Site icon Vistara News

Karnataka Live News: ಜ. 12ಕ್ಕೆ ಖಾತೆಗೆ ಯುವ ನಿಧಿ ಹಣ ಜಮೆ; ಸುಳ್ಳು ಹೇಳಿ ಪಡೆದರೆ ಕಾಸು ರಿಕವರಿ, ಕೇಸ್‌!

JN.1 as covid 19 variant of interest, Classifies World Health Organisation

ಬೆಂಗಳೂರು: ಕೋವಿಡ್ ಪ್ರಕರಣಗಳು (covid 19) ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನ ಒಂದು ಗಂಟೆಗೆ ಸಿಎಂ ಸಿದ್ದರಾಮಯ್ಯ ಅವರ ಗೃಹ ಕಚೇರಿ ಕೃಷ್ಣಾದಲ್ಲಿ ಈ ಕುರಿತು ಚರ್ಚಿಸಲು ಮಹತ್ವದ ಸಭೆ ಕರೆಯಲಾಗಿದೆ. ಇದರೊಂದಿಗೆ ರಾಜ್ಯದ ಇಂದಿನ ಮಹತ್ವದ ಬೆಳವಣಿಗೆಗಳ (Karnataka Live News) ಕುರಿತು ಇಲ್ಲಿ ನೀವು ಓದಬಹುದು.

Deepa S

ಅಡುಗೆ ಮಾಡುವಾಗ ಸ್ಫೋಟಗೊಂಡ ಸಿಲಿಂಡರ್‌; ಬಾಲಕಿಗೆ ಗಾಯ, ವ್ಯಕ್ತಿಯೊರ್ವ ಗಂಭೀರ

ಇತ್ತೀಚೆಗೆ ಗ್ಯಾಸ್‌ ಸಿಲಿಂಡರ್‌ (Cylinder Blast) ಸ್ಫೋಟ ಪ್ರಕರಣಗಳು ಹೆಚ್ಚಾಗುತ್ತಿದೆ. ಸದ್ಯ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ವಾಜರಹಳ್ಳಿಯಲ್ಲಿ ಸಿಲಿಂಡರ್‌ ಸ್ಫೋಟಕ್ಕೆ ವ್ಯಕ್ತಿಯೊರ್ವ ಗಂಭೀರ ಗಾಯಗೊಂಡಿದ್ದು, ಮನೆಯಲ್ಲಿದ್ದ ಬಾಲಕಿಗೂ ಸುಟ್ಟಗಾಯಗಳಾಗಿವೆ.

ಅಡುಗೆ ಮಾಡುವಾಗ ಸ್ಫೋಟಗೊಂಡ ಸಿಲಿಂಡರ್‌; ಬಾಲಕಿಗೆ ಗಾಯ, ಮತ್ತೊಬ್ಬ ಗಂಭೀರ
Adarsha Anche

BJP JDS Alliance: ಲೋಕಸಭೆಗೆ ನಿಖಿಲ್‌ ಸ್ಪರ್ಧೆ ಇಲ್ಲವೆಂದ ಎಚ್‌ಡಿಕೆ; ಕೇಂದ್ರ ಮಂತ್ರಿ ಆಗ್ತಾರಾ ಕುಮಾರಸ್ವಾಮಿ?

ಪ್ರಧಾನಿ ನರೇಂದ್ರ ಮೋದಿ ಅವರನ್ನು ಜೆಡಿಎಸ್‌ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಬಳಿಕ ಮಾತನಾಡಿದ ಎಚ್‌ಡಿಕೆ, ಜನವರಿ ಅಂತ್ಯಕ್ಕೆ ಕ್ಷೇತ್ರ ಹಂಚಿಕೆ ಆಗಲಿದೆ ಎಂದು ಹೇಳಿದ್ದಾರೆ. ಇನ್ನು ಈ ಬಾರಿ ಲೋಕಸಭೆ ಚುನಾವಣೆಗೆ ನಿಖಿಲ್‌ ಕುಮಾರಸ್ವಾಮಿ ಸ್ಪರ್ಧೆ ಮಾಡಲ್ಲ. 28 ಕ್ಷೇತ್ರಗಳಲ್ಲಿ ಪ್ರಚಾರ ಮಾಡುತ್ತಾರೆ ಎಂದು ಹೇಳಿದ್ದಾರೆ.

