Site icon Vistara News

Karnataka Live News: BIETC Campus : ಕರ್ನಾಟಕ ಅತಿ ದೊಡ್ಡ ಏವಿಯೇಷನ್‌ ಹಬ್‌ ಆಗಲಿದೆ : ಮೋದಿ ಭವಿಷ್ಯ

modi

The Prime Minister, Shri Narendra Modi emplanes for Ahmedabad from Mumbai, after attending the commissioning ceremony of the Naval Submarine INS Kalvari, on December 14, 2017.

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ (PM Narendra Modi) ಇಂದು ಬೆಂಗಳೂರಿಗೆ ಭೇಟಿ ನೀಡಿ ನೂತನ ಬೋಯಿಂಗ್ ತಂತ್ರಜ್ಞಾನ ಕೇಂದ್ರವನ್ನು ಉದ್ಘಾಟನೆ ಮಾಡಲಿದ್ದಾರೆ. ಕಲಬುರಗಿಗೂ ಭೇಟಿ ನೀಡಿದ್ದಾರೆ. ಇದರೊಂದಿಗೆ ಇನ್ನಷ್ಟು ಮಹತ್ವದ ರಾಜ್ಯ ಸುದ್ದಿಗಳ ಕ್ಷಣಕ್ಷಣದ (Karnataka Live News) ಅಪ್‌ಡೇಟ್ಸ್ ಇಲ್ಲಿವೆ.

Prabhakar R

ಪಿಎಸ್‌ಐ ಪರೀಕ್ಷೆ ಪ್ರಶ್ನೆ ಪತ್ರಿಕೆ ಮತ್ತೊಮ್ಮೆ ಲೀಕ್‌; ಅಭ್ಯರ್ಥಿಗಳಿಂದ ಪ್ರತಿಭಟನೆ

ಈ ಹಿಂದೆ 545 ಪಿಎಸ್‌ಐ ಹುದ್ದೆಗಳ ನೇಮಕಾತಿಯಲ್ಲಿ ಭಾರಿ ಅಕ್ರಮ (PSI Exam Scam) ನಡೆದ ಹಿನ್ನೆಲೆಯಲ್ಲಿ ಮರು ಪರೀಕ್ಷೆ ನಡೆಸಲಾಗುತ್ತಿದೆ. ಜ. 23ರಂದು ಮರು ಪರೀಕ್ಷೆ ನಡೆಯುವುದರಿಂದ ಅಭ್ಯರ್ಥಿಗಳು ಅಂತಿಮ ಹಂತದ ಸಿದ್ಧತೆಯಲ್ಲಿದ್ದಾರೆ. ಆದರೆ, ಇದೀಗ ಪಿಎಸ್‌ಐ ಪರೀಕ್ಷೆ ಪ್ರಶ್ನೆ ಪತ್ರಿಕೆ ಮತ್ತೊಮ್ಮೆ ಸೋರಿಕೆಯಾಗಿದೆ (PSI Exam Question Paper Leak) ಎಂಬ ಗಂಭೀರ ಆರೋಪ ಕೇಳಿಬಂದಿದೆ. ಪಿಎಸ್ಐ, ವಾಣಿಜ್ಯ ತೆರಿಗೆ ಪರಿವೀಕ್ಷಕರು (ಸಿಟಿಐ) ಪರೀಕ್ಷೆ ಪತ್ರಿಕೆ ಸೋರಿಕೆ ಆಗಿದೆ ಎಂದು ಆಕ್ರೋಶ ಹೊರಹಾಕಿರುವ ಅಭ್ಯರ್ಥಿಗಳು, ಚಂದ್ರ ಲೇಔಟ್ ಪೊಲೀಸ್ ಠಾಣೆ ಎದುರು ಶುಕ್ರವಾರ ರಾತ್ರಿ ಪ್ರತಿಭಟನೆ ನಡೆಸಿದ್ದಾರೆ.

PSI Exam Scam: ಪಿಎಸ್‌ಐ ಪರೀಕ್ಷೆ ಪ್ರಶ್ನೆ ಪತ್ರಿಕೆ ಮತ್ತೊಮ್ಮೆ ಲೀಕ್‌; ಅಭ್ಯರ್ಥಿಗಳಿಂದ ಪ್ರತಿಭಟನೆ

Deepa S

Road Accident : ಅಜ್ಜಿ ಶವ ಕೊಂಡೊಯ್ಯುವಾಗ ಕಾರಿನ ಟೈರ್‌ ಸ್ಫೋಟ; ಮೂವರು ಮೃತ್ಯು, ಮೂವರು ಗಂಭೀರ

