ಬೆಂಗಳೂರು: ಬಿಗಡಾಯಿಸಿರುವ ಕಾವೇರಿ ನೀರಿನ ಹಂಚಿಕೆ ವಿಚಾರದಲ್ಲಿ ಮುಂದಿನ ಹೆಜ್ಜೆಗಳ ಕುರಿತು ಚರ್ಚೆಗೆ ದಿಲ್ಲಿಯಲ್ಲಿ ರಾಜ್ಯದ ಸರ್ವಪಕ್ಷ ಸಚಿವರು, ಸಂಸದರ ಸಭೆ ಕರೆಯಲಾಗಿದ್ದು, ಮುಂಜಾನೆ ಬ್ರೇಕ್‌ಫಾಸ್ಟ್‌ನೊಂದಿಗೆ ಸಭೆ ಆರಂಭವಾಯಿತು. ಇದರೊಂದಿಗೆ ರಾಜ್ಯದ ಇಂದಿನ ಇನ್ನಷ್ಟು ಮಹತ್ವದ ಸುದ್ದಿಗಳನ್ನು (Karnataka live news) ನೋಡಲು ಇಲ್ಲಿ ಗಮನಿಸಿ.
ಮಡಿಕೇರಿಯಲ್ಲಿ ಲಾರಿ-ಬೈಕ್ ಡಿಕ್ಕಿಯಾಗಿ ವೈದ್ಯಕೀಯ ವಿದ್ಯಾರ್ಥಿ ಸಾವು, ಮತ್ತೊಬ್ಬರಿಗೆ ಗಾಯ
ಲಾರಿ ಹಾಗೂ ದ್ವಿಚಕ್ರ ವಾಹನ ಡಿಕ್ಕಿಯಾಗಿ ಬೈಕ್ ಸವಾರ ಮೃತಪಟ್ಟು, ಮತ್ತೊಬ್ಬರು ಗಾಯಗೊಂಡಿರುವ ಘಟನೆ (Road Accident) ಮಡಿಕೇರಿ ಹೊರವಲಯದ ಕಾಟಗೇರಿ ಬಳಿ ಬುಧವಾರ ನಡೆದಿದೆ. ಉಡುಪಿ ಮೂಲದ ವೈದ್ಯಕೀಯ ವಿದ್ಯಾರ್ಥಿ ವಿಜೇಶ್(23) ಮೃತ ಯುವಕ.
Road Accident: ಮಡಿಕೇರಿಯಲ್ಲಿ ಲಾರಿ-ಬೈಕ್ ಡಿಕ್ಕಿಯಾಗಿ ವೈದ್ಯಕೀಯ ವಿದ್ಯಾರ್ಥಿ ಸಾವು, ಮತ್ತೊಬ್ಬರಿಗೆ ಗಾಯ
Gift Politics : ಸಿದ್ದರಾಮಯ್ಯಗೆ ಕಂಟಕವಾಗುತ್ತಾ ಗಿಫ್ಟ್ ಪಾಲಿಟಿಕ್ಸ್; ಯತೀಂದ್ರ ಹೇಳಿಕೆ ವಿರುದ್ಧ ಬಿಜೆಪಿ ದೂರಿಗೆ ಸಜ್ಜು
ಸಿದ್ದರಾಮಯ್ಯ ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದ ವರುಣ ಕ್ಷೇತ್ರದಲ್ಲಿ ಕುಕ್ಕರ್ ಹಾಗೂ ಇಸ್ತ್ರಿ ಪೆಟ್ಟಿಗೆಯನ್ನು ಹಂಚಿಕೆ ಮಾಡಿದ್ದಾರೆಂಬ ಯತೀಂದ್ರ ಹೇಳಿಕೆ ಈಗ ಸಂಚಲನವನ್ನು ಸೃಷ್ಟಿಸಿದೆ. ಈ ಸಂಬಂಧ ದೂರು ನೀಡಲು ಬಿಜೆಪಿ ಮುಂದಾಗಿದ್ದರೆ, ಈ ಸರ್ಕಾರವನ್ನು ವಜಾ ಮಾಡಬೇಕು ಎಂದು ಎಚ್.ಡಿ. ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
Gift Politics : ಗಿಫ್ಟ್ ಕೊಟ್ಟು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರವನ್ನು ವಜಾ ಮಾಡಿ: ಎಚ್.ಡಿ. ಕುಮಾರಸ್ವಾಮಿ
ರಾಯಚೂರಿನಲ್ಲಿ ಗೃಹಿಣಿ ಅನುಮಾನಾಸ್ಪದ ಸಾವು
ಗೃಹಿಣಿ ಅನುಮಾನಾಸ್ಪದವಾಗಿ ಸಾವಿಗೀಡಾಗಿರುವ ಘಟನೆ ರಾಯಚೂರಿನ ನೇತಾಜಿ ನಗರದಲ್ಲಿ ನಡೆದಿದೆ. ಮನೆ ಮಹಡಿಯ ಮೇಲಿಂದ ಬಿದ್ದು ಮಹಿಳೆ ಮೃತಪಟ್ಟಿದ್ದು, ಮಹಿಳೆಯ ಗಂಡನ ಕುಟುಂಬಸ್ಥರ ವಿರುದ್ಧ ಹತ್ಯೆ (Suspicious Death) ಆರೋಪ ಕೇಳಿಬಂದಿದೆ.
Suspicious Death: ರಾಯಚೂರಿನಲ್ಲಿ ಗೃಹಿಣಿ ಅನುಮಾನಾಸ್ಪದ ಸಾವು
Cauvery water dispute : ಕಾವೇರಿ ಧ್ವನಿ ಎತ್ತದ ಕನ್ನಡ ನಟರ ವಿರುದ್ಧ ಬೆಂಗಳೂರಲ್ಲಿ ಪ್ರತಿಭಟನೆ
ಕಾವೇರಿ ಜಲ ವಿವಾದ ತೀವ್ರ ಸ್ವರೂಪ ಪಡೆದಿದ್ದರೂ ಕನ್ನಡ ನಾಡಿನ ಯಾವೊಬ್ಬ ನಟರೂ ಈ ಬಗ್ಗೆ ಧ್ವನಿ ಎತ್ತದೇ ಇರುವುದು ಕನ್ನಡಿಗರ ಆಕ್ರೋಶಕ್ಕೆ ಕಾರಣಾಗಿದೆ. ಈ ಕಾರಣಕ್ಕಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮುಂದೆ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸಿವೆ.
Weather report : ಇಂದು – ನಾಳೆ ಬೆಂಗಳೂರಲ್ಲಿ ಭರ್ಜರಿ ವರುಣ; ಕರಾವಳಿಯಲ್ಲಿ ಗಾಳಿಸಹಿತ ಮಳೆ
ರಾಜ್ಯದ ಅಲ್ಲಲ್ಲಿ ಬುಧವಾರ ಮತ್ತು ಗುರುವಾರ ಭಾರಿ ಮಳೆಯಾಗುವ ಸಾಧ್ಯತೆ ದಟ್ಟವಾಗಿದೆ. ಕರಾವಳಿ ಜಿಲ್ಲೆ ಹಾಗೂ ರಾಜಧಾನಿ ಬೆಂಗಳೂರಿನಲ್ಲಿ ಭರ್ಜರಿ ವರ್ಷಧಾರೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನಾ ವರದಿಯಲ್ಲಿ ಉಲ್ಲೇಖಿಸಿದೆ.