ಬೆಂಗಳೂರು: ರಾಜಧಾನಿ ನಗರದ ಹಲವು ಶಾಲೆಗಳಿಗೆ ಹಾಗೂ ಬೆಂಗಳೂರು ಗ್ರಾಮಾಂತರ ಪ್ರದೇಶದ ಹಲವು ಶಾಲೆಗಳಿಗೆ ಬಾಂಬ್ ಬೆದರಿಕೆ ಕರೆ ಬಂದಿದೆ. ಸದ್ಯ ಎಲ್ಲ ಕಡೆ ಮಕ್ಕಳನ್ನು ಹೊರಗೆ ಕಳಿಸಿ ತಪಾಸಣೆ ನಡೆಸಲಾಗುತ್ತಿದೆ. ರಾಜ್ಯದ ಕ್ಷಣಕ್ಷಣದ ಸುದ್ದಿ ಬೆಳವಣಿಗೆಗಳನ್ನು (Karnataka Live News) ತಿಳಿಯಲು ಇಲ್ಲಿ ನೋಡಿ.
ಮೈಸೂರಲ್ಲಿ ಮತ್ತೆ ಹುಲಿ ಕಾಟ; ಈ ಗ್ರಾಮದವರು ಹುಷಾರು!
ಕುಂತರೂ ನಿಂತರೂ ಕಾಡು ಪ್ರಾಣಿಗಳ ಭೀತಿ (Operation Tiger) ಹೆಚ್ಚಾಗಿದೆ. ಮೈಸೂರಲ್ಲಿ ರೈತ ಮಹಿಳೆಯನ್ನು ಬಲಿ ಪಡೆದಿದ್ದ ಹುಲಿಯನ್ನು ಕಾರ್ಯಾಚರಣೆ ನಡೆಸಿ ಸೆರೆಯಿಡಲಾಗಿತ್ತು.ಇದೀಗ ಮತ್ತೊಂದು ಹುಲಿ ಪ್ರತ್ಯಕ್ಷಗೊಂಡಿದ್ದು, ಜನರ ನಿದ್ದೆಗೆಡಿಸಿದೆ.
Operation Tiger : ಮೈಸೂರಲ್ಲಿ ಮತ್ತೆ ಹುಲಿ ಕಾಟ; ಈ ಗ್ರಾಮದವರು ಹುಷಾರು!
ಮಂಕಿ ಕ್ಯಾಪ್ ಧರಿಸಿ ಮಾರಣಾಂತಿಕ ಹಲ್ಲೆ; ಆಸ್ಪತ್ರೆ ಸೇರಿದ ಬಿಜೆಪಿ ಜಿಲ್ಲಾ ಕಾರ್ಯದರ್ಶಿ
ಮಂಕಿ ಕ್ಯಾಪ್ ಧರಿಸಿ ಮಾರಕಾಸ್ತ್ರದೊಂದಿಗೆ ಮನೆಗೆ ನುಗ್ಗಿದ ಹಂತಕನೊಬ್ಬ ಕೊಲೆಗೆ ಯತ್ನಿಸಿ ಪರಾರಿ ಆಗಿದ್ದಾನೆ. ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಪ್ರಾಣಾಪಾಯದಿಂದ ಬಚಾವ್ ಆಗಿದ್ದಾರೆ. ಕಳೆದ ರಾತ್ರಿ (ನ.30) ನಾಗರಹಳ್ಳಿ ಗ್ರಾಮದ ಬಿಜೆಪಿ ಜಿಲ್ಲಾ ಕಚೇರಿ ಕಾರ್ಯದರ್ಶಿಯ ಮೇಲೆ ಹಲ್ಲೆ (assault Case) ನಡೆದಿದೆ. ಜಿಲ್ಲಾ ಕಾರ್ಯದರ್ಶಿ ದುರ್ಗೇಶ್ ಹಲ್ಲೆಗೊಳಗಾದವರು. ನಾಗರಹಳ್ಳಿಯ ಅವರ ಮನೆಗೆ ನುಗ್ಗಿದ ಕಿರಾತಕ ಮನಬಂದಂತೆ ಥಳಿಸಿದ್ದಾನೆ.
Assault Case : ಮಂಕಿ ಕ್ಯಾಪ್ ಧರಿಸಿ ಮಾರಣಾಂತಿಕ ಹಲ್ಲೆ; ಆಸ್ಪತ್ರೆ ಸೇರಿದ ಬಿಜೆಪಿ ಜಿಲ್ಲಾ ಕಾರ್ಯದರ್ಶಿ!
ತಂಗಿ ಮಗನನ್ನೇ ಕೊಂದು ಹೂತು ಹಾಕಿದ ದೊಡ್ಡಮ್ಮ!
6 ವರ್ಷದ ಗಂಡು ಮಗುವನ್ನು ಆಕೆಯ ದೊಡ್ಡಮ್ಮಳೇ ಕೊಂದು ಹೂತು ಹಾಕಿದ (Murder Case) ಘಟನೆ ಚಿಕ್ಕಬಳ್ಳಾಪುರದ ಮುತಕದಹಳ್ಳಿ ಗ್ರಾಮದ ಮಾವಿನ ತೋಪಿನಲ್ಲಿ ನಡೆದಿದೆ.
Murder Case : ತಂಗಿ ಮಗನನ್ನೇ ಕೊಂದು ಹೂತು ಹಾಕಿದ ದೊಡ್ಡಮ್ಮ!
R Subbalakshmi: ಸುಶಾಂತ್ ಸಿಂಗ್ ಸಿನಿಮಾದಲ್ಲಿ ಅಜ್ಜಿಯಾಗಿ ನಟಿಸಿದ್ದ ಆರ್ ಸುಬ್ಬಲಕ್ಷ್ಮಿ ಇನ್ನಿಲ್ಲ!
ಖ್ಯಾತ ಹಿರಿಯ ನಟಿ, ಮಲಯಾಳಂ ನಟಿ ಥಾರಾ ಕಲ್ಯಾಣ್ ಅವರ ತಾಯಿ ಆರ್ ಸುಬ್ಬಲಕ್ಷ್ಮಿ (R Subbalakshmi) ನವೆಂಬರ್ 30ರಂದು ಕೊಚ್ಚಿಯಲ್ಲಿ ನಿಧನರಾಗಿದ್ದಾರೆ. ಆರ್ ಸುಬ್ಬಲಕ್ಷ್ಮಿ ಅವರಿಗೆ 87 ವರ್ಷ ವಯಸ್ಸಾಗಿತ್ತು. ನಿಧನಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ. ಅಂತ್ಯಕ್ರಿಯೆಯ ಬಗ್ಗೆ ಕುಟುಂಬ ಇನ್ನಷ್ಟೇ ಮಾಹಿತಿ ಹಂಚಿಕೊಳ್ಳಬೇಕಿದೆ. ‘ದಿಲ್ ಬೆಚಾರ’ದಲ್ಲಿ ಸುಶಾಂತ್ ಸಿಂಗ್ ರಜಪೂತ್ ಅವರ ಅಜ್ಜಿಯಾಗಿ ನಟಿಸಿದ್ದರು.