ಬೆಂಗಳೂರು: ಕಾವೇರಿ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಆಗ್ರಹಿಸಿ ದೆಹಲಿಯ ಜಂತರ್-ಮಂಥರ್‌ನಲ್ಲಿ ನಾರಾಯಣ ಗೌಡ ನೇತೃತ್ವದ ಕರ್ನಾಟಕ ರಕ್ಷಣಾ ವೇದಿಕೆಯಿಂದ ಇಂದು ಧರಣಿ ನಡೆಯಲಿದೆ. ಇದರೊಂದಿಗೆ ರಾಜ್ಯದ ಇಂದಿನ ಇನ್ನಷ್ಟು ಪ್ರಮುಖ ಸುದ್ದಿಗಳನ್ನು (Karnataka live news) ತಿಳಿಯಲು ಇಲ್ಲಿ ಗಮನಿಸಿ.
ಕ್ಲೀನರ್ ಆದ ಬಸ್ ಡ್ರೈವರ್! ಟೋಲ್ ಬಳಿ ನಿಂತಿದ್ದ ಕಾರಿಗೆ ಹಿಂಬದಿಯಿಂದ ಡಿಕ್ಕಿ!
ಬೆಂಗಳೂರು ಗ್ರಾಮಾಂತರದ ದೇವನಹಳ್ಳಿ ಹೊರವಲಯದ ಟೋಲ್ ಪ್ಲಾಜಾದಲ್ಲಿ ಖಾಸಗಿ ಬಸ್‌ವೊಂದು ಕಾರಿಗೆ (Road Accident) ಡಿಕ್ಕಿ ಹೊಡೆದಿದೆ. ಡ್ರೈವರ್ ಬದಲು ಕ್ಲಿನರ್ ಬಸ್ ಚಲಾಯಿಸಿದ್ದೇ ಈ ಅಪಘಾತಕ್ಕೆ ಕಾರಣ ಎನ್ನಲಾಗಿದೆ.
https://vistaranews.com/karnataka/bengaluru-rural/road-accident-hit-a-car-parked-near-the-toll-plaza-from-behind/483707.html
ಬೆಂಗಳೂರು ಚಲೋಗೆ ಕರೆ ಕೊಟ್ಟ ಅಲ್ಪಸಂಖ್ಯಾತ ಶಿಕ್ಷಕರು, ಉಪನ್ಯಾಸಕರು
ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಶಿಕ್ಷಕರ ಸಂಘವು (Teachers Protest ) ಸರ್ಕಾರದ ವಿರುದ್ಧ ಸಮರಕ್ಕೆ ಸಜ್ಜಾಗಿದೆ. ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಕ್ಟೋಬರ್ 20ರಂದು ಫ್ರೀಡಂ ಪಾರ್ಕ್‌ನಲ್ಲಿ ಬೆಂಗಳೂರು ಚಲೋ ಮೂಲಕ ಅನಿರ್ದಿಷ್ಟಾವಧಿ ಧರಣಿ ನಡೆಸಲು ಮುಂದಾಗಿದ್ದಾರೆ.
https://vistaranews.com/karnataka/bengaluru/teachers-protest-minority-teachers-association-protests-for-various-demands/483560.html
ಹಿಡಿಯಲು ಬಂದ ಹೆಡ್ ಕಾನ್ಸ್‌ಟೇಬಲ್‌ಗೆ ಚಾಕು ಹಾಕಿದ ಕಿರಾತಕ
ಬೆಂಗಳೂರಲ್ಲಿ (Bengaluru News) ಆರೋಪಿಯನ್ನು ಹಿಡಿಯಲು ಹೋದ ಪೊಲೀಸ್ ಸಿಬ್ಬಂದಿ ಹಲ್ಲೆಗೊಳಗಾಗಿದ್ದಾರೆ. ಸದಾಶಿವನಗರ ಠಾಣೆಯ (Sadashiva nagara police station) ಪೊಲೀಸ್ ಹೆಡ್ ಕಾನ್ಸ್‌ಟೇಬಲ್ ಸೈಯದ್ ಸಮೀವುಲ್ಲಾ ಎಂಬುವವರು ಚಾಕು ಇರಿತಕ್ಕೆ ಒಳಗಾದವರು.
https://vistaranews.com/karnataka/bengaluru/bengaluru-news-head-constable-attacked-when-he-went-to-catch-accused/483489.html
ವಾರಪೂರ್ತಿ ಬಿಸಿಲು ಇರಲಿದೆ, ಭಾರಿ ಮಳೆಯೂ ಬರಲಿದೆ!
ನೈರುತ್ಯ ಮುಂಗಾರು ದಕ್ಷಿಣ ಒಳನಾಡು ಹಾಗೂ ಕರಾವಳಿಯಲ್ಲಿ ಸಾಮಾನ್ಯವಾಗಿದ್ದು, ಉತ್ತರ ಒಳನಾಡಲ್ಲಿ ದುರ್ಬಲಗೊಂಡಿದೆ. ಅಕ್ಟೋಬರ್ 18ರಂದು ಕೊಡಗು ಹಾಗೂ ಮೈಸೂರಲ್ಲಿ ಪ್ರತ್ಯೇಕವಾಗಿ ಗುಡುಗು ಸಹಿತ ಭಾರಿ ಮಳೆಯಾಗುವ (Rain News) ಸಾಧ್ಯತೆ ಇದೆ. ಹೀಗಾಗಿ ಐಎಂಡಿ ಯೆಲ್ಲೋ ಅಲರ್ಟ್ (Karnataka Weather Forecast ) ನೀಡಿದೆ.
https://vistaranews.com/weather/karnataka-weather-to-be-sunny-and-also-theres-going-to-be-heavy-rain/483458.html