ಬೆಂಗಳೂರು: ಕಾವೇರಿ ನೀರಿನ ವಿಚಾರದಲ್ಲಿ ಕಾವೇರಿ ಪ್ರಾಧಿಕಾರ ನೀಡಿದ ತೀರ್ಪನ್ನು ಪಾಲಿಸುವಂತೆ ರಾಜ್ಯಕ್ಕೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಕೆಆರ್‌ಎಸ್‌ನಲ್ಲಿ ತಳ ಹಿಡಿದಿರುವ ಕಾವೇರಿ ನೀರಿನ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಇದು ರಾಜ್ಯಕ್ಕೆ ಮರಣ ಶಾಸನದಂತಿದೆ. ಇದರೊಂದಿಗೆ ರಾಜ್ಯದ ಇಂದಿನ ಇನ್ನಷ್ಟು ಸುದ್ದಿಗಳನ್ನು (Karnataka live news) ಇಲ್ಲಿ ನೋಡಿ.
ಸ್ನೇಹಿತನ ಹೆಂಡ್ತಿಯಿಂದ ಪೊರಕೆ ಏಟು; ಮನನೊಂದು ನೇಣಿಗೆ ಶರಣು!
ಕುಡಿತ ಯಾವೆಲ್ಲ ಅವಾಂತರಕ್ಕೆ ಕಾರಣವಾಗುತ್ತದೆ ಎಂಬುದಕ್ಕೆ ಈ ಪ್ರಕರಣವೇ ಸಾಕ್ಷಿಯಾಗಿದೆ. ಕುಡಿದ ನಶೆಯಲ್ಲಿ ಸ್ನೇಹಿತನ ಪತ್ನಿ ಬಗ್ಗೆ ತಪ್ಪಾಗಿ ಮಾಡಿ, ಹಲ್ಲೆಗೊಳಗಾದವನು ಆತ್ಮಹತ್ಯೆಗೆ (Self Harming) ಶರಣಾಗಿದ್ದಾನೆ.
https://vistaranews.com/karnataka/kolara/self-harming-youth-commits-suicide-after-being-subjected-to-casteist-remarks/460313.html
ಸುಪ್ರೀಂ ಕೋರ್ಟ್ ವಾಸ್ತವದ ಆಧಾರದಲ್ಲಿ ಆದೇಶ ನೀಡಬೇಕು: ಬಸವರಾಜ ಬೊಮ್ಮಾಯಿ
ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ (Cauvery Water Dispute) ಸುಪ್ರೀಂ ಕೋರ್ಟ್ ಸಂಪೂರ್ಣ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯುಎಂಎ) ಆದೇಶವನ್ನೇ ಪರಿಗಣಿಸದೇ, ವಾಸ್ತವದ ಆಧಾರದಲ್ಲಿ ತೀರ್ಪು ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
Cauvery Water Dispute: ಸುಪ್ರೀಂ ಕೋರ್ಟ್ ವಾಸ್ತವದ ಆಧಾರದಲ್ಲಿ ಆದೇಶ ನೀಡಬೇಕು: ಬಸವರಾಜ ಬೊಮ್ಮಾಯಿ
ಸ್ನೇಹಿತನೊಟ್ಟಿಗೆ ಹೋದವನು ಹೆಣವಾಗಿ ಪತ್ತೆ!
ರಾಯಚೂರಲ್ಲಿ ಮತ್ತೊಂದು ಅನುಮಾನಾಸ್ಪದ ಸಾವು ಪ್ರಕರಣವು ಬೆಳಕಿಗೆ ಬಂದಿದೆ. ಇಲ್ಲಿನ ತಿಮ್ಮಾಪುರ ಪೇಟೆಯಲ್ಲಿ ಯುವಕನೊಬ್ಬ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾನೆ. ರಮೇಶ್ (19) ಮೃತ ಯುವಕ.
Suspicious Death : ಸ್ನೇಹಿತನೊಟ್ಟಿಗೆ ಹೋದವನು ಹೆಣವಾಗಿ ಪತ್ತೆ!
ವಸತಿ ಶಾಲೆಯಲ್ಲಿ ಗೋಡೆ ಕುಸಿದು ಬಾಲಕ ಸಾವು; ಇನ್ನಿಬ್ಬರು ಗಂಭೀರ
ನೀರಿನ ತೊಟ್ಟಿ ಗೋಡೆ ಕುಸಿದು (Wall collapsed) ಬಾಲಕನೊರ್ವ ಮೃತಪಟ್ಟಿದ್ದು, ಇಬ್ಬರಿಗೆ ಗಂಭಿರ ಗಾಯಗಳಾಗಿವೆ. ಬಿಡದಿ ಹೋಬಳಿ ಹಚ್.ಗೊಲ್ಲಹಳ್ಳಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಈ ದುರ್ಘಟನೆ ನಡೆದಿದೆ. ಕೌಶಿಕ್ ಗೌಡ (12) ಮೃತ ದುರ್ದೈವಿ.
Wall collapsed : ವಸತಿ ಶಾಲೆಯಲ್ಲಿ ಗೋಡೆ ಕುಸಿದು ಬಾಲಕ ಸಾವು; ಇನ್ನಿಬ್ಬರು ಗಂಭೀರ
ಟಿಪ್ಪರ್ ಲಾರಿ ಹರಿದು ಆಟೋ ಚಾಲಕ ಸಾವು; ತಲೆ, ದೇಹವೆಲ್ಲ ನಜ್ಜುಗುಜ್ಜು!
ಕೋಲಾರ ತಾಲೂಕಿನ ಮಡೇರಹಳ್ಳಿಯ ರಾ.ಹೆ 75ರ ಗೇಟ್ ಬಳಿ ಟಿಪ್ಪರ್ ಲಾರಿ (Lorry Accident) ಹರಿದು ಆಟೋ ಚಾಲಕ ದಾರುಣವಾಗಿ ಮೃತಪಟ್ಟಿರುವ ಘಟನೆ ನಡೆದಿದೆ. ಸೂಲೂರು ಗ್ರಾಮದ ನಿವಾಸಿ ಧನುಷ್ (29) ಮೃತ ದುರ್ದೈವಿ.
https://vistaranews.com/karnataka/kolara/road-accident-auto-driver-run-over-by-tipper-lorry-dies-the-head-and-body-are-crushed/460147.html