https://vistaranews.com/politics/bjp-jds-alliance-nikhil-kumaraswamy-will-not-contest-lok-sabha-elections-says-hd-kumaraswamy/537734.html

Deepa S

ಸಾಗರಕಟ್ಟೆ ಹಿನ್ನೀರಿನಲ್ಲಿ ತೇಲಿ ಬಂತು ಯುವಕರಿಬ್ಬರ ಮೃತದೇಹ

ಮೈಸೂರು ಜಿಲ್ಲೆಯ ಕೆ.ಆರ್.ನಗರದಲ್ಲಿ ಜೋಡಿ (Murder Case) ಕೊಲೆಯಾಗಿದೆ. ಇಲ್ಲಿನ ಸಾಗರಕಟ್ಟೆ ಹಿನ್ನೀರಿನಲ್ಲಿ ಯುವಕರಿಬ್ಬರ ಮೃತದೇಹಗಳು ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿವೆ.

Murder case : ಸಾಗರಕಟ್ಟೆ ಹಿನ್ನೀರಿನಲ್ಲಿ ತೇಲಿ ಬಂತು ಯುವಕರಿಬ್ಬರ ಮೃತದೇಹ
Deepa S

ಆಟವಾಡುತ್ತಾ ಸಂಪ್‌ಗೆ ಬಿದ್ದ 5 ವರ್ಷದ ಬಾಲಕಿ ಸಾವು

ಮಕ್ಕಳ ವಿಚಾರದಲ್ಲಿ ಪೋಷಕರು ಎಷ್ಟೇ ಎಚ್ಚರವಾಗಿದ್ದರೂ ಸಾಲದು. ಮಕ್ಕಳನ್ನು ಆಟವಾಡಲು ಬಿಟ್ಟಾಗ (Child death) ಅವರ ಮೇಲೆ ಒಂದು ಕಣ್ಣು ಇಟ್ಟಿರಬೇಕು. ಇಲ್ಲದಿದ್ದರೆ ಅವಘಡಗಳು ಸಂಭವಿಸುತ್ತವೆ. ಸದ್ಯ ಆಟವಾಡುತ್ತಿದ್ದಾಗ ನೀರಿನ ಸಂಪ್‌ಗೆ ಬಿದ್ದು (Drowned in water) ಬಾಲಕಿಯೊಬ್ಬಳು ಮೃತಪಟ್ಟ ದಾರುಣ ಘಟನೆ ನಡೆದಿದೆ.

Child death : ಆಟವಾಡುತ್ತಾ ಸಂಪ್‌ಗೆ ಬಿದ್ದ 5 ವರ್ಷದ ಬಾಲಕಿ ಸಾವು
Deepa S

ಸಂಜೆಯಾದ್ರೆ ಮೈ ನಡುಗಿಸುವ ಚಳಿ; ನಾಳೆ ಬರುತ್ತಾ ಮಳೆ?

ರಾಜ್ಯಾದ್ಯಂತ ಬುಧವಾರವೂ ಒಣಹವೆ (Dry weather) ಮುಂದುವರಿದಿದೆ. ಕಡಿಮೆ ಉಷ್ಣಾಂಶ ಬೀದರ್‌ನಲ್ಲಿ 11.5 ಡಿ.ಸೆ ದಾಖಲಾಗಿದ್ದು, ಥಂಡಿ ವಾತಾವರಣ (Karnataka Weather Forecast) ನಿರ್ಮಾಣವಾಗಿದೆ. ರಾಜ್ಯದಲ್ಲಿ ನಾಳೆಯು ಶುಷ್ಕ ವಾತಾವರಣವೇ ಇರಲಿದ್ದು, ಮಳೆ ಜಾಗವನ್ನು ಚಳಿಯು ಆವರಿಸಿಕೊಂಡಿದೆ. ಹಗಲಿರುಳು ಥಂಡಿ ವಾತಾವರಣ ಇರಲಿದ್ದು, ಮಧ್ಯಾಹ್ನ ಬಿಸಿಲು ಕಾಡಲಿದೆ.

Karnataka Weather : ಸಂಜೆಯಾದ್ರೆ ಮೈ ನಡುಗಿಸುವ ಚಳಿ; ನಾಳೆ ಬರುತ್ತಾ ಮಳೆ?
Exit mobile version