Site icon Vistara News

Karnataka live news: ಬಿಜೆಪಿ ಲೆಟರ್‌ಹೆಡ್‌ನಲ್ಲಿ ರಾಜ್ಯಪಾಲರಿಗೆ ದೂರು; ಮೊದಲ ಸಹಿಯೇ ಕುಮಾರಸ್ವಾಮಿ, ಸೇರೇಬಿಟ್ರಾ ಹಾಗಿದ್ರೆ?

Karnataka Live News Updates Today

ಬೆಂಗಳೂರು: ಬಿಜೆಪಿಯ ಲೆಟರ್‌ ಹೆಡ್‌ನಲ್ಲಿ ರಾಜ್ಯಪಾಲರಿಗೆ ನೀಡಲಾಗಿರುವ ದೂರಿನಲ್ಲಿ ಮೊದಲ ಸಹಿ ಇರುವುದೇ ಜೆಡಿಎಸ್‌ ಶಾಸಕಾಂಗ ಪಕ್ಷ ನಾಯಕ ಎಚ್.ಡಿ ಕುಮಾರಸ್ವಾಮಿ ಅವರದ್ದು. ಹಾಗಿದ್ದರೆ ಕುಮಾರಸ್ವಾಮಿ ಅವರು ಬಿಜೆಪಿ ಸೇರಿಯೇ ಬಿಟ್ರಾ ಎಂಬ ಕುತೂಹಕಾರಿ ಚರ್ಚೆ ನಡೆಯುತ್ತಿದೆ.

Krishna Bhat

ಬಿಜೆಪಿ ಲೆಟರ್‌ ಹೆಡ್‌ನಲ್ಲಿ ಸಲ್ಲಿಸಿದ ದೂರಿನಲ್ಲಿ ಮೊದಲ ಸಹಿ ಕುಮಾರಸ್ವಾಮಿ

ಬೆಂಗಳೂರು: ರಾಜ್ಯ ವಿಧಾನಸಭೆಯಲ್ಲಿ ಬುಧವಾರ 10 ಮಂದಿ ಬಿಜೆಪಿ ಶಾಸಕರನ್ನು ಅಮಾನತು ಮಾಡಿದ್ದು, ಅವರನ್ನು ಅಮಾನುಷವಾಗಿ ಎತ್ತಿ ಹೊರಗೆ ಹಾಕಿದ್ದು ಮತ್ತು ಇದಕ್ಕೆ ಕಾರಣವಾದ ಘಟನಾವಳಿಗಳ ವಿವರದೊಂದಿಗೆ ಭಾರತೀಯ ಜನತಾ ಪಕ್ಷ ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌ ಅವರಿಗೆ ದೂರು ನೀಡಿದೆ. ಇದಕ್ಕೆ ಜೆಡಿಎಸ್‌ ಕೂಡಾ ಬೆಂಬಲ ನೀಡಿದೆ. ಆದರೆ, ಅಚ್ಚರಿ ಎಂದರೆ ಬಿಜೆಪಿಯ ಲೆಟರ್‌ ಹೆಡ್‌ನಲ್ಲಿ ನೀಡಲಾಗಿರುವ ಈ ದೂರಿನಲ್ಲಿ ಮೊದಲ ಸಹಿ ಇರುವುದೇ ಜೆಡಿಎಸ್‌ ಶಾಸಕಾಂಗ ಪಕ್ಷ ನಾಯಕ ಎಚ್.ಡಿ ಕುಮಾರಸ್ವಾಮಿ ಅವರದ್ದು. ಹಾಗಿದ್ದರೆ ಕುಮಾರಸ್ವಾಮಿ ಅವರು ಬಿಜೆಪಿ ಸೇರಿಯೇ ಬಿಟ್ರಾ ಎಂಬ ಕುತೂಹಕಾರಿ ಚರ್ಚೆ ನಡೆಯುತ್ತಿದೆ.

Deepa S

ಸಮಯಕ್ಕೆ ಸರಿಯಾಗಿ ಆಂಬ್ಯುಲೆನ್ಸ್‌ ವೆಂಟಿಲೇಟರ್‌ ಸಿಗದೆ ಮಗು ಸಾವು

ಸರಿಯಾದ‌ ಸಮಯಕ್ಕೆ ಸರ್ಕಾರಿ‌ ವೆಂಟಿಲೇಟರ್ ಆಂಬ್ಯುಲೆನ್ಸ್ (Ventilator Ambulance) ಸಿಗದ ಕಾರಣಕ್ಕೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರದ (Karwar News) ಜಿಲ್ಲಾಸ್ಪತ್ರೆಯಲ್ಲಿ (Karwar Hospital) 3 ತಿಂಗಳ ಗಂಡು ಮಗು ಮೃತಪಟ್ಟಿದೆ. ತಾಲೂಕಿನ ಕಿನ್ನರ ಮೂಲದ ರಾಜೇಶ್‌ ನಾಗೇಕರ್ ಎಂಬವರ ಮಗು ರಾಜನ್ (3 months) ಮೃತಪಟ್ಟಿದೆ.

