ಬೆಂಗಳೂರು: ಬೆಂಗಳೂರಿನ 10 ಕಡೆ ಸೇರಿದಂತೆ ರಾಜ್ಯಾದ್ಯಂತ 48 ಕಡೆ ಭ್ರಷ್ಟಾಚಾರ ಆರೋಪವುಳ್ಳ ಅಧಿಕಾರಿಗಳ ಮನೆ, ಕಚೇರಿಗಳಿಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇದರೊಂದಿಗೆ ಇಂದಿನ ಇನ್ನಷ್ಟು ಮಹತ್ವದ ಸುದ್ದಿ ಬೆಳವಣಿಗೆಗಳನ್ನು (Karnataka live news) ತಿಳಿಯಲು ಇಲ್ಲಿ ನೋಡಿ.
ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವಿಶೇಷ ಚೇತನ ಬಾಲಕಿ ಮೇಲೆ ಅತ್ಯಾಚಾರ; ಇಬ್ಬರ ಸೆರೆ
ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ವಿಶೇಷ ಚೇತನ ಬಾಲಕಿ ಮೇಲೆ ಅತ್ಯಾಚಾರ (Physical Abuse) ಮಾಡಿರುವ ಘಟನೆ ನಡೆದಿದ್ದು, ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಅಬ್ದುಲ್ ಹಲೀಂ (37), ಈತನಿಗೆ ಸಹಕರಿಸಿದ ಶಮೀನಾ ಬಾನು(22) ಬಂಧಿತರು.
Physical Abuse: ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವಿಶೇಷ ಚೇತನ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ಇಬ್ಬರ ಸೆರೆ
ಬಿಎಂಟಿಸಿ ಬಸ್‌ಗೆ ಬೈಕ್ ಸವಾರ ಬಲಿ
ಬೆಂಗಳೂರಿನ ದಾಸರಹಳ್ಳಿ ಮೆಟ್ರೊ ಸ್ಟೇಷನ್ ಬಳಿ ಬಿಎಂಟಿಸಿ ಬಸ್ ಹರಿದು ಬೈಕ್ ಸವಾರ ಮೃತಪಟ್ಟಿರುವ ಘಟನೆ ಗುರುವಾರ ನಡೆದಿದೆ. ಸರ್ವೀಸ್ ರಸ್ತೆಯಲ್ಲಿ ಪಾರ್ಕ್ ಮಾಡಿದ್ದ ಕಾರೊಂದಕ್ಕೆ ಡಿಕ್ಕಿ ಹೊಡೆದು ಬೈಕ್ ಸವಾರ ಕೆಳಗೆ ಬಿದ್ದಾಗ ಬಿಎಂಟಿಸಿ ಬಸ್ (BMTC Bus Accident) ಹರಿದಿದೆ.
BMTC Bus Accident: ಬಿಎಂಟಿಸಿ ಬಸ್‌ಗೆ ಬೈಕ್ ಸವಾರ ಬಲಿ
ಚಾಮುಂಡಿಗೆ ಪೌರಾಣಿಕ ಹಿನ್ನೆಲೆ ಇಲ್ಲ, ಮಹಿಷ ರಾಕ್ಷಸನಲ್ಲ ಬೌದ್ಧ ಬಿಕ್ಕು ಎಂದ ಭಗವಾನ್
ಚಾಮುಂಡಿಗೆ ಪುರಾಣದ ಹಿನ್ನೆಲೆ ಇಲ್ಲ. ಚಾಮುಂಡೇಶ್ವರಿ ಎಂಬುವುದು 200 ವರ್ಷಗಳ ಈಚೆಗೆ ಸೃಷ್ಟಿಯಾದ ಪಾತ್ರ. ಮಹಿಷ ರಾಕ್ಷಸ ಅಲ್ಲ, ಆತ ಬೌದ್ಧ ಬಿಕ್ಕು. ಅಶೋಕನ ಕಾಲದಲ್ಲಿ ಮಹಿಷನು ಧರ್ಮ ಪ್ರಚಾರಕ್ಕಾಗಿ ಮೈಸೂರಿಗೆ ಬಂದ. ಆತನ ಕಾಲಾನಂತರದಲ್ಲಿ ಚಾಮುಂಡಿ ಎನ್ನುವ ಪಾತ್ರ ಸೃಷ್ಟಿಸಲಾಯಿತು ಎಂದು ನಿವೃತ್ತ ಪ್ರಾಧ್ಯಾಪಕ, ವಿಚಾರವಾದಿ ಪ್ರೊ. ಕೆ.ಎಸ್. ಭಗವಾನ್ (KS Bhagawan) ಹೇಳಿದ್ದಾರೆ.
KS Bhagawan: ಚಾಮುಂಡಿಗೆ ಪೌರಾಣಿಕ ಹಿನ್ನೆಲೆ ಇಲ್ಲ, ಮಹಿಷ ರಾಕ್ಷಸನಲ್ಲ ಬೌದ್ಧ ಬಿಕ್ಕು ಎಂದ ಭಗವಾನ್
Kaveri River : ಡಿಕೆಶಿ ಕರ್ನಾಟಕಕ್ಕೆ ಮಂತ್ರಿಯೋ, ತಮಿಳುನಾಡಿಗೋ? ಸರ್ವಪಕ್ಷ ಸಭೆ ಕರೆಯಲು ಎಚ್‌ಡಿಕೆ ಆಗ್ರಹ
ತಮಿಳುನಾಡಿಗೆ ಕಾವೇರಿ ನೀರು ಬಿಡುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಡಿ.ಕೆ. ಶಿವಕುಮಾರ್ ಮಂತ್ರಿ ಆಗಿರುವುದು ಕರ್ನಾಟಕಕ್ಕೋ ಅಥವಾ ತಮಿಳುನಾಡಿಗೋ? ಎಂದು ಪ್ರಶ್ನೆ ಮಾಡಿದ್ದಾರೆ. ನೀರು ಹರಿಸುವುದನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ. ಸರ್ವಪಕ್ಷ ಸಭೆ ಕರೆಯಲು ಮುಖ್ಯಮಂತ್ರಿಗೆ ಒತ್ತಾಯ ಮಾಡಿದ್ದಾರೆ.
Kaveri River : ಡಿಕೆಶಿ ಕರ್ನಾಟಕಕ್ಕೆ ಮಂತ್ರಿಯೋ, ತಮಿಳುನಾಡಿಗೋ? ಸರ್ವಪಕ್ಷ ಸಭೆ ಕರೆಯಲು ಎಚ್‌ಡಿಕೆ ಆಗ್ರಹ