ಬೆಂಗಳೂರು: ಕಾವೇರಿ ನೀರಿನ ವಿಚಾರದಲ್ಲಿ ಕಾವೇರಿ ಪ್ರಾಧಿಕಾರ ನೀಡಿದ ತೀರ್ಪನ್ನು ಪಾಲಿಸುವಂತೆ ರಾಜ್ಯಕ್ಕೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಕೆಆರ್‌ಎಸ್‌ನಲ್ಲಿ ತಳ ಹಿಡಿದಿರುವ ಕಾವೇರಿ ನೀರಿನ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಇದು ರಾಜ್ಯಕ್ಕೆ ಮರಣ ಶಾಸನದಂತಿದೆ. ಇದರೊಂದಿಗೆ ರಾಜ್ಯದ ಇಂದಿನ ಇನ್ನಷ್ಟು ಸುದ್ದಿಗಳನ್ನು (Karnataka live news) ಇಲ್ಲಿ ನೋಡಿ.
ಕರಾವಳಿಯಲ್ಲಿ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!
ಮುಂದಿನ 24 ಗಂಟೆಯಲ್ಲಿ ಕರಾವಳಿಯ ಬಹುತೇಕ ಕಡೆಗಳಲ್ಲಿ, ದಕ್ಷಿಣ ಒಳನಾಡಿನ ಹಲವು ಕಡೆಗಳಲ್ಲಿ ಹಾಗೂ ಉತ್ತರ ಒಳನಾಡಿನ ಕೆಲವು ಕಡೆಗಳಲ್ಲಿ ಹಗುರದಿಂದ ಸಾಧಾರಣ (Rain News) ಮಳೆಯಾಗುವ (Weather report) ಬಹಳಷ್ಟು ಸಾಧ್ಯತೆ ಇದೆ.
Weather Report : ಕರಾವಳಿಯಲ್ಲಿ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!
ತಿರುವಿನಲ್ಲಿ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಕೆಎಸ್‌ಆರ್‌ಟಿಸಿ
ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಮರಕ್ಕೆ ಸರ್ಕಾರಿ ಬಸ್‌ವೊಂದು (Bus Accident) ಡಿಕ್ಕಿಯಾದ ಘಟನೆ ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಸೂರ್ಲಬ್ಬಿ ಸಮೀಪದ ಕುಂಬಾರಗಡಿಗೆ ಎಂಬಲ್ಲಿ (Road Accident) ನಡೆದಿದೆ.
Bus Accident : ತಿರುವಿನಲ್ಲಿ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಕೆಎಸ್‌ಆರ್‌ಟಿಸಿ
ಚಾಲಕನಿಲ್ಲದೆ ಈ ಮಾರ್ಗದಲ್ಲಿ ನಮ್ಮ ಮೆಟ್ರೊ ಓಡಾಟ!; ಪ್ರಾಯೋಗಿಕ ಪರೀಕ್ಷೆ ಹೇಗಿತ್ತು ನೋಡಿ..
ಐಟಿ ಕ್ಯಾಪಿಟಲ್ ಬೆಂಗಳೂರಲ್ಲಿ ಮೊದಲ ಚಾಲಕರಹಿತ (Namma Metro) ಮೆಟ್ರೋ ದರ್ಶನವಾಗಿದೆ. ಎಲೆಕ್ಟ್ರಾನಿಕ್ ಸಿಟಿ ನಿಲ್ದಾಣದಲ್ಲಿ ಚಾಲಕರಹಿತ ಹೊಸ ಮೆಟ್ರೋ ರೈಲಿನ ಪ್ರಾಯೋಗಿಕ ಪರೀಕ್ಷೆ ನಡೆಸಲಾಗಿದೆ. ಅತಿ ಶೀಘ್ರವೇ ನಮ್ಮ ಮೆಟ್ರೋದ ರೈಲುಗಳು ಚಾಲಕನಿಲ್ಲದೆಯೇ ಓಡಾಡಲಿದೆ? ಯಾವಾಗ ಆರಂಭ, ಎಲ್ಲಾ ಮಾರ್ಗದಲ್ಲೂ ಹೀಗೇನಾ? ಇದು ಹೇಗೆ ಕೆಲಸ ಮಾಡುತ್ತದೆ ಎಂಬ ಎಲ್ಲ ಮಾಹಿತಿಗಳು ಇಲ್ಲಿವೆ.
Namma Metro : ಚಾಲಕನಿಲ್ಲದೆ ಈ ಮಾರ್ಗದಲ್ಲಿ ನಮ್ಮ ಮೆಟ್ರೊ ಓಡಾಟ!; ಪ್ರಾಯೋಗಿಕ ಪರೀಕ್ಷೆ ಹೇಗಿತ್ತು ನೋಡಿ..
ಮಗು ಅದಲು-ಬದಲು ಮಾಡಿದ ಹುಬ್ಬಳ್ಳಿ ಕಿಮ್ಸ್ ಸಿಬ್ಬಂದಿ! ಪೋಷಕರು ಕಕ್ಕಾಬಿಕ್ಕಿ
ಹುಟ್ಟಿದ್ದು ಒಂದು ಕೊಟ್ಟಿದ್ದು ಮತ್ತೊಂದು ಮಗು! ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯ (Kims Hospital) ಸಿಬ್ಬಂದಿ ಎಡವಟ್ಟು ಪೋಷಕರಿಗೆ ತಲೆಕೆಟ್ಟು ಹೋಗಿತ್ತು. ಹಸುಗೂಸುಗಳನ್ನು ಅದಲು ಬದಲು ಮಾಡಿದ ಕಿಮ್ಸ್ ವೈದ್ಯರು ಹಾಗೂ ಸಿಬ್ಬಂದಿಯ ನಿರ್ಲಕ್ಷ್ಯಕ್ಕೆ ಪೋಷಕರು ಆಕ್ರೋಶವನ್ನು ಹೊರಹಾಕಿದ್ದಾರೆ.
Kims Hospital : ಮಗು ಅದಲು-ಬದಲು ಮಾಡಿದ ಹುಬ್ಬಳ್ಳಿ ಕಿಮ್ಸ್ ಸಿಬ್ಬಂದಿ! ಪೋಷಕರು ಕಕ್ಕಾಬಿಕ್ಕಿ
ಪ್ರಾಧಿಕಾರ ಆದೇಶ ಎತ್ತಿ ಹಿಡಿದ ಸುಪ್ರೀಂ ಕೋರ್ಟ್
ಬೆಂಗಳೂರು: ಸಮಿತಿ ಮತ್ತು ಪ್ರಾಧಿಕಾರಗಳ ಅದೇಶಗಳನ್ನು ತಡೆಹಿಡಿಯಲು ಸಾಧ್ಯವಿಲ್ಲ. ಹೀಗಾಗಿ ತಮಿಳುನಾಡಿಗೆ ಪ್ರತಿನಿತ್ಯ 5000 ಕ್ಯೂಸೆಕ್ ನೀರು ಬಿಡಲು ಸುಪ್ರೀಂ ಕೋರ್ಟ್ ಕರ್ನಾಟಕಕ್ಕೆ ಆದೇಶ ನೀಡಿದೆ. ಇದರೊಂದಿಗೆ ರಾಜ್ಯಕ್ಕೆ ಕಾವೇರಿ ವಿಚಾರದಲ್ಲಿ ಹಿನ್ನಡೆಯಾಗಿದೆ.