ಬೆಂಗಳೂರು: ರಾಜಧಾನಿ ನಗರದ ಹಲವು ಶಾಲೆಗಳಿಗೆ ಹಾಗೂ ಬೆಂಗಳೂರು ಗ್ರಾಮಾಂತರ ಪ್ರದೇಶದ ಹಲವು ಶಾಲೆಗಳಿಗೆ ಬಾಂಬ್ ಬೆದರಿಕೆ ಕರೆ ಬಂದಿದೆ. ಸದ್ಯ ಎಲ್ಲ ಕಡೆ ಮಕ್ಕಳನ್ನು ಹೊರಗೆ ಕಳಿಸಿ ತಪಾಸಣೆ ನಡೆಸಲಾಗುತ್ತಿದೆ. ರಾಜ್ಯದ ಕ್ಷಣಕ್ಷಣದ ಸುದ್ದಿ ಬೆಳವಣಿಗೆಗಳನ್ನು (Karnataka Live News) ತಿಳಿಯಲು ಇಲ್ಲಿ ನೋಡಿ.
ಆನೆಕಲ್‌ನಲ್ಲೂ ಬಾಂಬ್ ಬೆದರಿಕೆ
ಆನೇಕಲ್: ತಾಲೂಕಿನ ಹಲವು ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ ಹಾಕಲಾಗಿದೆ. ಶ್ವಾನದಳ, ಬಾಂಬ್ ಸ್ಕ್ವಾಡ್ ಸೇರಿದಂತೆ ಪೊಲೀಸರಿಂದ ಶೋಧ ನಡೆದಿದೆ.
ಶಾಲೆಗಳಿಗೆ ಬಾಂಬ್ ಬೆದರಿಕೆ
ಬೆಂಗಳೂರು: ರಾಜಧಾನಿಯ ಬಸವೇಶ್ವರನಗರದಲ್ಲಿರುವ ನ್ಯಾಷನಲ್ ಅಕಾಡಮಿ ಸ್ಕೂಲ್ ಹಾಗೂ ಸುತ್ತ ಮುತ್ತ ಇರುವ ಅನೇಕ ಶಾಲೆಗಳಿಗೆ ಬಾಂಬ್ ಬೆದರಿಕೆ ಕರೆ ಬಂದಿದೆ. ಈಮೇಲ್ ಮೂಲಕ ಕರೆ ಬಂದಿದ್ದು, ಸ್ಥಳಕ್ಕೆ ಪೊಲೀಸರು ಹಾಗೂ ಬಾಂಬ್ ಸ್ಕ್ವಾಡ್ ದೌಡಾಯಿಸಿದ್ದಾರೆ. ಮಕ್ಕಳನ್ನು ಹೊರಗೆ ಕಳಿಸಿ ತಪಾಸಣೆ ನಡೆಸಲಾಗುತ್ತಿದೆ.