Site icon Vistara News

Karnataka live news: ಆ. 3ರಂದು ಮೋದಿ ಭೇಟಿಯಾಗಲಿರುವ ಸಿದ್ದರಾಮಯ್ಯ; ಕಾಂಗ್ರೆಸ್‌ ಸಭೆ ಜತೆಗೆ ಪ್ರಧಾನಿ ಮೀಟಿಂಗ್‌

karnataka live news

ಬೆಂಗಳೂರು: ನಂದಿನಿ ಹಾಲಿನ ಬೆಲೆ ಏರಿಕೆ ಇಂದಿನಿಂದ ಜಾರಿ, ದಶಪಥದಲ್ಲಿ ಬೈಕ್-‌ ರಿಕ್ಷಾ ಇತ್ಯಾದಿಗಳಿಗೆ ಇಂದಿನಿಂದ ನಿರ್ಬಂಧ ಸೇರಿದಂತೆ ರಾಜ್ಯದ ಇಂದಿನ ಪ್ರಮುಖ ಸುದ್ದಿ ಬೆಳವಣಿಗೆಗಳಿಗಾಗಿ (Karnataka live news) ಇಲ್ಲಿ ಗಮನಿಸಿ.

Prabhakar R

ಐಎಂಎ ಹಗರಣದಲ್ಲಿ ಐಪಿಎಸ್‌ ಅಧಿಕಾರಿ ಹೇಮಂತ್‌ ನಿಂಬಾಳ್ಕರ್‌ ಆರೋಪ ಮುಕ್ತ

ಐ ಮಾನಿಟರಿ ಅಡ್ವೈಸರಿ (ಐಎಂಎ) ಬಹುಕೋಟಿ ಹಗರಣದಲ್ಲಿ (IMA Scam) ಭಾಗಿಯಾದ ಆರೋಪಕ್ಕೆ ಗುರಿಯಾಗಿದ್ದ ಹಿರಿಯ ಐಪಿಎಸ್‌ ಅಧಿಕಾರಿ ಹೇಮಂತ್‌ ನಿಂಬಾಳ್ಕರ್‌ ಅವರು ಆರೋಪ ಮುಕ್ತರಾಗಿದ್ದಾರೆ. ಇವರ ಮೇಲಿನ ಆರೋಪ ಸಾಬೀತಾಗಿಲ್ಲ ಎಂಬ ತನಿಖಾಧಿಕಾರಿ ವರದಿ ಆಧರಿಸಿ ಇಲಾಖಾ ವಿಚಾರಣೆಯನ್ನು ಮುಕ್ತಾಯಗೊಳಿಸಿ ರಾಜ್ಯ ಸರ್ಕಾರವು ಆದೇಶ ಹೊರಡಿಸಿದೆ.

IMA Scam: ಐಎಂಎ ಹಗರಣದಲ್ಲಿ ಐಪಿಎಸ್‌ ಅಧಿಕಾರಿ ಹೇಮಂತ್‌ ನಿಂಬಾಳ್ಕರ್‌ ಆರೋಪ ಮುಕ್ತ
Deepa S

ಆ.4ಕ್ಕೆ ಲಾಲ್‌ಬಾಗ್‌ ಫ್ಲವರ್‌ ಶೋ; ಹೂವಲ್ಲಿ ಅರಳುವ ಕೆಂಗಲ್ ಹನುಮಂತಯ್ಯ

ಸಸ್ಯಕಾಶಿ ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನಕ್ಕೆ (lalbagh flower show 2023) ಸಜ್ಜಾಗಿದ್ದು, ಈ ಬಾರಿ ಬಗೆ ಬಗೆಯ ಹೂಗಳ ಮೂಲಕ ವಿಧಾನಸೌಧದ ನಿರ್ಮಾತೃ ಕೆಂಗಲ್ ಹನುಮಂತಯ್ಯರ (Kengal Hanumanthaiah) ಕಲಾಕೃತಿ ಸೃಷ್ಟಿಯಾಗಲಿದೆ. ಆಗಸ್ಟ್‌ 15ರ ಸ್ವಾತಂತ್ರ್ಯ ದಿನದ ಅಂಗವಾಗಿ ತೋಟಗಾರಿಕೆ ಇಲಾಖೆ 214ನೇ ಫಲಪುಷ್ಪ ಪ್ರದರ್ಶನ ಆಯೋಜಿಸುತ್ತಿದೆ. ಆಗಸ್ಟ್‌ 4 ರಿಂದ 15ರವರಗೆ ಒಟ್ಟು 12 ದಿನಗಳ ಕಾಲ ಫ್ಲವರ್‌ ಶೋ ನಡೆಯಲಿದೆ.

