಿಸಿದರು. ಬೆಳಗ್ಗೆಯಿಂದಲೂ ಸಮಾಧಿ ಸ್ಥಳಕ್ಕೆ ನೂರಾರು ಸಂಖ್ಯೆಯಲ್ಲಿ ಜನರು ಬಂದು, ಪುರೋಹಿತರ ನೇತೃತ್ವದಲ್ಲಿ ಪೂಜೆಯನ್ನು ಮಾಡಿ ಎಡೆ ಇಟ್ಟರು. ಬಂದಿದ್ದ ಜನರಿಗೆ ಊಟದ ವ್ಯವಸ್ಥೆಯನ್ನೂ ಮಾಡಲಾಗಿತ್ತು.
Elephant Arjuna : ನೆರವೇರಿದ ಸಾಕಾನೆ ಅರ್ಜುನನ 11ನೇ ಕಾರ್ಯ; ಬಿಕ್ಕಿ ಬಿಕ್ಕಿ ಅತ್ತ ಮಾವುತರು
Lok Sabha Security Breach: ಪ್ರತಾಪ್ ಸಿಂಹ ವಿರುದ್ಧ ದೇಶದ್ರೋಹಿ ಫ್ಲೆಕ್ಸ್; ಸಂಘಟನೆ ಅಧ್ಯಕ್ಷನ ಮೇಲೆ FIR
ಸಂಸದ ಪ್ರತಾಪ್ ಸಿಂಹ ಕೈಗೆ ಬಾಂಬ್ ಕೊಟ್ಟು, ದೇಶದ್ರೋಹಿ ಎಂಬ ಫ್ಲೆಕ್ಸ್ ಅನ್ನು ಅಳವಡಿಕೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷ ಕೆ ಎಸ್ ಶಿವರಾಮ್ ವಿರುದ್ಧ ದೂರನ್ನು ದಾಖಲು ಮಾಡಲಾಗಿದೆ. ಬಿಜೆಪಿ ಮುಖಂಡ ಬಿ. ಆನಂದ್ ಎಂಬುವವರು ದೂರು ನೀಡಿದ್ದಾರೆ.
ಬೆಂಗಳೂರಿಗರ ವೀಕೆಂಡ್ ಪ್ಲ್ಯಾನ್‌ಗೆ ಮಳೆ ಅಡ್ಡಿ! ಉಳಿದೆಡೆ ಹೇಗೆ?
ರಾಜ್ಯಾದ್ಯಂತ ಗುರುವಾರವೂ ಒಣಹವೆ ಮುಂದುವರಿದಿತ್ತು. ವಿಜಯಪುರದಲ್ಲಿ ಕಡಿಮೆ ಉಷ್ಣಾಂಶ 9.6 ಡಿ.ಸೆ ದಾಖಲಾಗಿತ್ತು. ಇನ್ನು ವಾರಾಂತ್ಯದಲ್ಲಿ ಕರ್ನಾಟಕದ ದಕ್ಷಿಣ ಒಳನಾಡಿನ ಪ್ರತ್ಯೇಕ ಸ್ಥಳಗಳಲ್ಲಿ ಮಳೆಯಾಗುವ (Rain News) ಸಾಧ್ಯತೆಯಿದೆ. ಉಳಿದಂತೆ ಮಲೆನಾಡು ಹಾಗೂ ಕರಾವಳಿ, ಉತ್ತರ ಒಳನಾಡಿನಲ್ಲಿ ಒಣಹವೆ (Dry weather) ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು (Karnataka weather Forecast) ನೀಡಿದೆ.
Security Breach in Lok Sabha: ಲೋಕಸಭೆ ಭದ್ರತಾ ವೈಫಲ್ಯ; ಮನೋರಂಜನ್ ರೂಂ ಸೀಜ್!
ಮೈಸೂರಿನ ವಿಜಯನಗರದಲ್ಲಿ ಮನೋರಂಜನ್ ರೂಂಗೆ ಪೊಲೀಸರು ಬೀಗ ಹಾಕಿದ್ದಾರೆ. ಮನೋರಂಜನ್ ಕುಟುಂಬಸ್ಥರಿಂದ ಈಗಾಗಲೇ ಒಂದಷ್ಟು ಮಾಹಿತಿ ಸಂಗ್ರಹಿಸಿರುವ ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿಗಳು, ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಅಲ್ಲದೆ, ಮತ್ತೆ ಬರುವುದಾಗಿ ತಿಳಿಸಿದ್ದಾರೆ.
https://vistaranews.com/crime/security-breach-in-lok-sabha-manoranjan-room-seized/533236.html