Site icon Vistara News

Karnataka live news: ಎರಡೂವರೆ ವರ್ಷ ಆದ ಮೇಲೆ ಸಚಿವರು ಬದಲು; ಶಾಸಕ ಅಶೋಕ್‌ ಪಟ್ಟಣ್‌ ಹೊಸ ಬಾಂಬ್‌ !

Metro inauguration Narendra Modi

ಬೆಂಗಳೂರು: ನಮ್ಮ ಮೆಟ್ರೋದ ಎರಡು ವಿಸ್ತೃತ ಮಾರ್ಗಗಳನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ಇದೇ ವೇಳೆ ಅವರು ಮೈಸೂರಿನಲ್ಲೂ ಮೆಟ್ರೋ ರೈಲು ಆರಂಭದ ಸೂಚನೆಯನ್ನು ನೀಡಿದರು. ಅವರಿಂದ ಉದ್ಘಾಟನೆ ಸೇರಿದಂತೆ ರಾಜ್ಯದ ಇಂದಿನ ಪ್ರಮುಖ ಸುದ್ದಿಗಳನ್ನು (Karnataka live news) ಇಲ್ಲಿ ಗಮನಿಸಿ.

Deepa S

ಕಾಲುವೆಯಲ್ಲಿ ಈಜಲು ಹೋದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ನೀರುಪಾಲು

ರಾಯಚೂರಿನ ಲಿಂಗಸ್ಗೂರು ತಾಲೂಕಿನ ಪೂಲಭಾವಿ ಬಳಿ ಕಾಲುವೆಯೊಂದರಲ್ಲಿ ಈಜಾಡಲು ಹೋದ ಯುವಕನೊಬ್ಬ ನೀರು (Drowned in Canal)ಪಾಲಾಗಿದ್ದಾನೆ. ಹೊನ್ನಳ್ಳಿ ಗ್ರಾಮದ ಅಮರೇಶ್ (16) ಮೃತ ದುರ್ದೈವಿ.

https://vistaranews.com/karnataka/raichur/drowned-in-canal-sslc-student-drowns-while-swimming-in-canal/485547.html

Deepa S

ಸಿಗರೇಟ್‌ ಸೇದಿ ಪೊಲೀಸರಿಗೆ ಹೊಗೆ ಬಿಟ್ಟು ರೀಲ್ಸ್‌ ಮಾಡಿದ ರೌಡಿಶೀಟರ್‌!

ಕೊಲೆ ಹಾಗೂ ಗಾಂಜಾ ಕೇಸ್‌ನಲ್ಲಿ ಬಂಧಿಯಾಗಿರುವ ರೌಡಿಶೀಟರ್‌ವೊಬ್ಬ ಪೊಲೀಸರ ಎದುರಲ್ಲೇ ಸಿಗರೇಟ್ ಸೇದಿ, ಅದನ್ನೂ ರೀಲ್ಸ್‌ (reels) ಮಾಡಿದ್ದಾನೆ.

https://vistaranews.com/karnataka/bengaluru/rowdy-sheeter-smokes-cigarettes-in-front-of-cops-and-making-reels/485510.html

Deepa S

ಪಾರ್ಕಿಂಗ್‌ ವಿಚಾರಕ್ಕೆ ರಕ್ತ ಬರುವಂತೆ ಮಹಿಳೆಗೆ ಹೊಡೆದ್ರಾ ಶುಲ್ಕ ವಸೂಲಿಗಾರರು!

ಪಾರ್ಕಿಂಗ್ ವಿಚಾರಕ್ಕೆ ಕಿರಿಕ್‌ ನಡೆದಿದ್ದು ಶುಲ್ಕ ವಸೂಲಿಗಾರರು ರಕ್ತ ಬರುವಂತೆ ಪ್ರವಾಸಿಗರ ಮೇಲೆ ಹಲ್ಲೆ ನಡೆಸಿರುವ (Assault Case) ಆರೋಪವೊಂದು ಕೇಳಿ ಬಂದಿದೆ. ಹಾಸನದ ಬೇಲೂರು ಪಟ್ಟಣದ ಚನ್ನಕೇಶವ ಸ್ವಾಮಿ ದೇವಾಯದ ಆವರಣದಲ್ಲಿ ಪ್ರವಾಸಿಗರ ಮೇಲೆ ಹಲ್ಲೆ ನಡೆದಿದೆ.

https://vistaranews.com/karnataka/hassan/assault-case-tourists-attacked-by-extortionists-over-parking-issue-at-belur-chennakesavaswamy-temple/485392.html

Deepa S

ಯಮಸ್ವರೂಪಿ ಟಿಪ್ಪರ್‌ ಲಾರಿ ಹರಿದು ಒಬ್ಬ ಮೃತ್ಯು, ಮತ್ತೊಬ್ಬ ಗಂಭೀರ

ಮುಂಜಾನೆಯಂದು ವೇಗವಾಗಿ ಬಂದ ಟಿಪ್ಪರ್‌ ಲಾರಿಯೊಂದು ಇಬ್ಬರ ಮೇಲೆ ಹರಿದಿರುವ (Road Accident) ಘಟನೆ ಕೊಪ್ಪಳದ ಕುಷ್ಟಗಿ ಪಟ್ಟಣದ ಕೊಪ್ಪಳ ರಸ್ತೆಯಲ್ಲಿ ನಡೆದಿದೆ. ಲಾರಿ ಡಿಕ್ಕಿ ಹೊಡೆದು ಹರಿದ ಪರಿಣಾಮ ಸ್ಥಳದಲ್ಲೇ ವ್ಯಕ್ತಿಯೊಬ್ಬ ಪ್ರಾಣ ಬಿಟ್ಟರೆ, ಮತ್ತೊಬ್ಬರು ಗಂಭೀರ ಗಾಯಗೊಂಡಿದ್ದಾರೆ.

https://vistaranews.com/karnataka/road-accident-one-dead-another-seriously-injured-as-tipper-truck-runs-over-them/485340.html

Deepa S

ಎರಡು ದಿನದ ನಂತರ ಭಯಂಕರ ಮಳೆ ಸಾಧ್ಯತೆ!

ಕರಾವಳಿ, ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿಸಣ್ಣ ಪ್ರಮಾಣದಲ್ಲಿ ಮಳೆಯಾಗುವ (Karnataka weather Forecast) ಸಾಧ್ಯತೆ ಇದೆ. ಉತ್ತರ ಒಳನಾಡಿನಲ್ಲಿ ಒಣ ಹವೆ (Dry weather) ಇರಲಿದೆ. ಹಿಂಗಾರು ಪ್ರವೇಶ ತಡವಾಗಿ ಇರುವುದರಿಂದ ಎರಡು ದಿನಗಳು ಅಲ್ಲಲ್ಲಿ ಜಿಟಿ ಜಿಟಿ ಮಳೆಯಾಗಲಿದೆ. ಆದರೆ ಬಹುತೇಕ ಕಡೆಗಳಲ್ಲಿ ತಾಪಮಾನ ಏರಿಕೆ ಆಗಲಿದೆ.

Karnataka Weather : ಎರಡು ದಿನದ ನಂತರ ಭಯಂಕರ ಮಳೆ ಸಾಧ್ಯತೆ!
Exit mobile version