lalbagh flower show 2023 : ಆ.4ಕ್ಕೆ ಲಾಲ್‌ಬಾಗ್‌ ಫ್ಲವರ್‌ ಶೋ; ಹೂವಲ್ಲಿ ಅರಳುವ ಕೆಂಗಲ್ ಹನುಮಂತಯ್ಯ
Deepa S

ಕರಾವಳಿಯಲ್ಲಿ ನಾಳೆ ಗುಡುಗು ಸಹಿತ ವ್ಯಾಪಕ ಮಳೆ

ಕರ್ನಾಟಕ ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುವ (Rain News) ಸಾಧ್ಯತೆ ಇದೆ. ಮಲೆನಾಡು ಮತ್ತು ಉತ್ತರ ಒಳನಾಡಿನಲ್ಲಿ ಚದುರಿದಂತೆ ಮಧ್ಯಮ (Weather report) ಮಳೆಯಾಗಲಿದೆ. ದಕ್ಷಿಣ ಒಳನಾಡಿನಲ್ಲಿ ಲಘು ಮಳೆಯಾಗುವ ಸಾಧ್ಯತೆಯಿದೆ. ಜತೆಗೆ ರಾಜ್ಯದ ವಿವಿಧೆಡೆ ಗುಡುಗು ಸಹಿತ ಮಳೆಯಾಗುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ.

Weather Report : ಕರಾವಳಿಯಲ್ಲಿ ನಾಳೆ ಗುಡುಗು ಸಹಿತ ವ್ಯಾಪಕ ಮಳೆ
Deepa S

ಅಂಗಡಿ ಕೆಡವಲು ಹೋಗಿ ಪುರಾತನ ದೇಗುಲ ಬೀಳಿಸಿದ ಬಿಬಿಎಂಪಿ !

ದೇವಾಲಯದ ಬಳಿ ಒತ್ತುವರಿಯಾಗಿದೆ ಎಂಬ ನೆಪವೊಡ್ಡಿ ಮಂಗಳವಾರ ಬೆಳಗ್ಗೆ ಪಾಲಿಕೆಯ ಜೆಸಿಬಿ ಗರ್ಜಿಸಿತ್ತು. ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಎಸ್‌ಪಿ‌ ರೋಡ್‌ನ ಧರ್ಮರಾಯ ದೇವಸ್ಥಾನ (Temple demolition) ಪಕ್ಕದಲ್ಲಿರುವ ಜಲಕಂಠೇಶ್ವರ ದೇವಸ್ಥಾನದ ಗೋಡೆಯನ್ನು ಸ್ಥಳೀಯ ಪಾಲಿಕೆಯ ಅಧಿಕಾರಿಗಳು ತೆರವು ಮಾಡಿದ್ದಾರೆ.

Temple demolition : ಅಂಗಡಿ ಕೆಡವಲು ಹೋಗಿ ಪುರಾತನ ದೇಗುಲ ಬೀಳಿಸಿದ ಬಿಬಿಎಂಪಿ !
Krishna Bhat

CM Siddaramaiah : ಆ. 3ರಂದು ಮೋದಿ ಭೇಟಿಯಾಗಲಿರುವ ಸಿದ್ದರಾಮಯ್ಯ; ಕಾಂಗ್ರೆಸ್‌ ಸಭೆ ಜತೆಗೆ ಪ್ರಧಾನಿ ಮೀಟಿಂಗ್‌
Exit mobile version