ಆಗಸ್ಟ್‌ನಲ್ಲಿ ಜಾರಿ ಎಂದು ಹೇಳಲಾಗುತ್ತಿದ್ದ ಕಾಂಗ್ರೆಸ್ ಗ್ಯಾರಂಟಿ ಯೋಜನೆಯಲ್ಲಿ ಒಂದಾಗಿರುವ ಗೃಹಲಕ್ಷ್ಮಿ ಯೋಜನೆಯು ಮತ್ತೆ ಮುಂದಕ್ಕೆ ಹೋಗಿದೆ. ಇದರ ಹಿಂದೆ ಸರ್ಕಾರದ ರಾಜಕೀಯ ಲೆಕ್ಕಾಚಾರದ ಜತೆಗೆ ಬೊಕ್ಕಸಕ್ಕೆ 2500 ಕೋಟಿ ರೂಪಾಯಿ ಉಳಿಸುವ ಪ್ಲ್ಯಾನ್ ಕೂಡಾ ಇದೆ ಎಂದು ಹೇಳಲಾಗುತ್ತಿದೆ.
ಬಿಬಿಎಂಪಿ ವಾರ್ಡ್ ಸಂಖ್ಯೆ 225 ನಿಗದಿ ಮಾಡಿ ಅಧಿಸೂಚನೆ; ಸಲಹೆ, ಆಕ್ಷೇಪಣೆ ಸಲ್ಲಿಕೆಗೆ 15 ದಿನ ಕಾಲಾವಕಾಶ
ಬಿಬಿಎಂಪಿ ವಾರ್ಡ್ ಮರು ವಿಂಗಡಣೆಯ ಕರಡು ಪ್ರತಿ ಬಿಡುಗಡೆಯಾಗಿದ್ದು, ವಾರ್ಡ್‌ಗಳ ಸಂಖ್ಯೆ 243ರಿಂದ 225ಕ್ಕೆ ನಿಗದಿಪಡಿಸಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಜತೆಗೆ ಸಲಹೆ, ಆಕ್ಷೇಪಣೆಗಳನ್ನು ಸಲ್ಲಿಸಲು ಸಾರ್ವಜನಿಕರಿಗೆ 15 ದಿನಗಳ ಕಾಲಾವಕಾಶ ನೀಡಲಾಗಿದ್ದು, ಬಳಿಕ ಬಿಬಿಎಂಪಿ ವಾರ್ಡ್‌ಗಳ (BBMP Election) ಅಂತಿಮ ಪ್ರತಿಯನ್ನು ಸರ್ಕಾರ ಪ್ರಕಟ ಮಾಡಲಿದೆ.
BBMP Election: ಬಿಬಿಎಂಪಿ ವಾರ್ಡ್ ಸಂಖ್ಯೆ 225 ನಿಗದಿ ಮಾಡಿ ಅಧಿಸೂಚನೆ; ಸಲಹೆ, ಆಕ್ಷೇಪಣೆ ಸಲ್ಲಿಕೆಗೆ 15 ದಿನ ಕಾಲಾವಕಾಶ
ಚಿತ್ರದುರ್ಗದಲ್ಲಿ ಮತ್ತೊಂದು ಕಲುಷಿತ ನೀರಿನ ದುರಂತ; ವೃದ್ಧ ಸಾವು, 10ಕ್ಕೂ ಹೆಚ್ಚು ಮಂದಿ ಅಸ್ವಸ್ಥ
ಚಿತ್ರದುರ್ಗದ ಕವಾಡಿಗರ ಹಟ್ಟಿ ವಿಷ ಜಲದ ದುರಂತದ ಬೆನ್ನಲ್ಲೇ ಮತ್ತೊಂದು ದುರ್ಘಟನೆ ನಗರದಲ್ಲಿ ನಡೆದಿದೆ. ಕಲುಷಿತ ನೀರು ಕುಡಿದು 10ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾದ ಘಟನೆ (Contaminated Water) ಕವಾಡಿಗರಹಟ್ಟಿ ಪಕ್ಕದಲ್ಲಿರುವ ರಾಜೀವ್ ಗಾಂಧಿ ಆಶ್ರಯ ಬಡಾವಣೆಯಲ್ಲಿ ನಡೆದಿದ್ದು, ಈ ಪೈಕಿ ಒಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
Contaminated Water: ಚಿತ್ರದುರ್ಗದಲ್ಲಿ ಮತ್ತೊಂದು ಕಲುಷಿತ ನೀರಿನ ದುರಂತ; ವೃದ್ಧ ಸಾವು, 10ಕ್ಕೂ ಹೆಚ್ಚು ಮಂದಿ ಅಸ್ವಸ್ಥ
Karnataka Politics : ಕಾಂಗ್ರೆಸ್‌ನಲ್ಲಿ ಸಿಡಿದ ಮತ್ತೊಂದು ಟೀಂ; ಬ್ಯಾಡ್ಮಿಂಟನ್ ಕ್ಲಬ್‌ನಲ್ಲಿ ರಹಸ್ಯ ಸಭೆ!
ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ಪದೇ ಪದೆ ಸಾಬೀತಾಗುತ್ತಲೇ ಬರುತ್ತಿದೆ. ಒಂದು ಕಡೆ ಸಮಸ್ಯೆ ಬಗೆಹರಿಸುತ್ತಿದ್ದಂತೆ ಮತ್ತೊಂದು ಕಡೆ ಸೃಷ್ಟಿಯಾಗಿರುತ್ತದೆ. ಈಗ ಕೆಪಿಸಿಸಿ ಮೂರನೇ ಸ್ತರದ ನಾಯಕರು ರಹಸ್ಯ ಸಭೆ ನಡೆಸಿದ್ದು, ವರಿಷ್ಠರ ನಡೆ ಬಗ್ಗೆ ಬೇಸರ ಹೊರಹಾಕಿದ್ದಾರೆ.
ಆ.19ರಂದು ಬೆಂಗಳೂರಿನ ಬಹುತೇಕ ಕಡೆ ಪವರ್ ಕಟ್; ಎಲ್ಲೆಲ್ಲಿ ವ್ಯತ್ಯಯವಾಗಲಿದೆ?
ಸಿಲಿಕಾನ್ ಸಿಟಿ ಬೆಂಗಳೂರಿನ ವಿವಿಧೆಡೆ ಆಗಸ್ಟ್ 19ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಬೆಸ್ಕಾಂ ಮತ್ತು ಕೆಪಿಟಿಸಿಎಲ್ ವತಿಯಿಂದ ವಿದ್ಯುತ್ ಮಾರ್ಗಗಳ ದುರಸ್ತಿ ಕಾಮಗಾರಿ ಕೈಗೊಂಡಿರುವುದರಿಂದ ವಿದ್ಯುತ್ ಕಡಿತವಾಗಲಿದೆ (Power Cut) ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ತಿಳಿಸಿದೆ.
Power Cut: ಆ.19ರಂದು ಬೆಂಗಳೂರಿನ ಬಹುತೇಕ ಕಡೆ ಪವರ್ ಕಟ್; ಎಲ್ಲೆಲ್ಲಿ ವ್ಯತ್ಯಯವಾಗಲಿದೆ?