Site icon Vistara News

Karnataka Live News: ಇನ್ನು ಮಾಸ್ಕ್‌ ಧರಿಸಿ ಬಸ್‌ನಲ್ಲಿ ಪ್ರಯಾಣಿಸಿ: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ

karnataka live news kannada today december 4

ಬೆಂಗಳೂರು: ರಾಜಧಾನಿಯಲ್ಲಿರುವ ಮುಖ್ಯಮಂತ್ರಿ ಸಿ‌ದ್ದರಾಮಯ್ಯ ಅವರಿಂದ ಇಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಭೇಟಿ, ಕೇಂದ್ರ ಆರೋಗ್ಯ ಸಚಿವರಿಂದ ಕೋವಿಡ್‌ ಕುರಿತು ಮಹತ್ವದ ಸಭೆ ಸೇರಿದಂತೆ ರಾಜ್ಯದ ಇಂದಿನ ಪ್ರಮುಖ ರಾಜಕೀಯ ಘಟನೆಗಳು, ಸಾಮಾಜಿಕ, ಸಾಂಸ್ಕೃತಿಕ ಬೆಳವಣಿಗೆಗಳ ಕ್ಷಣಕ್ಷಣದ ಅಪ್‌ಡೇಟ್‌ (Karnataka Live News) ಇಲ್ಲಿ ಗಮನಿಸಿ.

Adarsha Anche

COVID Subvariant JN1: ರಾಜ್ಯದಲ್ಲಿ ರೂಪಾಂತರ ತಳಿ ಕೊರೊನಾಗೆ ಮೊದಲ ಬಲಿ!

ಕೋವಿಡ್‌ ಭಾದಿತರಾಗಿದ್ದ 64 ವರ್ಷದ ಪುರುಷರೊಬ್ಬರು ಮೃತಪಟ್ಟಿದ್ದಾರೆ. ಅವರು ಚಾಮರಾಜನಗರ ನಿವಾಸಿಯಾಗಿದ್ದರು. ಅವರನ್ನು ಬೆಂಗಳೂರಿನ ಮಲ್ಲಿಗೆ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅಲ್ಲದೆ, ಆ ವ್ಯಕ್ತಿಯು ಟಿಬಿ, ಹೃದಯ ಸಮಸ್ಯೆ ಹಾಗೂ ಅಸ್ತಮಾಗಳಿಂದ ಬಳಲುತ್ತಿದ್ದರು ಎಂದು ಸಚಿವ ದಿನೇಶ್‌ ಗುಂಡೂರಾವ್‌ ಮಾಹಿತಿ ನೀಡಿದ್ದಾರೆ.

https://vistaranews.com/lifestyle/health/first-victim-of-covid-subvariant-jn1-in-karnataka/536647.html

Harish Kera

ಕನ್ನಡ ಧ್ವಜ ತೆರವು ಮಾಡಲು ಒತ್ತಾಯಿಸಿ ಥಳಿತ

ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಅಂಕಲಿ ಗ್ರಾಮದಲ್ಲಿ ಕನ್ನಡ ಧ್ವಜ ಅಳವಡಿಸಿದ್ದಕ್ಕೆ ಕನ್ನಡಿಗ ಯುವಕನಿಗೆ ಕೆಲ ಮರಾಠಿ ಪುಂಡರು ಥಳಿಸಿದ್ದಾರೆ. ಗ್ರಾಮದಲ್ಲಿ ಶಿವಾಜಿ ಪುತ್ಥಳಿ ಬಳಿ ಅಳವಡಿಸಿದ್ದ ಕನ್ನಡ ಧ್ವಜ ತೆರವು ಮಾಡುವ ವಿಚಾರದಲ್ಲಿ ಥಳಿಸಲಾಗಿದ್ದು, ಹಲ್ಲೆ ಮಾಡುವ ವಿಡಿಯೋ ವೈರಲ್ ಆಗಿದೆ.

Harish Kera

ಅಮಿತ್ ಶಾ ಭೇಟಿಗೆ ಸಮಯ ನಿಗದಿ

ಹೊಸದಿಲ್ಲಿ: ಇಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಸಿಎಂ ಸಿದ್ದರಾಮಯ್ಯ ಭೇಟಿಯಾಗಲಿದ್ದಾರೆ. ಬರ ಪರಿಹಾರ ಸಂಬಂಧ ನಿನ್ನೆ ಪ್ರಧಾನಿಗಳನ್ನು ಸಿಎಂ ಭೇಟಿಯಾಗಿದ್ದರು. ಇಂದು ಅಮಿತ್ ಶಾ ಭೇಟಿಗೆ ಬೆಳಿಗ್ಗೆ 11.15ಕ್ಕೆ ಸಮಯ ನಿಗದಿಯಾಗಿದೆ.

Harish Kera

ನಿಗಮ ಮಂಡಳಿ ಪಟ್ಟಿ ಫೈನಲ್‌

ಬೆಂಗಳೂರು: ನಿಗಮ ಮಂಡಳಿ ನೇಮಕಕ್ಕೆ 37 ಶಾಸಕರ ಹೆಸರುಗಳ ಪಟ್ಟಿಯನ್ನು ಸಿಎಂ ಹಾಗೂ ಡಿಸಿಎಂ ಫೈನಲ್ ಮಾಡಿದ್ದಾರೆ. ಹೈಕಮಾಂಡ್ ನಾಯಕರಿಗೆ ಸದ್ಯ ಪಟ್ಟಿ ರವಾನೆ ಮಾಡಿದ್ದು, ಎರಡು ಬಾರಿ, ಮೂರು ಬಾರಿಗಿಂತ ಅಧಿಕ ಬಾರಿ ಆಯ್ಕೆಯಾದವರಿಗೆ ಆದ್ಯತೆ ನೀಡಲಾಗಿದೆ.

Exit mobile version