Site icon Vistara News

Karnataka Live News: Cauvery Dispute : ಕಾವೇರಿ ಹೋರಾಟಕ್ಕೆ ಧುಮುಕಿದ ಆದಿಚುಂಚನಗಿರಿ ಶ್ರೀ; ರೈತ ಪರ ನಿರ್ಧಾರ ತೆಗೆದುಕೊಳ್ಳಲು ಹಕ್ಕೊತ್ತಾಯ

cauvery supreme court

ಬೆಂಗಳೂರು: ಸುಪ್ರೀಂ ಕೋರ್ಟ್‌ ತೀರ್ಪಿನಿಂದ ಆಘಾತಗೊಂಡಿರುವ ಕರ್ನಾಟಕ ರಾಜ್ಯ ಇನ್ನೂ ಚೇತರಿಸಿಕೊಂಡಿಲ್ಲ. ಇಂದು ಸಂಜೆ 6 ಗಂಟೆಗೆ ಸಿಎಂ ಸಿದ್ದರಾಮಯ್ಯ ಮಹತ್ವದ ಕ್ಯಾಬಿನೆಟ್ ಸಭೆ ಕರೆದಿದ್ದಾರೆ. ಅತ್ತ ಕಾವೇರಿ ಕಣಿವೆಯಲ್ಲಿ ರೈತರು ಪ್ರತಿಭಟನೆ ಜೋರಾಗುತ್ತಿದೆ. ಇದರೊಂದಿಗೆ ರಾಜ್ಯದ ಇಂದಿನ ಇನ್ನಷ್ಟು ಮಹತ್ವದ ಸುದ್ದಿಗಳನ್ನು (Karnataka Live News) ಇಲ್ಲಿ ಗಮನಿಸಿ.

Prabhakar R

ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಡಿಜೆ ಸದ್ದಿಗೆ ಹಾರಿಹೋಯ್ತು ಯುವಕನ ಪ್ರಾಣ!

ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಹೃದಯಾಘಾತದಿಂದ (Heart Attack) ಯುವಕ ಮೃತಪಟ್ಟಿರುವ ಘಟನೆ ಹಗರಿಬೊಮ್ಮನಹಳ್ಳಿ ಪಟ್ಟಣದ ಭೋವಿ ಕಾಲನಿಯಲ್ಲಿ ಶುಕ್ರವಾರ ನಡೆದಿದೆ. ಮೆರವಣಿಗೆ ವೇಳೆ ಡಿಜೆ ಸದ್ದಿಗೆ ನೂರಾರು ಯುವಕರು ಕುಣಿಯುತ್ತಿದ್ದರು. ಈ ವೇಳೆ ಯುವಕನಿಗೆ ಹೃದಯಾಘಾತವಾಗಿದೆ.

Heart Attack: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಡಿಜೆ ಸದ್ದಿಗೆ ಹಾರಿಹೋಯ್ತು ಯುವಕನ ಪ್ರಾಣ!
Deepa S

ಉತ್ತರ ಕರ್ನಾಟಕಕ್ಕೆ ಭಾರಿ ಮಳೆ ಎಚ್ಚರಿಕೆ; ಬೆಂಗಳೂರಲ್ಲಿ ತಗ್ಗದ ಅಬ್ಬರ

ಇನ್ನರೆಡು ದಿನ ಕರಾವಳಿಯ ಬಹುತೇಕ ಕಡೆಗಳಲ್ಲಿ ಮತ್ತು ಒಳನಾಡಿನ ಹಲವು ಕಡೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ (Rain News) ಸಾಧ್ಯತೆ ಇದೆ.

