ಬೆಂಗಳೂರು: ಬಿಜೆಪಿಯಲ್ಲಿ ಹಲವಾರು ಪ್ರಮುಖ ಕುತೂಹಲಕಾರಿ ವಿದ್ಯಮಾನಗಳು ಸಂಭವಿಸಿದ್ದು, ನಾಯಕತ್ವದಲ್ಲಿ ಬದಲಾವಣೆಯ ಕುರಿತು ಅನುಮಾನಗಳನ್ನು ಮೂಡಿಸಿದೆ. ರಾಜ್ಯದ ಪ್ರಮುಖ ಸುದ್ದಿ ಬೆಳವಣಿಗೆಗಳಿಗಾಗಿ (Karnataka Live News) ಇಲ್ಲಿ ನೋಡಿ.
ಮಳೆ ಅಬ್ಬರಕ್ಕೆ ಜನರು ತತ್ತರ
ಕಳೆದೊಂದು ವಾರದಿಂದ ರಾಜ್ಯದ ವಿವಿಧೆಡೆ ಮಳೆ (Weather report) ಅಬ್ಬರಿಸುತ್ತಿದೆ. ಧಾರವಾಡದಲ್ಲಿ ಕಳೆದ ನಾಲ್ಕು ದಿನಗಳಿಂದ ನಿರಂತರ (Rain News) ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ರಾತ್ರಿ ಪೂರ್ತಿ ಸುರಿದ ಭಾರಿ ಮಳೆಯಿಂದಾಗಿ (Rain Effected) ಗ್ರಾಮದಲ್ಲಿ ಮನೆಯ ಚಾವಣಿ ಕುಸಿದಿದ್ದು, ಅದೃಷ್ಟವಶಾತ್ ಮನೆಯ ಸದಸ್ಯರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
Rain News : ಮಳೆ ಅಬ್ಬರಕ್ಕೆ ಜನರು ತತ್ತರ; ಹಲವೆಡೆ ಗೋಡೆ ಕುಸಿತ, ಸೇತುವೆ ಮುಳುಗಡೆ
ಕೆಆರ್ ಪುರಂ – ಬೈಯಪ್ಪನಹಳ್ಳಿ ಮೆಟ್ರೋ ಟ್ರಯಲ್ ರನ್
ಇದೇ ತಿಂಗಳ 22ರಿಂದ ಬಿಎಂಆರ್‌ಸಿಎಲ್ ಕೆ.ಆರ್.ಪುರಂ – ಬೈಯಪ್ಪನಹಳ್ಳಿ ಮಾರ್ಗದಲ್ಲಿ ತನ್ನ ಪ್ರಾಯೋಗಿಕ ಸಂಚಾರ ಆರಂಭಿಸಲಿದೆ. ಇದರಿಂದಾಗಿ ಆ ವಲಯದಲ್ಲಿರುವ ಅನೇಕ ಕಾರ್ಪೋರೇಟ್ ಕಂಪನಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. ನಗರದ ಸುತ್ತಮುತ್ತಲಿನ ಊರುಗಳಿಂದ ವೈಟ್‌ಫೀಲ್ಡ್‌ಗೆ ಬಂದಿಳಿಯುವ ಜನರು ಕೆಲವೇ ನಿಮಿಷಗಳಲ್ಲಿ ನಿರಾಯಾಸವಾಗಿ ನಗರದ ಹೃದಯಭಾಗಕ್ಕೆ ಸಂಚರಿಸಲು ಇದು ಸಹಕಾರಿಯಾಗಲಿದೆ.
Bengaluru Metro : ನಾಳೆಯಿಂದ ಕೆಆರ್ ಪುರಂ – ಬೈಯಪ್ಪನಹಳ್ಳಿ ಮೆಟ್ರೋ ಟ್ರಯಲ್ ರನ್