ಬೆಂಗಳೂರು: ಜೆಡಿಎಸ್ ಮುಖಂಡ ಎಚ್‌ಡಿ ಕುಮಾರಸ್ವಾಮಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ನಡುವೆ ಈಗ ʼಅಸಲಿ ಜೆಡಿಎಸ್ ನಮ್ಮದುʼ ಎಂಬ ಸಮರ ಶುರುವಾಗಿದೆ. ರಾಜ್ಯದ ಇಂದಿನ ಇನ್ನಷ್ಟು ಪ್ರಮುಖ ಸುದ್ದಿಗಳಿಗಾಗಿ (Karnataka live news) ಇಲ್ಲಿ ನೋಡುತ್ತಿರಿ.
ಅತ್ತಿಬೆಲೆ ಪಟಾಕಿ ದುರಂತ ಪ್ರಕರಣದ ಮ್ಯಾಜಿಸ್ಟೀರಿಯಲ್ ತನಿಖೆಗೆ ಆದೇಶ
ಅತ್ತಿಬೆಲೆ ಪಟಾಕಿ ಅಂಗಡಿ ಅಗ್ನಿ ದುರಂತ ಪ್ರಕರಣದ (Fire Accident) ಮ್ಯಾಜಿಸ್ಟೀರಿಯಲ್ ವಿಚಾರಣೆಗೆ (magisterial enquiry) ಸೂಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ವಿಚಾರಣಾಧಿಕಾರಿಯಾಗಿ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತ ಅಮಲಾನ್ ಆದಿತ್ಯ ಬಿಸ್ವಾಸ್ ಅವರನ್ನು ನೇಮಕ ಮಾಡಲಾಗಿದ್ದು, ಮೂರು ತಿಂಗಳೊಳಗೆ ತನಿಖೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ.
Fire Accident: ಅತ್ತಿಬೆಲೆ ಪಟಾಕಿ ದುರಂತ ಪ್ರಕರಣದ ಮ್ಯಾಜಿಸ್ಟೀರಿಯಲ್ ತನಿಖೆಗೆ ಆದೇಶ
ಸಲಿಂಗ ವಿವಾಹ ನಾಟ್ ಓಕೆ ಎಂದ ಸುಪ್ರೀಂ, ರಾಜ್ಯದಲ್ಲಿ ಮತ್ತೆ ಡೈರಿ ಕಂಪನ…
ಸಲಿಂಗ ಸಂಬಂಧ ಓಕೆ, ಆದರೆ ಮದುವೆ ಮಾತ್ರ ನಾಟ್ ಓಕೆ ಎಂದಿದೆ ಸುಪ್ರೀಂ ಕೋರ್ಟ್. ಈ ನಡುವೆ, ರಾಜ್ಯ ರಾಜಕಾರಣದಲ್ಲಿ ಡೈರಿಯೊಂದು ಸದ್ದು ಮಾಡಿದೆ. ಏನಿದೆ ಅದರಲ್ಲಿ ಎಂಬ ಕುತೂಹಲವೂ ಸೇರಿದಂತೆ ದಿನದ ಪ್ರಮುಖ ಬೆಳವಣಿಗೆಗಳ ಮಾಹಿತಿ ಇಲ್ಲಿದೆ.
VISTARA TOP 10 NEWS : ಸಲಿಂಗ ವಿವಾಹ ನಾಟ್ ಓಕೆ ಎಂದ ಸುಪ್ರೀಂ, ರಾಜ್ಯದಲ್ಲಿ ಮತ್ತೆ ಡೈರಿ ಕಂಪನ…
ಎಚ್.ಡಿ. ದೇವೇಗೌಡರಿಗೆ ಬೆಂಗಳೂರು ವಿವಿಯಿಂದ ಗೌರವ ಡಾಕ್ಟರೇಟ್ ಪ್ರದಾನ
ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರಿಗೆ ಬೆಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗಿದೆ. ರಾಜಕೀಯ ಕ್ಷೇತ್ರಕ್ಕೆ ನೀಡಿರುವ ಗಣನೀಯ ಕೊಡುಗೆಯನ್ನು ಪರಿಗಣಿಸಿ ಮಾಜಿ ಪ್ರಧಾನಿಗೆ ಗೌರವ ಡಾಕ್ಟರೇಟ್ ನೀಡಲಾಗಿದೆ. ನಗರದ ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಬೆಂಗಳೂರು ವಿಶ್ವವಿದ್ಯಾಲಯದ 58ನೇ ಘಟಿಕೋತ್ಸವದಲ್ಲಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.
https://vistaranews.com/karnataka/hd-deve-gowda-conferred-with-honorary-doctorate-by-bangalore-university/483142.html
ʼಕರ್ನಾಟಕ ಸಂಭ್ರಮ 50ʼ ಲಾಂಛನ ಬಿಡುಗಡೆ; ವಿನ್ಯಾಸಗಾರನಿಗೆ ಸಿಎಂ ಮೆಚ್ಚುಗೆ
ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಮರುನಾಮಕರಣಗೊಂಡು 50 ವರ್ಷ ತುಂಬಿದ ಹಿನ್ನೆಲೆಯಲ್ಲಿ ವರ್ಷವಿಡೀ ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ʼಕರ್ನಾಟಕ ಸಂಭ್ರಮ 50ʼ (Karnataka Sambhrama) ಆಚರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ ವಿಶೇಷವಾಗಿ ವಿನ್ಯಾಸಗೊಳಿಸಿರುವ ʼಕರ್ನಾಟಕ ಸಂಭ್ರಮ-50ರ ಲಾಂಛನವನ್ನು ಸಿಎಂ ಸಿದ್ದರಾಮಯ್ಯ ಅವರು ವಿಧಾನಸೌಧದಲ್ಲಿ ಮಂಗಳವಾರ ಬಿಡುಗಡೆ ಮಾಡಿದರು.
Karnataka Sambhrama 50: ʼಕರ್ನಾಟಕ ಸಂಭ್ರಮ 50ʼ ಲಾಂಛನ ಬಿಡುಗಡೆ; ವಿನ್ಯಾಸಗಾರನಿಗೆ ಸಿಎಂ ಮೆಚ್ಚುಗೆ