ಬೆಂಗಳೂರು: ಚಿತ್ರನಟ ಸುದೀಪ್ ವಿರುದ್ಧ ಯಾವುದೇ ಮಾನಹಾನಿಕರ ಹೇಳಿಕೆಗಳನ್ನು ನೀಡದಂತೆ ನಿರ್ಮಾಪಕರಾದ ಎಂ.ಎನ್.ಕುಮಾರ್, ಎನ್.ಎಂ.ಸುರೇಶ್ ಅವರಿಗೆ ಆದೇಶ ನೀಡಿದೆ. ಇವರಿಬ್ಬರು ನೀಡುತ್ತಿರುವ ಮಾನಹಾನಿಕರ ಹೇಳಿಕೆಗಳನ್ನು ತಡೆಯಬೇಕು ಎಂದು ಸುದೀಪ್ ಅವರು ಸಿವಿಲ್ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಇದನ್ನು ಪರಿಗಣಿಸಿದ 6ನೇ ಹೆಚ್ಚುವರಿ ಸಿಟಿ ಸಿವಿಲ್ ಕೋರ್ಟ್ ತಡೆಯಾಜ್ಞೆ ನೀಡಿದೆ. ರಾಜ್ಯದ ಇಂದಿನ ಪ್ರಮುಖ ಸುದ್ದಿ ಬೆಳವಣಿಗೆ (Karnataka live news) ಗಮನಿಸಲು ಇಲ್ಲಿ ನೋಡಿ.
ಮಂಡ್ಯದಲ್ಲಿ ತೀವ್ರಗೊಂಡ ಕಾವೇರಿ ಹೋರಾಟ
ಸಂಜಯ ವೃತ್ತದಲ್ಲಿ ಹುರುಳಿ ಸುರಿದು ಬಿಜೆಪಿ ಪ್ರತಿಭಟನೆ. ಪ್ರತಿಭಟನಾಕಾರರ ಕೈಯಲ್ಲಿ ಕಾಣಿಸಿಕೊಂಡ I.N.D.I.A ಪ್ಲೇ ಕಾರ್ಡ್. ಕೇಂದ್ರದಲ್ಲಿ NDA ವಿರುದ್ಧ ರಚನೆಯಾಗಿರುವ I.N.D.I.A ಒಕ್ಕೂಟ. ಡಿಕೆ.ಶಿವಕುಮಾರ್ ರನ್ನ ತಮಿಳುನಾಡಿನ ಮಾಪಿಳೈ ಎಂದು ಜರಿದಿರುವ ಪ್ರತಿಭಟನಾಕಾರರು.
(S) ಸಿದ್ದರಾಮಯ್ಯ ಒಳಗೆ ಸ್ಟಾಲಿನ್ ಇದ್ದಾರೆ. ಲೋಕಸಭೆ ಚುನಾವಣೆಗಾಗಿ ತಮಿಳುನಾಡಿಗೆ ಅನುಕೂಲ ಮಾಡುತ್ತಿದ್ದಾರೆ ಎಂದು ತೋರಿಸುವ ಪ್ಲೇ ಕಾರ್ಡ್.
ಬಿಜೆಪಿ ಕೋರ್ ಕಮಿಟಿ ಸಭೆ ಆರಂಭ
ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಬಿಜೆಪಿ ಕೋರ್ ಕಮಿಟಿ ಸಭೆಯು ಆರಂಭಗೊಂಡಿತು.
ಈ ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಂಸದ ನಳಿನ್‍ಕುಮಾರ್ ಕಟೀಲ್, ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ರಾಜ್ಯದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ, ಬಿಜೆಪಿ ರಾಷ್ಟ್ರೀಯ ಮಾಜಿ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ರಾಜ್ಯದ ಮಾಜಿ ಸಚಿವರಾದ ಗೋವಿಂದ ಕಾರಜೋಳ, ಕೆ.ಎಸ್. ಈಶ್ವರಪ್ಪ, ಆರ್. ಅಶೋಕ್, ಡಾ.
ಸಿ.ಎನ್. ಅಶ್ವತ್ಥನಾರಾಯಣ, ಬಿ. ಶ್ರೀರಾಮುಲು, ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾಣಾ, ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್ ಜಿ.ವಿ ಅವರು ಪಾಲ್ಗೊಂಡರು.
ಇಂದು ನಾಗರಪಂಚಮಿ ಆಚರಣೆ
ಬೆಂಗಳೂರು: ರಾಜಧಾನಿ ಸೇರಿಂದಂತೆ ನಾಡಿನ ಎಲ್ಲೆಡೆ ಶ್ರಾವಣದ ಮೊದಲ ಹಬ್ಬವಾದ ನಾಗರ ಪಂಚಮಿ ಸಂಭ್ರಮ ಸಡಗರ ಮೇಳೈಸಿದೆ. ಭಕ್ತರು ನಾಗದೇವತೆಗೆ ಪೂಜಿಸಿ ಭಕ್ತಿ ಭಾವ ತೋರುತ್ತಿದ್ದಾರೆ.
ತಡವಾಗಿ ಎಚ್ಚೆತ್ತ ಬಿಜೆಪಿ, ಇಂದು ಪ್ರತಿಭಟನೆ
ಮಂಡ್ಯ: ಕಾವೇರಿ ವಿಚಾರದಲ್ಲಿ ತಡವಾಗಿ ಎಚ್ಚೆತ್ತುಕೊಂಡಿರುವ ಬಿಜೆಪಿ, ಇಂದು ಮಂಡ್ಯದಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಲಿದೆ. ಮಂಡ್ಯ ಜಿಲ್ಲೆಯ ಕಾಂಗ್ರೆಸ್ ಶಾಸಕರೇ ಬಹಿರಂಗ ಹೇಳಿಕೆ ಕೊಟ್ಟರೂ ಮೌನ ವಹಿಸಿದ್ದ ಬಿಜೆಪಿ
ಇಂದಿನಿಂದ ಹೋರಾಟಕ್ಕೆ ಮುಂದಾಗಿದೆ.