ಆಗಸ್ಟ್‌ನಲ್ಲಿ ಜಾರಿ ಎಂದು ಹೇಳಲಾಗುತ್ತಿದ್ದ ಕಾಂಗ್ರೆಸ್ ಗ್ಯಾರಂಟಿ ಯೋಜನೆಯಲ್ಲಿ ಒಂದಾಗಿರುವ ಗೃಹಲಕ್ಷ್ಮಿ ಯೋಜನೆಯು ಮತ್ತೆ ಮುಂದಕ್ಕೆ ಹೋಗಿದೆ. ಇದರ ಹಿಂದೆ ಸರ್ಕಾರದ ರಾಜಕೀಯ ಲೆಕ್ಕಾಚಾರದ ಜತೆಗೆ ಬೊಕ್ಕಸಕ್ಕೆ 2500 ಕೋಟಿ ರೂಪಾಯಿ ಉಳಿಸುವ ಪ್ಲ್ಯಾನ್ ಕೂಡಾ ಇದೆ ಎಂದು ಹೇಳಲಾಗುತ್ತಿದೆ.
ಕೈ ಸೇರುವವರಿಗೆ ಸ್ವಾಗತ: ಡಿಕೆ ಶಿವಕುಮಾರ್
ಬೆಂಗಳೂರು: ಆಪರೇಷನ್ ಹಸ್ತಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪರೋಕ್ಷವಾಗಿ ಚಾಲನೆ ನೀಡಿದ್ದಾರೆ. ʼನಿಮ್ಮ ಕ್ಷೇತ್ರಗಳಲ್ಲಿ ಜೆಡಿಎಸ್ ಬಿಜೆಪಿ ಬಿಟ್ಟು ಬರುವವರ ಪಟ್ಟಿ ಕೊಡಿ. ಲೋಕಸಭಾ ಚುನಾವಣೆಗೆ ನಮಗೆ ಅನುಕೂಲವಾದ್ರೆ ಸಾಕು. ನೀವು ಒಪ್ಪುವುದಾದ್ರೆ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ತೀವಿʼ ಎಂದು ನಿನ್ನೆಯ ಶಾಸಕರ ಸಭೆಯಲ್ಲಿ ಶಾಸಕರಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.