ಆ ಕುಟುಂಬದ ಸದಸ್ಯರು ಮನೆಯ ಹಿರಿಜೀವ ಕಳೆದುಕೊಂಡ ದುಃಖದಲ್ಲಿದ್ದರು. ಬೆಂಗಳೂರಿನಿಂದ ಸಿರುಗುಪ್ಪಕ್ಕೆ ಅಜ್ಜಿಯ ಮೃತದೇಹವನ್ನು ಕೊಂಡೊಯ್ಯುತ್ತಿದ್ದರು. ಈ ವೇಳೆ ಕಾರಿನ ಟೈಯರ್‌ ಸ್ಫೋಟಗೊಂಡು (Road Accident) ಪಲ್ಟಿಯಾಗಿದೆ. ವಿಧಿ ಅದೆಷ್ಟು ಕ್ರೂರಿ ಅಂದರೆ ಸ್ಥಳದಲ್ಲೇ ಮೂವರು ಮೃತಪಟ್ಟರೆ, ಮೂವರು ಗಂಭೀರ ಗಾಯಗೊಂಡಿದ್ದಾರೆ.

Road Accident : ಅಜ್ಜಿ ಶವ ಕೊಂಡೊಯ್ಯುವಾಗ ಕಾರಿನ ಟೈರ್‌ ಸ್ಫೋಟ; ಮೂವರು ಮೃತ್ಯು, ನಾಲ್ವರು ಗಂಭೀರ
Deepa S

Electric shock : ಕಬ್ಬಿನ ಗದ್ದೆಯಲ್ಲಿ ಕಟ್‌ ಆಗಿ ಬಿದ್ದ ವಿದ್ಯುತ್‌ ತಂತಿ ತುಳಿದು ಕೃಷಿ ಕಾರ್ಮಿಕ ಸಾವು

ಹೊಲದಲ್ಲಿ ವಿದ್ಯುತ್ ಸ್ಪರ್ಶಿಸಿ ಕೃಷಿ ಕಾರ್ಮಿಕ (Electric shock) ದಾರುಣವಾಗಿ ಮೃತಪಟ್ಟಿರುವ ಘಟನೆ ಧಾರವಾಡ ಜಿಲ್ಲೆಯ ಕಲಘಟಗಿಯಲ್ಲಿ ನಡೆದಿದೆ. ಮಾದೇವಪ್ಪ ಹಂಗರಕಿ (62) ಮೃತ ಕೃಷಿ ಕಾರ್ಮಿಕ.

Electric shock : ಕಬ್ಬಿನ ಗದ್ದೆಯಲ್ಲಿ ಕಟ್‌ ಆಗಿ ಬಿದ್ದ ವಿದ್ಯುತ್‌ ತಂತಿ ತುಳಿದು ಕೃಷಿ ಕಾರ್ಮಿಕ ಸಾವು
Deepa S

Karnataka weather : ಮತ್ತೆ ಶುರುವಾಗುತ್ತಾ ಮಳೆ ಅಬ್ಬರ? ವಾರಾಂತ್ಯದಲ್ಲಿ ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

ಮುಂದಿನ 48 ಗಂಟೆಯಲ್ಲಿ ರಾಜ್ಯಾದ್ಯಂತ ಒಣ ಹವೆ (Dry Weather) ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ (Karnataka weather Forecast) ಮುನ್ಸೂಚನೆಯನ್ನು ನೀಡಿದೆ. ಪೂರ್ವ ದಿಕ್ಕಿನಿಂದ ಬೀಸುತ್ತಿರುವ ಗಾಳಿಯಲ್ಲಿ ಟ್ರಫ್‌ವೊಂದು ಎದ್ದಿದೆ. ಇದರ ಪ್ರಭಾವ ಇದ್ದರೂ ರಾಜ್ಯದಲ್ಲಿ ಯಾವುದೇ ಮಳೆಯಾಗುವ ಸಾಧ್ಯತೆ (Rain News) ಇಲ್ಲ. ಬದಲಿಗೆ ಮುಂದಿನ ದಿನಗಳು ಶುಷ್ಕ ವಾತಾವರಣವೇ ಇರಲಿದೆ ಎಂದು ತಜ್ಞರು ಮಾಹಿತಿ ನೀಡಿದ್ದಾರೆ.

Karnataka weather : ಮತ್ತೆ ಶುರುವಾಗುತ್ತಾ ಮಳೆ ಅಬ್ಬರ? ವಾರಾಂತ್ಯದಲ್ಲಿ ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ
Krishna Bhat

BIETC Campus : ಕರ್ನಾಟಕ ಅತಿ ದೊಡ್ಡ ಏವಿಯೇಷನ್‌ ಹಬ್‌ ಆಗಲಿದೆ : ಮೋದಿ ಭವಿಷ್ಯ
Exit mobile version