Site icon Vistara News

Karnataka live news: ಎರಡೂವರೆ ವರ್ಷ ಆದ ಮೇಲೆ ಸಚಿವರು ಬದಲು; ಶಾಸಕ ಅಶೋಕ್‌ ಪಟ್ಟಣ್‌ ಹೊಸ ಬಾಂಬ್‌ !

Metro inauguration Narendra Modi

ಬೆಂಗಳೂರು: ನಮ್ಮ ಮೆಟ್ರೋದ ಎರಡು ವಿಸ್ತೃತ ಮಾರ್ಗಗಳನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ಇದೇ ವೇಳೆ ಅವರು ಮೈಸೂರಿನಲ್ಲೂ ಮೆಟ್ರೋ ರೈಲು ಆರಂಭದ ಸೂಚನೆಯನ್ನು ನೀಡಿದರು. ಅವರಿಂದ ಉದ್ಘಾಟನೆ ಸೇರಿದಂತೆ ರಾಜ್ಯದ ಇಂದಿನ ಪ್ರಮುಖ ಸುದ್ದಿಗಳನ್ನು (Karnataka live news) ಇಲ್ಲಿ ಗಮನಿಸಿ.

Krishna Bhat

Congress Politics : ಎರಡೂವರೆ ವರ್ಷ ಆದ ಮೇಲೆ ಸಚಿವರು ಬದಲು; ಶಾಸಕ ಅಶೋಕ್‌ ಪಟ್ಟಣ್‌ ಹೊಸ ಬಾಂಬ್‌ !
Deepa S

ಮಾಯವಾದ ಮಳೆ ಹನಿ; ಇನ್ನೆರಡು ದಿನ ಧಗಧಗ

ಅ.19ರಂದು ಕರಾವಳಿಯ ಒಂದೆರಡು ಕಡೆಗಳಲ್ಲಿ ಮಳೆಯಾಗಿದ್ದು, ಬಹುತೇಕ ಕಡೆಗಳಲ್ಲಿ ಒಣಹವೆ ಇತ್ತು. ಶಿರಾಳಿಯಲ್ಲಿ ಗರಿಷ್ಠ ಉಷ್ಣಾಂಶ 36.5 ಡಿ.ಸೆ, ಕಡಿಮೆ ಉಷ್ಣಾಂಶ 17.2 ಡಿ.ಸೆ. ಬೆಳಗಾವಿ ವಿಮಾನ ನಿಲ್ದಾಣದಲ್ಲಿ ದಾಖಲಾಗಿದೆ. ಮುಂದಿನ 24 ಗಂಟೆಯಲ್ಲಿ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಸಣ್ಣ ಮಳೆ ಹನಿಗಳು (Rain News) ಬೀಳಲಿದೆ. ಉತ್ತರ ಒಳನಾಡಿನಲ್ಲಿ ಒಣ ಹವೆ ಇರಲಿದೆ. ಬಹುತೇಕ ಜಿಲ್ಲೆಗಳಲ್ಲಿ ಗರಿಷ್ಠ ಉಷ್ಣಾಂಶವು ಸಾಮಾನ್ಯಕ್ಕಿಂತ ಹೆಚ್ಚಾಗುವ ಸಾಧ್ಯತೆ (Karnataka Weather Forecast) ಇದೆ.

https://vistaranews.com/karnataka/karnataka-weather-no-rain-forecast-temperature-likely-to-rise/485702.html

Deepa S

ಹೆಂಡ ಕುಡಿದ ಮಂಗನಂತಾಡಿದ ಯುವತಿಯರು; ನೋಡಲು ಮುಗಿಬಿದ್ದ ಜನರು

ರಾಜಧಾನಿ ಬೆಂಗಳೂರಲ್ಲಿ (Bengaluru News) ಕತ್ತಲಾದರೆ ಸಾಕು ಮತ್ತಿನ ಲೋಕವೇ ಸೃಷ್ಟಿಯಾಗುತ್ತೆ. ಯುವಕ-ಯುವತಿಯರು ಪಬ್‌, ಕಬ್ಲ್‌ ಎಂದು ಮೋಜು ಮಸ್ತಿ ಮಾಡಲು ಬರುತ್ತಾರೆ. ಕುಡಿದ ಮತ್ತಿನಲ್ಲಿ ತೇಲಾಡುತ್ತಾ ಹೈಡ್ರಾಮವನ್ನೇ ಮಾಡುತ್ತಾರೆ. ತಡರಾತ್ರಿ ಕೋರಮಂಗಲದಲ್ಲಿ ಹುಡುಗಿಯರು ಅವಾಂತರವನ್ನೇ (Alcohol women) ಸೃಷ್ಟಿಸಿದ್ದರು.

https://vistaranews.com/karnataka/bengaluru/bengaluru-news-drunk-girls-madness-on-the-road/485661.html

Deepa S

ತಲೆ ಮೇಲೆ ಕಲ್ಲು ಎತ್ತಿಹಾಕಿ 8ನೇ ಕ್ಲಾಸ್‌ ಹುಡುಗನ ಬರ್ಬರ ಹತ್ಯೆ

ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಹೊರವಲಯದ ಬಾಳುಮಾಮಾ ನಗರದಲ್ಲಿ ಕೊಲೆಯಾದ ಸ್ಥಿತಿಯಲ್ಲಿ (Murder Case) 15 ವರ್ಷದ ಬಾಲಕನ ಮೃತದೇಹ ಪತ್ತೆಯಾಗಿದೆ. ನಿರ್ಮಾಣ ಹಂತದ ಕಟ್ಟಡದಲ್ಲಿ ಮೃತದೇಹ ಸಿಕ್ಕಿದ್ದು, ತಲೆ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆಗೈದಿದ್ದಾರೆ.

https://vistaranews.com/crime/murder-case-class-8-boy-shot-dead-with-stone-on-his-head/485594.html

Prabhakar R

ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್‌ ಸೇರಿ 750ಕ್ಕೂ ಹೆಚ್ಚು ಮುಖಂಡರು ಕಾಂಗ್ರೆಸ್‌ ಸೇರ್ಪಡೆ

ಹಿರಿಯೂರು ಕ್ಷೇತ್ರದ ಬಿಜೆಪಿ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್‌ ಸೇರಿ 750ಕ್ಕೂ ಹೆಚ್ಚು ಮುಂಖಂಡರು ಶುಕ್ರವಾರ ಅಧಿಕೃತವಾಗಿ ಕಾಂಗ್ರೆಸ್‌ ಸೇರ್ಪಡೆಯಾದರು. ಕೆಪಿಸಿಸಿ ಕಚೇರಿಯಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್‌ ಸಮ್ಮುಖದಲ್ಲಿ ಪೂರ್ಣಿಮಾ ಶ್ರೀನಿವಾಸ್‌ ಅವರು ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್‌ (Operation Hasta) ಸೇರ್ಪಡೆಯಾದರು.

Operation Hasta: ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್‌ ಸೇರಿ 750ಕ್ಕೂ ಹೆಚ್ಚು ಮುಖಂಡರು ಕಾಂಗ್ರೆಸ್‌ ಸೇರ್ಪಡೆ

Exit mobile version