ಬೆಂಗಳೂರು: ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನದಿಂದ ಸಿ.ಎಂ. ಇಬ್ರಾಹಿಂ ಅವರನ್ನು ಕಿತ್ತು ಹಾಕಲಾಗಿದೆ. ಎಚ್.ಡಿ ಕುಮಾರಸ್ವಾಮಿ ಅವರು ಇನ್ನು ಮುಂದೆ ಹೊಸ ರಾಜ್ಯಾಧ್ಯಕ್ಷರಾಗಿ ಜವಾಬ್ದಾರಿ ನಿರ್ವಹಿಸಲಿದ್ದಾರೆ. ಇದನ್ನು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಘೋಷಿಸಿದರು. ಇದರ ಜತೆಗೆ ರಾಜ್ಯದ ಇಂದಿನ ಇನ್ನಷ್ಟು ಪ್ರಮುಖ ಸುದ್ದಿಗಳು (Karnataka Live News) ಇಲ್ಲಿ ಕಾಣಿಸಿಕೊಳ್ಳಲಿವೆ.
ಫ್ರೀ ಸೈಟ್ ವದಂತಿ; ಗುಡ್ಡ ಏರಿ ಕುಳಿತ ಮಂದಿ
ನಮ್ಮದೊಂದು ಸ್ವಂತ ಸೂರು, ಇಲ್ಲ ಚಿಕ್ಕದಾದ ಭೂಮಿ ಇರಬೇಕೆಂದು ಹಲವರ ಕನಸಾಗಿರುತ್ತದೆ. ಕೆಲವರು ಕನಸನ್ನು ನನಸು ಮಾಡಿಕೊಳ್ಳುತ್ತಾರೆ. ಆದರೆ ರಾಯಚೂರು (Raichur News) ನಗರದ ವಾರ್ಡ್-28 ರ ಆಶ್ರಯ ಕಾಲೋನಿ ಬೆಟ್ಟದಲ್ಲಿ ಫ್ರೀ ಸೈಟ್ ವದಂತಿಗೆ (Free Site) ಕೆಲಸ ಕಾರ್ಯ ಬಿಟ್ಟು ಜನರೆಲ್ಲರೂ ಗುಡ್ದ ಏರಿ ಕುಳಿತ ಘಟನೆ ನಡೆದಿದೆ.
https://vistaranews.com/karnataka/raichur/free-site-free-site-rumor-people-sitting-on-the-hill/484496.html
ಮಡ್‌ಪೈಪ್ ಕೆಫೆ ಅಗ್ನಿ ದುರಂತ;ಎಲ್ಲ ರೆಸ್ಟೋರೆಂಟ್‌ಗಳ ತಪಾಸಣೆಗೆ ಸೂಚನೆ- ಜಿ ಪರಮೇಶ್ವರ್
ಬೆಂಗಳೂರಲ್ಲಿ ಸಾಲು ಸಾಲು ಅಗ್ನಿ ಅವಘಡಗಳು (Fire Accident) ಸಂಭವಿಸುತ್ತಿದೆ. ಅತ್ತಿಬೆಲೆ ಪಟಾಕಿ ದುರಂತ ಮರೆಯಾಗುವ ಮುನ್ನವೇ ಕೋರಮಂಗಲದ ಮಡ್‌ಪೈಪ್ ಕೆಫೆಯಲ್ಲಿ (Mudpipe cafe) ಸಿಲಿಂಡರ್‌ಗಳು ಸ್ಫೋಟಗೊಂದಿತ್ತು. ಕೆಫೆಯಲ್ಲಿ ಅಕ್ರಮವಾಗಿ ಹುಕ್ಕಾಬಾರ್ ನಡೆಸಲಾಗುತ್ತಿತ್ತು ಎಂಬ ಆರೋಪವು ಕೇಳಿ ಬಂದಿದೆ. ಅವಘಡ ನಡೆದ ಸ್ಥಳಕ್ಕೆ ಗೃಹಸಚಿವ ಜಿ.ಪರಮೇಶ್ವರ್ (G.Parameshwar) ಭೇಟಿ ನೀಡಿ ತಪಾಸಣೆ ನಡೆಸಿದರು.
https://vistaranews.com/karnataka/bengaluru/fire-accident-g-parameshwara-instructs-all-restaurants-to-be-inspected/484404.html
ರಾಜ್ಯದಲ್ಲಿ ಮುಂದುವರಿದ ಮಳೆಯ ಜೂಟಾಟ!
