ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಮುಂದಿನ ಐದು ವರ್ಷಗಳ ಕಾಲ ಗಣೇಶನ ಮೂರ್ತಿ ಪ್ರತಿಷ್ಠಾಪಿಸಲು ಮಹಾನಗರಪಾಲಿಕೆಯಲ್ಲಿ ಠರಾವು ಮಾಡಿದ್ದನ್ನು ಪ್ರಶ್ನಿಸಿ ಹುಬ್ಬಳ್ಳಿಯ ಅಂಜುಮನ್ ಇಸ್ಲಾಂ ಸಂಸ್ಥೆ ಸಲ್ಲಿಸಿದ್ದ ಅರ್ಜಿಯನ್ನು ರಾಜ್ಯ ಹೈಕೋರ್ಟ್ನ ಧಾರವಾಡ ಪೀಠ ತಿರಸ್ಕರಿಸಿತ್ತು. ಈ ಮೂಲಕ ಮೈದಾನದಲ್ಲಿ ಮೂರು ದಿನಗಳ ಕಾಲ ಗಣೇಶೋತ್ಸವ ಆಚರಣೆಗೆ ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿದಂತಾಗಿತ್ತು. ಇದೀಗ ಬಿಜೆಪಿ ಪ್ರತಿಭಟನೆ ನಡೆಸಿದ್ದರಿಂದ ಹುಬ್ಬಳ್ಳಿ ಪಾಲಿಕೆಯ ಆಯುಕ್ತರು ಕೂಡ ಅನುಮತಿ ನೀಡಿರುವುದು ಕಂಡುಬಂದಿದೆ.
ಹಾಸನದಲ್ಲಿ ಕಾಡಾನೆಗಳ ಪರೇಡ್; ರಾಮನಗರದಲ್ಲಿ ಒಂಟಿ ಸಲಗ ನೈಟ್ ವಾಕ್, ಸೋಲಾರ್ ಬೇಲಿಗೂ ಡೋಂಟ್ ಕೇರ್!
ಹಾಸನ ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿಗೆ (Elephant Attack) ಜನರು ತತ್ತರಿಸಿ ಹೋಗಿದ್ದಾರೆ. ಹಿಂಡಾಗಿ ಪ್ರತ್ಯಕ್ಷವಾಗಿರುವ ಕಾಡಾನೆಗಳು ನಾ ಮುಂದು ತಾ ಮುಂದು ಎಂಬಂತೆ ರಸ್ತೆ ದಾಟಿವೆ. ಕೆಲವು ಕಡೆ ಕಾಡಾನೆ ಕೀಟಲೆಗೆ ಜನರು ಹೈರಾಣಾಗಿದ್ದಾರೆ.
ಹಾಸನದಲ್ಲಿ ಕಾಡಾನೆಗಳ ಪರೇಡ್; ರಾಮನಗರದಲ್ಲಿ ಒಂಟಿ ಸಲಗ ನೈಟ್ ವಾಕ್, ಸೋಲಾರ್ ಬೇಲಿಗೂ ಡೋಂಟ್ ಕೇರ್!
ಮೈಸೂರಲ್ಲಿ ಕಾಡಾನೆ ದಾಳಿಗೆ ರೈತ ಬಲಿ
ಮೈಸೂರಿನಲ್ಲಿ ಕಾಡಾನೆ ದಾಳಿಗೆ (Elephant attack) ರೈತನೊಬ್ಬ ಬಲಿಯಾಗಿದ್ದಾನೆ. ಸರಗೂರು ತಾಲೂಕಿನ ಚನ್ನಗುಂಡಿ ಹಾಡಿಯಲ್ಲಿ ಘಟನೆ ನಡೆದಿದ್ದು, ಗ್ರಾಮದ ಮಹೇಂದ್ರ (45) ಮೃತರು.
