Site icon Vistara News

Karnataka live news: ಕಾಂಗ್ರೆಸ್‌ ಮೇಲೆ ಮುಗಿಬಿದ್ದ ಬಿಜೆಪಿ; ರಾಹುಲ್‌, ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ಪೋಸ್ಟರ್‌ ಸಮರ

karnataka live news
Deepa S

ಕಾರಿಗೆ ಬಸ್‌ ಡಿಕ್ಕಿಯಾಗಿ ಐವರ ದುರ್ಮರಣ!

ಬಸ್ ಡಿಕ್ಕಿಯಾಗಿ ಟಾಟಾ ಸುಮೋನಲ್ಲಿದ್ದ ಐವರು ದಾರುಣವಾಗಿ (Road Accident) ಮೃತಪಟ್ಟಿದ್ದಾರೆ. ಗದಗ ಜಿಲ್ಲೆ ನೆರೇಗಲ್ ಪಟ್ಟಣದ ಹೊರ ವಲಯದಲ್ಲಿ ಘಟನೆ ನಡೆದಿದೆ. ನೆರೇಗಲ್ ಗದ್ದಿಹಳ್ಳದ ಬಳಿ ಬಸ್, ಟಾಟಾ ಸುಮೋ ನಡುವೆ ಮುಖಾಮುಖಿ ಡಿಕ್ಕಿ ಆಗಿದೆ.

https://vistaranews.com/karnataka/road-accident-five-dead-as-bus-collides-with-car/481765.html

Deepa S

ಬೆಂಗಳೂರಲ್ಲಿ ದಿನಕ್ಕೊಂದು ಅಪರಿಚಿತ ಶವ ಪತ್ತೆ!

ರಾಜಧಾನಿ ಬೆಂಗಳೂರಲ್ಲಿ ಕ್ರೈಂ ರೇಟ್‌ ಹೆಚ್ಚಾಗುತ್ತಿದ್ಯಾ ಎಂಬ ಅನುಮಾನಗಳು ಮೂಡುತ್ತಿವೆ. ಪುಂಡರು ಹಾಡಹಗಲೇ ಯಾರ ಭಯವಿಲ್ಲದೆ ಮಾರಕಾಸ್ತ್ರಗಳನ್ನು ಹಿಡಿದು ಓಡಾಡುತ್ತಿದ್ದಾರೆ. ಈ ನಡುವೆ ದಿನಕ್ಕೊಂದು ಅಪರಿಚಿತ ಶವ (Dead body Found) ಪತ್ತೆಯಾಗುತ್ತಿದೆ. ಇಲ್ಲಿನ ಆರ್‌ಎಂಸಿ ಯಾರ್ಡ್ ಎಂ.ಕೆ ಎಂಟರ್ ಪ್ರೈಸಸ್ ಕಟ್ಟಡದ ಹಿಂಭಾಗದಲ್ಲಿ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿದೆ. ದುಷ್ಕರ್ಮಿಗಳು ಹೊಟ್ಟೆ, ಎದೆಭಾಗ, ಕೈ-ಕಾಲುಗಳ ಮೇಲೆ ಮನಸ್ಸೋ ಇಚ್ಛೆ ಹಲ್ಲೆ ಮಾಡಿ ಹತ್ಯೆ (Murder Case) ಮಾಡಿದ್ದಾರೆ.

https://vistaranews.com/karnataka/bengaluru/murder-case-one-dead-body-found-in-bengaluru-every-day/481729.html

Deepa S

ಅ. 17ರವರೆಗೆ ನಾಲ್ಕು ಜಿಲ್ಲೆಗಳಲ್ಲಿ ಭಾರಿ ಮಳೆ ಎಚ್ಚರಿಕೆ

ರಾಜ್ಯಾದ್ಯಂತ ಮಳೆ ಅಬ್ಬರ ಕಡಿಮೆ (Karnataka Weather Forecast) ಆಗಿದೆ. ಆಗೊಮ್ಮೆ ಈಗೊಮ್ಮೆ ಮಳೆಯ ದರ್ಶನವಾಗುತ್ತಿದೆ. ಸದ್ಯ ರಾಜ್ಯದಲ್ಲಿ ನಾಳೆ, ನಾಳಿಂದು ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ (rain News) ನಿರೀಕ್ಷೆ ಇದೆ.

https://vistaranews.com/karnataka/karnataka-weather-heavy-rain-warning-in-four-districts-till-oct-17/481700.html

Harish Kera

ಇಂದು ಸಿಎಂ ಇಬ್ರಾಹಿಂ ಮಹತ್ವದ ಸಭೆ

ಬೆಂಗಳೂರು: ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಹಿನ್ನೆಲೆಯಲ್ಲಿ ಜೆಡಿಎಸ್ ರಾಜ್ಯಾದ್ಯಕ್ಷ ಸಿಎಂ ಇಬ್ರಾಹಿಂ ನಡೆ ಕುತೂಹಲ ಮೂಡಿಸುತ್ತಿದ್ದು, ಇಂದು ಅಸಮಧಾನಿತ ನಾಯಕರೊಂದಿಗೆ ಮಹತ್ವದ ಸಭೆ ನಡೆಸಲಿದ್ದಾರೆ. ಬಿಜೆಪಿ ಜೊತೆಗಿನ ಮೈತ್ರಿಗೆ ತೀವ್ರ ಅಸಮಧಾನ ಹೊರಹಾಕಿರುವ ಸಿಎಂ ಇಬ್ರಾಹಿಂ, ಪಕ್ಷದ ಶಾಸಕರು, ಎಂಎಲ್ ಸಿಗಳು, ಜಿಲ್ಲಾಧ್ಯಕ್ಷರು,‌ ಮುಖಂಡರ ಸಭೆ ಕರೆದಿದ್ದಾರೆ.

Harish Kera

ಬಿಜೆಪಿಯಿಂದ ಕಾಂಗ್ರೆಸ್ ಕಮಿಷನ್‌ ವಾರ್

ಬೆಂಗಳೂರು: ಐಟಿ ರೈಡ್‌ ವೇಳೆ ಸಿಕ್ಕಿರುವ 42 ಕೋಟಿ ನಗದು ಈಗ ಕಾಂಗ್ರೆಸ್‌ ಸರ್ಕಾರಕ್ಕೆ ತಲೆನೋವು ತಂದಿಟ್ಟಿದೆ. ಇದು ರಾಜಸ್ಥಾನ ಚುನಾವಣೆಗೆ ಫಂಡಿಂಗ್‌ಗಾಗಿ ಬಳಸಲಾಗುತ್ತಿದೆ ಎಂದು ಬಿಜೆಪಿ ಆರೋಪಿಸಿದ್ದು, ಸಿಎಂ ವಿರುದ್ಧ ಮುಗಿಬಿದ್ದಿದೆ. ʼಇದು ATM ಸರ್ಕಾರʼ ಎಂದು, ʼCM ಅಂದ್ರೆ ಕಲೆಕ್ಷನ್ ಮಾಸ್ಟರ್ʼ ಎಂದು ಟ್ವೀಟ್‌ ಮೂಲಕ ಕಾಲೆಳೆಯುತ್ತಿದ್ದು, ಸಿಎಂ ಸಿದ್ದರಾಮಯ್ಯ ಸೂಟ್‌ಕೇಸ್ ಹಿಡಿದ ಚಿತ್ರ ಬಳಸಿ ಟ್ವೀಟ್ ಮಾಡಿದೆ.‌

Exit mobile version