ಬೆಂಗಳೂರು: ನಂದಿನಿ ಹಾಲಿನ ಬೆಲೆ ಏರಿಕೆ ಇಂದಿನಿಂದ ಜಾರಿ, ದಶಪಥದಲ್ಲಿ ಬೈಕ್- ರಿಕ್ಷಾ ಇತ್ಯಾದಿಗಳಿಗೆ ಇಂದಿನಿಂದ ನಿರ್ಬಂಧ ಸೇರಿದಂತೆ ರಾಜ್ಯದ ಇಂದಿನ ಪ್ರಮುಖ ಸುದ್ದಿ ಬೆಳವಣಿಗೆಗಳಿಗಾಗಿ (Karnataka live news) ಇಲ್ಲಿ ಗಮನಿಸಿ.
ಯಮ ಸ್ವರೂಪಿಯಾಗಿ ನುಗ್ಗಿ ಕೂಲಿ ಕಾರ್ಮಿಕರ ಮೇಲೆ ಹರಿದ ಕ್ಯಾಂಟರ್!
ಆನೇಕಲ್ ತಾಲೂಕಿನ ಹೆಬ್ಬಗೋಡಿ ಬಯೋಕಾನ್ ಕಂಪನಿ ಮುಂಭಾಗ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಾದಾಚಾರಿಗಳ ಮೇಲೆ ಕ್ಯಾಂಟರ್ (Road Accident) ಹರಿದಿದೆ. ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮನೋಜ್ ಕುಮಾರ್ (36) ಮತ್ತು ಆದೀಶ್ (33) ಮೃತ ದುರ್ದೈವಿಗಳು.
Road Accident : ಯಮ ಸ್ವರೂಪಿಯಾಗಿ ನುಗ್ಗಿ ಕೂಲಿ ಕಾರ್ಮಿಕರ ಮೇಲೆ ಹರಿದ ಕ್ಯಾಂಟರ್!
ಕಿಚ್ಚ ಫ್ಯಾನ್ ಬಳಿಕ ಅಪ್ಪು ಫ್ಯಾನ್ಸ್ ಸರದಿ; ಅಭಿಮಾನಿ ರಕ್ತದಲ್ಲಿ ಮೂಡಿದ ಪುನೀತ್!
ಕಿಚ್ಚ ಸುದೀಪ್ ಮಹಿಳಾ ಅಭಿಮಾನಿಯೊಬ್ಬರು ರಕ್ತದಲ್ಲಿ ಚಿತ್ರ ಬಿಡಿಸಿ ಹುಚ್ಚು ಪ್ರೀತಿಯನ್ನು ತೋರಿಸಿದ್ದರು, ಈಗ ಅಪ್ಪು ಅಭಿಮಾನಿಗಳ (Puneeth Rajkumar) ಸರದಿ. ಪುನೀತ್ ಫ್ಯಾನ್ಸ್‌ವೊಬ್ಬರು ತಮ್ಮ ರಕ್ತದಲ್ಲಿ ಚಿತ್ರವನ್ನು (blood photo frame) ಬಿಡಿಸಿದ್ದಾರೆ.
Puneeth Rajkumar : ಅಭಿಮಾನಿ ರಕ್ತದಲ್ಲಿ ಮೂಡಿದ ಅಪ್ಪು!
ಕೈಗೆ ಸಿಗದ ನಂದಿನಿ ಹಾಲು; ಪರಿಷ್ಕೃತ ದರ ಎಷ್ಟು?
ಕಾಂಗ್ರೆಸ್ ಸರ್ಕಾರದ ಉಚಿತ ಕೊಡುಗೆಗಳು ಸಿಕ್ಕ ಖುಷಿಯಲ್ಲಿದ್ದ ಜನತೆಗೆ ಈಗ ಅಗತ್ಯ ವಸ್ತುಗಳ ಬೆಲೆ ಏರಿಕೆಯು ತಲೆ ಬಿಸಿ ಆಗಿದೆ. ಕುಡಿಯುವ ಹಾಲಿನಿಂದ (Nandini Milk Price Hike) ಹಿಡಿದು ತಿನ್ನುವ ತರಕಾರಿವರೆಗೆ ರೇಟು ಏರಿಕೆ ಆಗಿದೆ. ಬಡವರು, ಮಧ್ಯಮ ವರ್ಗದವರಿಗೆ ಅಂತೂ ದರ ಏರಿಕೆಯು ಬಿಸಿ ತುಪ್ಪದಂತಾಗಿದೆ. ದರ ಏರಿಕೆ ಬಿಸಿಯಿಂದಾಗಿ ನುಂಗುವಂತಿಲ್ಲ, ಉಗುಳುವಂತಿಲ್ಲ ಎಂಬಂತಾಗಿದೆ. ಸದ್ಯ ಇಂದಿನಿಂದ ನಂದಿನಿ ಹಾಲಿನ ಪರಿಷ್ಕೃತ ದರ ಏರಿಕೆ ಆಗಿದೆ. ಸಾರ್ವಜನಿಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
Nandini Milk Price Hike : ಕೈಗೆ ಸಿಗದ ನಂದಿನಿ ಹಾಲು; ಪರಿಷ್ಕೃತ ದರ ಎಷ್ಟು?
ಮಳೆ ಜತೆಗೆ ಗುಡುಗು, ಸಿಡಿಲು, ಬೀಸಲಿದೆ ಬಿರುಗಾಳಿ
ರಾಜ್ಯದಲ್ಲಿ ಸದ್ಯ ಗಳಿಗೆಗೊಂದು ವಾತಾವರಣ ನಿರ್ಮಾಣವಾಗಿದೆ. ಒಮ್ಮೆ ಬಿಸಿಲು ಇದ್ದರೆ ಮತ್ತೊಮ್ಮೆ ಜಿಟಿ ಜಿಟಿ ಮಳೆಯೊಂದಿಗೆ ಥಂಡಿ ವಾತಾವರಣ (Weather report) ನಿರ್ಮಾಣವಾಗುತ್ತಿದೆ. ರಾಜ್ಯಾದ್ಯಂತ ಮಂಗಳವಾರ ಗುಡುಗು, ಸಿಡಿಲು ಸಹಿತ ಮಳೆಯಾಗುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ (Weather report) ನೀಡಿದೆ.
Weather Report : ಗಳಿಗೆಗೊಂದು ವಾತಾವರಣ; ಮಳೆ ಜತೆಗೆ ಗುಡುಗು, ಸಿಡಿಲು, ಬೀಸಲಿದೆ ಬಿರುಗಾಳಿ
ನಂದಿನಿ ಹಾಲಿನ ಬೆಲೆ ಏರಿಕೆ ಇಂದಿನಿಂದ ಜಾರಿ
ಬೆಂಗಳೂರು: ಇಂದಿನಿಂದ ನಂದಿನಿ ಹಾಲಿನ ಪ್ರತಿ ಲೀಟರ್ ಬೆಲೆಯಲ್ಲಿ 3 ರೂ. ಹೆಚ್ಚಳವಾಗಿದೆ. ಎಲ್ಲ ಬಗೆಯ ಹಾಲಿಗೂ ದರ ಏರಿಕೆಯಾಗಿದ್ದು, ಪ್ರತಿ ಲೀಟರ್ ಮೊಸರಿಗೂ 3 ರೂ. ಹೆಚ್ಚಳವಾಗಿದೆ.