Karwar News : ಸಮಯಕ್ಕೆ ಸಿಗದ ಆಂಬ್ಯುಲೆನ್ಸ್‌ ವೆಂಟಿಲೇಟರ್‌; ಉಸಿರು ನಿಲ್ಲಿಸಿದ 3 ತಿಂಗಳ ಮಗು
Deepa S

ಗುದ್ದಲಿಯಿಂದ ಅಪ್ಪನ ತಲೆಗೆ ಹೊಡೆದು ಕೊಂದೇ ಬಿಟ್ಟಳು

ಕ್ಷುಲ್ಲಕ ಕಾರಣಕ್ಕೆ ಅಪ್ಪನೊಂದಿಗೆ ಕಿರಿಕ್‌ ತಗೆದು ಗಲಾಟೆ ಮಾಡಿಕೊಂಡ ಮಗಳು ಸಿಟ್ಟಿಗೆದ್ದು ಅಪ್ಪನನ್ನು ಕೊಂದು (Murder case) ಹಾಕಿದ್ದಾಳೆ. ಚನ್ನಪಟ್ಟಣ ತಾಲೂಕಿನ ನಾಯಿದೊಳೆ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಹುಚ್ಚೀರಯ್ಯ (68) ಹತ್ಯೆಯಾದವರು. ಪುಷ್ಪ (30) ತಂದೆಯನ್ನೇ ಹತ್ಯೆ ಮಾಡಿದ ಮಗಳು.

Murder Case : ಗುದ್ದಲಿಯಿಂದ ಅಪ್ಪನ ತಲೆಗೆ ಹೊಡೆದು ಕೊಂದೇ ಬಿಟ್ಟಳು
Deepa S

ನೇಣಿಗೆ ಶರಣಾದ ಗುಡಿಬಂಡೆ ಪಟ್ಟಣ ಪಂಚಾಯತಿ ಉಪಾಧ್ಯಕ್ಷ

ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಪಂಚಾಯತಿ ಉಪಾಧ್ಯಕ್ಷ (town panchayat vice president) ನೇಣಿಗೆ (Self Harming) ಶರಣಾಗಿದ್ದಾರೆ. ಉಪಾಧ್ಯಕ್ಷ ಹಾಗೂ ವಕೀಲರಾಗಿರುವ ಜಿ.ಎಂ.ಅನಿಲಕುಮಾರ್‌ ಮೃತ ದುರ್ದೈವಿ.

Self Harming : ನೇಣಿಗೆ ಶರಣಾದ ಗುಡಿಬಂಡೆ ಪಟ್ಟಣ ಪಂಚಾಯತಿ ಉಪಾಧ್ಯಕ್ಷ
Deepa S

ಕರಾವಳಿ, ಉತ್ತರ ಒಳನಾಡಲ್ಲಿಂದು ಗುಡುಗು ಸಹಿತ ಭಾರಿ ಮಳೆ ಎಚ್ಚರಿಕೆ

ಕರಾವಳಿಯ ಎಲ್ಲಾ ಜಿಲ್ಲೆಗಳಲ್ಲಿ ಹಾಗೂ ಉತ್ತರ ಒಳನಾಡಿನ ಬೀದರ್ ಜಿಲ್ಲೆಯ ಒಂದೆರಡು ಕಡೆಗಳಲ್ಲಿ ಇಂದು (ಜು.20) ಅತಿ ಹೆಚ್ಚು ಮಳೆಯಾಗುವ (Heavy Rain alert) ಸಾಧ್ಯತೆ ಇದೆ. ಉತ್ತರ ಒಳನಾಡಿನ ಕಲಬುರಗಿ, ಬೆಳಗಾವಿ ಮತ್ತು ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ (Weather report) ಭಾರೀ ಮಳೆಯಾಗುವ (Rain News) ಸಾಧ್ಯತೆ ಇದೆ.

Weather Report : ಕರಾವಳಿ, ಉತ್ತರ ಒಳನಾಡಲ್ಲಿಂದು ಗುಡುಗು ಸಹಿತ ಭಾರಿ ಮಳೆ ಎಚ್ಚರಿಕೆ
Exit mobile version