ನೈರುತ್ಯ ಮುಂಗಾರು ದುರ್ಬಲಗೊಂಡಿದೆ. ಮಳೆಯ ಕಣ್ಣಾಮುಚ್ಚಾಲೆ ಆಟಕ್ಕೆ ರೈತರು ಕಂಗೆಟ್ಟು ಹೋಗಿದ್ದಾರೆ. ಈ ನಡುವೆ ಪ್ರತ್ಯೇಕ ಕಡೆಗಳಲ್ಲಿ ಮಳೆಯಾಗುತ್ತಿರುವುದು (Karnataka Weather Forecast) ಸಮಾಧಾನ ತಂದಿದೆ. ಮುಂದಿನ 24 ಗಂಟೆಯಲ್ಲಿ ಕರಾವಳಿಯ ಕೆಲವು ಕಡೆಗಳಲ್ಲಿ ಗುಡುಗು ಮಿಂಚು ಸಹಿತ ಭಾರಿ ಮಳೆಯಾಗುವ (Rain News) ಸಾಧ್ಯತೆ ಇದೆ.
Karnataka Weather : ರಾಜ್ಯದಲ್ಲಿ ಮುಂದುವರಿದ ಮಳೆಯ ಜೂಟಾಟ!
ಒಡಲಿನಲ್ಲೇ ಜೀವ ಬಿಟ್ಟ ಕೂಸು! ವೈದ್ಯರ ನಿರ್ಲಕ್ಷ್ಯಕ್ಕೆ ಪೋಷಕರ ಆಕ್ರಂದನ
ಆ ಕುಟುಂಬದವರು ಮನೆಗೆ ಪುಟ್ಟದೊಂದು ಕೂಸು ಬರುವ ನಿರೀಕ್ಷೆಯಲ್ಲಿದ್ದರು. ಆ ಮಹಿಳೆ 9 ತಿಂಗಳ ಕಾಲ ಮಗುವೊಂದು ಒಡಲಿನಲ್ಲಿ ಜೋಪಾನ ಮಾಡಿದ್ದರು. ಒಡಲಿನಿಂದ ಇನ್ನೇನು ಮಡಲಿಗೆ ಬರುವ ಖುಷಿಯಲ್ಲಿದ್ದ ಅವರಿಗೆ ಬರಸಿಡಿಲು ಬಡಿದಿತ್ತು. ಹೆರಿಗೆಗೆ ದಿನಾಂಕ ಹತ್ತಿರ ಬಂದ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ವೈದ್ಯರ ನಿರ್ಲಕ್ಷ್ಯಕ್ಕೆ ಹುಟ್ಟ ಬೇಕಾದ ಮಗು ತಾಯಿ ಹೊಟ್ಟೆಯಲ್ಲಿ ಮೃತಪಟ್ಟಿರುವ (Medical Negligence) ಆರೋಪವೊಂದು ಕೇಳಿ ಬಂದಿದೆ.
https://vistaranews.com/karnataka/koppala/child-dies-due-to-negligence-of-doctors-at-kushtagi-taluk-hospital/484345.html
ಡಿಕೆಶಿಗೆ ಮತ್ತೆ ಶುರುವಾಯಿತು ಸಿಬಿಐ ಕಂಟಕ
ಬೆಂಗಳೂರು: ಸಿಬಿಐ ತನಿಖೆ ರದ್ದು ಕೋರಿ ಡಿಕೆಶಿ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ತಿರಸ್ಕರಿಸಿದೆ. ಅಕ್ರಮ ಅಸ್ತಿಗೆ ಸಂಬಂಧಿಸಿ ಸಿಬಿಐ ತನಿಖೆಗೆ ಹೈಕೋರ್ಟ್ ಗ್ರೀನ್ ಸಿಗ್ನಲ್ ಕೊಟ್ಟಿದೆ. ಮೂರು ತಿಂಗಳ ಒಳಗೆ ತನಿಖೆ ಮುಗಿಸುವಂತೆ ಸಿಬಿಐಗೆ ಸೂಚನೆ ನೀಡಿದೆ. ಸಿಬಿಐ ತನಿಖೆ ಇನ್ನಷ್ಟು ಚುರುಕುಗೊಳಿಸಲಿದ್ದು, ಡಿಕೆಶಿ ಪಡೆದಿರುವ ಜಾಮೀನು ರದ್ದು ಕೋರಿ ಕೋರ್ಟ್ ಗೆ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ.