Site icon Vistara News

Karnataka Live News: ಜೆಡಿಎಸ್‌ ರಾಜ್ಯಾಧ್ಯಕ್ಷ ಸ್ಥಾನದಿಂದ ಸಿ.ಎಂ ಇಬ್ರಾಹಿಂ ಔಟ್‌, ಎಚ್‌.ಡಿ ಕುಮಾರಸ್ವಾಮಿಗೆ ಹೊಣೆ

CM Ibrahim HD Devegowda HD Kumaraswamy

ಬೆಂಗಳೂರು: ಜೆಡಿಎಸ್‌ ರಾಜ್ಯಾಧ್ಯಕ್ಷ ಸ್ಥಾನದಿಂದ ಸಿ.ಎಂ. ಇಬ್ರಾಹಿಂ ಅವರನ್ನು ಕಿತ್ತು ಹಾಕಲಾಗಿದೆ. ಎಚ್‌.ಡಿ ಕುಮಾರಸ್ವಾಮಿ ಅವರು ಇನ್ನು ಮುಂದೆ ಹೊಸ ರಾಜ್ಯಾಧ್ಯಕ್ಷರಾಗಿ ಜವಾಬ್ದಾರಿ ನಿರ್ವಹಿಸಲಿದ್ದಾರೆ. ಇದನ್ನು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಘೋಷಿಸಿದರು. ಇದರ ಜತೆಗೆ ರಾಜ್ಯದ ಇಂದಿನ ಇನ್ನಷ್ಟು ಪ್ರಮುಖ ಸುದ್ದಿಗಳು (Karnataka Live News) ಇಲ್ಲಿ ಕಾಣಿಸಿಕೊಳ್ಳಲಿವೆ.

Deepa S

ಬೆಂಗಳೂರಾಗಲಿದೆ ಇವಿ ಹಬ್‌; ಮಾಲೂರಲ್ಲಿ NSureನಿಂದ ಶೀಘ್ರ ಘಟಕ ಆರಂಭ

ಬೆಂಗಳೂರಿನ ಎನ್‌ಶ್ಯೂರ್‌ ರಿಲಯೇಬಲ್ ಪವರ್ ಸೊಲ್ಯೂಶನ್ ಲಿಮಿಟೆಡ್ (NSure) ಭಾರತದಲ್ಲಿ ಲಿಥಿಯಂ-ಅಯಾನ್ ಸೆಲ್ ತಯಾರಕರ ಸಾಲಿಗೆ ಸೇರಲಿದೆ. ಬೆಂಗಳೂರಿನ ಸಮೀಪದ ಮಾಲೂರು ಘಟಕದಲ್ಲಿ ಶೀಘ್ರದಲ್ಲೇ ಪ್ರಾಯೋಗಿಕ ಉತ್ಪಾದನೆ ಪ್ರಾರಂಭಿಸಲಿದೆ.

http://vistaranews.com/karnataka/bengaluru/bengaluru-to-become-ev-hub-nsure-plant-to-be-launched-in-malur/484871.html

Deepa S

ಹಿಂಗಾರು ಪ್ರವೇಶ ಇನ್ನೆರಡು ದಿನ ತಡ; ನಾಳೆ-ನಾಳಿಂದು ಹಗುರ ಮಳೆಯಷ್ಟೇ

ಮುಂದಿನ 48 ಗಂಟೆಯಲ್ಲಿ ಕರಾವಳಿ, ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಹಗುರದಿಂದ ಮಳೆಯಾಗುವ (Karnataka weather Forecast) ಸಾಧ್ಯತೆ ಇದೆ. ಉತ್ತರ ಒಳನಾಡಿನಲ್ಲಿ ಒಣ ಹವೆ (Dry weather) ಇರಲಿದೆ.

http://vistaranews.com/weather/karnataka-weather-just-light-rain-in-karnataka/484815.html

Deepa S

ಮಿಡ್‌ ನೈಟ್‌ ಗೋವು ಕಳ್ಳರನ್ನು ಚೇಸ್‌ ಮಾಡಿದ ಗ್ರಾಮಸ್ಥರು!

ರಾತ್ರಿಯಾಗುವುದನ್ನೇ ಕಾದು ಕುಳಿತಿದ್ದ ಆಗಂತಕರು ಟಿಟಿ ವಾಹನದಲ್ಲಿ ಬರುತ್ತಿದ್ದರು. ಕ್ಷಣಾರ್ಧದಲ್ಲಿ ಜಾನುವಾರ ಕದ್ದು ಪರಾರಿ ಆಗುತ್ತಿದ್ದರು. ಇದೀಗ ಗ್ರಾಮಸ್ಥರೇ ಕಾರ್ಯಾಚರಣೆ ನಡೆಸಿ ಗೋವುಗಳನ್ನು ರಕ್ಷಿಸಿದ್ದಾರೆ.

http://vistaranews.com/karnataka/bengaluru-rural/cow-smugglers-villagers-chase-midnight-cow-thieves/484778.html

Deepa S

ಫಾರ್ಮಸಿಗಳಿಗೆ ನುಗ್ಗಿ ದರೋಡೆ ಮಾಡುತ್ತಿದ್ದವನು ಅರೆಸ್ಟ್‌

ನಗರದ ಫಾರ್ಮಸಿಯನ್ನೇ ಗುರಿಯಾಗಿಸಿಕೊಂಡು ದರೋಡೆ (Robbery Case) ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರು ನಗರದ 13 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದರೋಡೆ ಮಾಡಿದ್ದ ಜೆ.ಸಿ.ನಗರ ನಿವಾಸಿ ಸಮಿ ಉದ್ದಿನ್ ಎಂಬಾತನನ್ನು ಬಂಧಿಸಿದ್ದಾರೆ.

http://vistaranews.com/karnataka/bengaluru/theft-case-man-arrested-for-breaking-into-pharmacies-robbing-them/484658.html

Deepa S

ತಮ್ಮನ ಲವ್‌ ಅಫೆರ್‌ಗೆ ಬೇಸತ್ತು ಅಣ್ಣ ಆತ್ಮಹತ್ಯೆಗೆ ಯತ್ನ!

ಅಣ್ಣನೊಬ್ಬ ಮೊಬೈಲ್ ಟವರ್ ಏರಿ ಆತ್ಮಹತ್ಯೆಗೆ (Self harming) ಯತ್ನಿಸಿದ ಘಟನೆ ರಾಯಚೂರು ಜಿಲ್ಲೆಯ (Raichur News) ಮಾನ್ವಿ ಪಟ್ಟಣದಲ್ಲಿ‌ ನಡೆದಿದೆ. ಅಮ್ಜದ್ ಖಾನ್ ಆತ್ಮಹತ್ಯೆ ಯತ್ನಿಸಿದವರು.

http://vistaranews.com/karnataka/raichur/love-case-brother-attempts-suicide-over-younger-brothers-love-affair/484550.html

Exit mobile version