Weather report : ಉತ್ತರ ಕರ್ನಾಟಕಕ್ಕೆ ಭಾರಿ ಮಳೆ ಎಚ್ಚರಿಕೆ; ಬೆಂಗಳೂರಲ್ಲಿ ತಗ್ಗದ ಅಬ್ಬರ
Deepa S

ಕೈ ತಾಗಿದ್ದಕ್ಕೆ ಯುವಕರ ಮಧ್ಯೆ ಕಿರಿಕ್‌; ಖಾನಾಪುರದಲ್ಲಿ ಬಿಗುವಿನ ವಾತಾವರಣ

ಖಾನಾಪುರ ಪಟ್ಟಣದ ತೋಪಿನಕಟ್ಟಿ ಎಂಬಲ್ಲಿ ಎರಡು ಗುಂಪುಗಳ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಕೈ ಕೈ ಮಿಲಾಯಿಸಿದ್ದಾರೆ. ನಡೆದುಕೊಂಡು ಹೋಗುವಾಗ ಕೈ ತಾಗಿದಕ್ಕೆ ಯುವಕರ ಮಧ್ಯೆ ಗಲಾಟೆ (Assault Case) ನಡೆದಿದೆ ಎನ್ನಲಾಗಿದೆ. ಗಲಾಟೆ ಮಧ್ಯೆ ಬಂದ ಸ್ಥಳೀಯರು ಯುವಕರನ್ನು ಮನವೊಲಿಸಿ ಕಳುಹಿಸಿದ್ದಾರೆ. ಆದರೆ ಸಂಜೆ ಆಗುತ್ತಿದ್ದಂತೆ ಒಂದು ಗುಂಪಿನ ಯುವಕ ಹೋಗಿ ಮತ್ತೊಂದು ಗುಂಪಿನವರೊಂದಿಗೆ ಗಲಾಟೆ ಮಾಡಿದ್ದಾನೆ.

https://vistaranews.com/karnataka/belagavi/assault-case-clash-between-two-groups-over-petty-issue/461189.html

Deepa S

ದೇವಾಲಯದ ಅವಶೇಷಕ್ಕೆ ಕಲ್ಲೆಸೆದ ಅನ್ಯಕೋಮಿನ ಯುವಕರು; ಹಿಂದು ಸಂಘಟನೆಗಳು ಕಿಡಿ

ಉತ್ತರ ಕನ್ನಡದ ಜೋಯಿಡಾ ರಾಮನಗರದ ನಾಗೋಡಾ ಕ್ರಾಸ್ ಬಳಿ ಜಲಾಶಯ ವ್ಯಾಪ್ತಿಯಲ್ಲಿದ್ದ ಶಿವ ದೇವಾಲಯದ ಅವಶೇಷಕ್ಕೆ ಕಿಡಿಗೇಡಿಗಳು ಹಾನಿ ಮಾಡಿದ್ದಾರೆ.

ದೇವಾಲಯದ ಅವಶೇಷಕ್ಕೆ ಕಲ್ಲೆಸೆದ ಅನ್ಯಕೋಮಿನ ಯುವಕರು; ಹಿಂದು ಸಂಘಟನೆಗಳು ಕಿಡಿ
Deepa S

ನಾಳೆ-ನಾಡಿದ್ದು ಈ ರೂಟ್‌ನಲ್ಲಿ ವಾಹನ ಸಂಚಾರ ಬಂದ್‌!

ಆರ್.ಟಿ. ನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಮುನಿರೆಡ್ಡಿಪಾಳ್ಯದಲ್ಲಿ ಸೆ. 23ರ ರಾತ್ರಿ ಗಣೇಶ ಮೂರ್ತಿಗಳ ವಿಸರ್ಜನಾ (Ganesh Chaturthi) ಮೆರವಣಿಗೆ ನಡೆಯಲಿದೆ. ಹೀಗಾಗಿ ಶನಿವಾರ ಸಂಜೆ 06 ಗಂಟೆಯಿಂದ ಮರುದಿನ ಬೆಳಗ್ಗೆ 08 ಗಂಟೆಯವರೆಗೂ ಮೆರವಣಿಗೆ ಸಾಗುವ ಮಾರ್ಗಗಳಲ್ಲಿ ವಾಹನ ಸಂಚಾರ ಬಂದ್‌ ಆಗಲಿದೆ.

Ganesh Chaturthi : ನಾಳೆ-ನಾಡಿದ್ದು ಈ ರೂಟ್‌ನಲ್ಲಿ ವಾಹನ ಸಂಚಾರ ಬಂದ್‌!
Exit mobile version