Elephant attack : ಮೈಸೂರಲ್ಲಿ ಕಾಡಾನೆ ದಾಳಿಗೆ ರೈತ ಬಲಿ
ರಾಜ್ಯಾದ್ಯಂತ ಪಿಒಪಿ ಗಣೇಶ ಮೂರ್ತಿ ಉತ್ಪಾದನೆ, ಮಾರಾಟ ನಿಷೇಧಿಸಿ ಸರ್ಕಾರ ಆದೇಶ
ರಾಜ್ಯಾದ್ಯಂತ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಹಾಗೂ ರಾಸಾಯನಿಕ ಗುಣಗಳುಳ್ಳ ವಸ್ತುಗಳನ್ನು ಬಳಸಿ ತಯಾರಿಸಲಾದ ಗಣೇಶ ಮೂರ್ತಿಗಳ (Ganesh Chaturthi) ಉತ್ಪಾದನೆ, ಮಾರಾಟ ಹಾಗೂ ವಿಸರ್ಜನೆ ನಿಷೇಧಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಆದೇಶವನ್ನು ಅನುಷ್ಠಾನಗೊಳಿಸಲು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳಿಗೆ ರಾಜ್ಯದ ಎಲ್ಲಾ ಜಿಲ್ಲಾಡಳಿತ, ಸ್ಥಳೀಯ ಸಂಸ್ಥೆಗಳು, ಪೊಲೀಸ್ ಇಲಾಖೆ ಎಲ್ಲಾ ರೀತಿಯ ಸಹಕಾರ ನೀಡಬೇಕು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಬಿ.ಎನ್.ಪ್ರವೀಣ್ ಸೂಚಿಸಿದ್ದಾರೆ.
Ganesh Chaturthi: ರಾಜ್ಯಾದ್ಯಂತ ಪಿಒಪಿ ಗಣೇಶ ಮೂರ್ತಿ ಉತ್ಪಾದನೆ, ಮಾರಾಟ ನಿಷೇಧಿಸಿ ಸರ್ಕಾರ ಆದೇಶ
ಪ್ರತ್ಯೇಕ ಕಡೆ ಅಪಘಾತ; ಇಬ್ಬರು ಸಾವು, ಮೂವರಿಗೆ ಗಂಭೀರ
ರಸ್ತೆ ಅಪಘಾತ ಪ್ರಕರಣದಲ್ಲಿ (Road Accident) ಇಬ್ಬರು ಮೃತಪಟ್ಟಿದ್ದರೆ, ಮೂವರು ಗಂಭೀರ ಗಾಯಗೊಂಡಿದ್ದಾರೆ. ಮೈಸೂರಲ್ಲಿ ಬೈಕ್ಗೆ ಮಿನಿ ಟೆಂಪೋ ಡಿಕ್ಕಿ ಹೊಡೆದಿದ್ದು, ಸವಾರನೊಬ್ಬ ಮೃತಪಟ್ಟಿದ್ದರೆ ಇಬ್ಬರು ಗಂಭೀರ ಗಾಯಗೊಂಡಿದ್ದಾರೆ. ತುಮಕೂರಲ್ಲಿ ಟಾಟಾ ಏಸ್ ಪಲ್ಟಿಯಾಗಿ ಒಬ್ಬ ಜೀವ ಬಿಟ್ಟರೆ, ರಾಮನಗರದಲ್ಲಿ ಟೈರ್ ಸ್ಫೋಟಗೊಂಡು ಕಂಟೈನರ್ ಉರುಳಿ ಬಿದ್ದಿದೆ.
Road Accident : ಪ್ರತ್ಯೇಕ ಕಡೆ ಅಪಘಾತ; ಇಬ್ಬರು ಸಾವು, ಮೂವರಿಗೆ ಗಂಭೀರ
ಪಂಚರ್ ಶಾಪ್ನಲ್ಲಿದ್ದ ಏರ್ ಸಿಲಿಂಡರ್ ಬ್ಲಾಸ್ಟ್ ; ನಾಲ್ವರ ಸ್ಥಿತಿ ಚಿಂತಾಜನಕ
ರಾಜ್ಯ ಗಡಿಭಾಗ ತಮಿಳುನಾಡಿನ ಹೊಸೂರು ಸಮೀಪದ ಬಾಗಲೂರಿನಲ್ಲಿ ಪಂಚರ್ ಶಾಪ್ನಲ್ಲಿರುವ ಏರ್ ಸಿಲಿಂಡರ್ ಬ್ಲಾಸ್ಟ್ (Cylinder blast) ಆಗಿದೆ. ಪಂಚರ್ ಶಾಪ್ನಲ್ಲಿದ್ದ ನಾಲ್ವರು ಗಂಭೀರ ಗಾಯಗೊಂಡಿದ್ದಾರೆ. ನಾಲ್ವರ ಸ್ಥಿತಿ ಚಿಂತಾಜನಕವಾಗಿದ್ದು, ಕೈ- ಕಾಲು ಮುರಿದುಕೊಂಡು ನರಳಾಡುತ್ತಿದ್ದಾರೆ.
Cylinder blast : ಪಂಚರ್ ಶಾಪ್ನಲ್ಲಿದ್ದ ಏರ್ ಸಿಲಿಂಡರ್ ಬ್ಲಾಸ್ಟ್ ; ನಾಲ್ವರ ಸ್ಥಿತಿ ಚಿಂತಾಜನಕ