Site icon Vistara News

Karnataka live news: ಆಪರೇಷನ್‌ ಹಸ್ತ ತಪ್ಪಿಸಲು ಎಸ್‌ಟಿ ಸೋಮಶೇಖರ್‌ಗೆ ಬಿಜೆಪಿ ಹೈಕಮಾಂಡ್‌ ಬುಲಾವ್‌

Karnataka Live News Updates Today

ಬೆಂಗಳೂರು: ಕುಮಾರ ಬಂಗಾರಪ್ಪಗೆ ಆಪರೇಷನ್ ಹಸ್ತದ ಬಲೆಯನ್ನು ಡಿಸಿಎಂ ಬೀಸಿದ್ದಾರೆ ಎಂಬ ಮಾತು ಕಾಂಗ್ರೆಸ್ ಪಾಳಯದಲ್ಲಿ ಬಾರಿ ಚರ್ಚೆಗೆ ಗ್ರಾಸವಾಗಿದೆ. ಇದರೊಂದಿಗೆ ರಾಜ್ಯದ ಇಂದಿನ ಇನ್ನಷ್ಟು ಸುದ್ದಿಗಳನ್ನು ತಿಳಿಯಲು (Karnataka live news) ಇಲ್ಲಿ ಗಮನಿಸಿ.

Krishna Bhat

DK Shivakumar : ಇನ್ನು 100 ದಿನಗಳಲ್ಲಿ ಎತ್ತಿನಹೊಳೆ ಯೋಜನೆಯಲ್ಲಿ ನೀರು ಹರಿಯೋದು ಗ್ಯಾರಂಟಿ ಎಂದ ಡಿಕೆಶಿ
Deepa S

ರಾಜ್ಯದಲ್ಲಿ ಕ್ಷೀಣಿಸಿದ ಮಳೆ ; ಆತಂಕದಲ್ಲಿ ರೈತಾಪಿ ವರ್ಗ

ಮಾಯದಂತ ಮಳೆ ಬರುವ ಹೊತ್ತಿನಲ್ಲಿ ಮುಂಗಾರು ಮಂಕಾಗಿದೆ. ಮಳೆ ಸರಿದಿದ್ದು, ಸೂರ್ಯ ಪ್ರಕಾಶಿಸುತ್ತಿದ್ದಾನೆ. ಮಳೆಯಿಂದಲೇ ಮತ್ತೆ ಕೆರೆ-ಕಟ್ಟೆಗಳು ಬರಿದಾಗುತ್ತಿದೆ. ನೈರುತ್ಯ ಮುಂಗಾರು ದುರ್ಬಲಗೊಂಡಿದ್ದು, ಕರಾವಳಿ ಮತ್ತು ದಕ್ಷಿಣ ಒಳನಾಡಿನ (Weather report) ಕೆಲವು ಕಡೆಗಳಲ್ಲಿ, ಉತ್ತರ ಒಳನಾಡಿನ ಒಂದೆರಡು ಸ್ಥಳಗಳಲ್ಲಿ ಮಳೆಯಾಗುವ (Rain News) ಸಾಧ್ಯತೆ ಇದೆ. ರಾಜ್ಯದ ಪ್ರತ್ಯೇಕ ಸ್ಥಳಗಳಲ್ಲಿ ಮಿಂಚು, ಗುಡುಗು ಇರಲಿದೆ.

Weather Report : ರಾಜ್ಯದಲ್ಲಿ ಕ್ಷೀಣಿಸಿದ ಮಳೆ ; ಆತಂಕದಲ್ಲಿ ರೈತಾಪಿ ವರ್ಗ
Prabhakar R

ಚಂದ್ರಯಾನ-3 ಬಗ್ಗೆ ವ್ಯಂಗ್ಯಭರಿತ ಟ್ವೀಟ್‌ ಮಾಡಿದ ನಟ ಪ್ರಕಾಶ್‌ ರಾಜ್‌ ವಿರುದ್ಧ ದೂರು ದಾಖಲು

ಚಂದ್ರಯಾನ-3ರ ಬಗ್ಗೆ ವ್ಯಂಗ್ಯಭರಿತ ಟ್ವೀಟ್ ಮಾಡಿದ್ದಕ್ಕೆ ಎಲ್ಲೆಡೆ ನಟ ಪ್ರಕಾಶ್‌ ರಾಜ್‌ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಈ ನಡುವೆ ನಟ ಪ್ರಕಾಶ್‌ ರಾಜ್‌ (Prakash Raj) ಅವರನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಶ್ರೀರಾಮಸೇನೆಯಿಂದ ಜಿಲ್ಲೆಯ ಬನಹಟ್ಟಿ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

Prakash Raj: ಚಂದ್ರಯಾನ-3 ಬಗ್ಗೆ ವ್ಯಂಗ್ಯಭರಿತ ಟ್ವೀಟ್‌ ಮಾಡಿದ ನಟ ಪ್ರಕಾಶ್‌ ರಾಜ್‌ ವಿರುದ್ಧ ದೂರು ದಾಖಲು

Deepa S

ಶತ್ರುಗೆ ರೂಂ ಕೊಡ್ತೀಯಾ ಎಂದು ಲಾಂಗ್‌ ಬೀಸಿದ; ಗರ್ಲ್‌ಫ್ರೆಂಡ್‌ ಜತೆಗಿದ್ದಾಗಲೇ ಅರೆಸ್ಟ್‌!

ನನ್ನ ಶತ್ರುಗೆ ನೀನು ರೂಂ ಕೊಡ್ತೀಯಾ ಎಂದು ಸಿಟ್ಟಿಗೆದ್ದ ರೌಡಿಶೀಟರ್‌ವೊಬ್ಬ (Rowdy Sheeter Arrested) ಎಗ್ ರೈಸ್ ಮಾರುವವನ ಮನೆಗೆ ನುಗ್ಗಿ ಮಾರಣಾಂತಿಕ ಹಲ್ಲೆ (Assault Case) ನಡೆಸಿದ್ದ. ನಗರದ ಕುಖ್ಯಾತ ರೌಡಿ ಕುಳ್ಳು ರಿಝ್ವಾನ್ ಮಾಜಿ ಶಿಷ್ಯನಾಗಿರುವ ಸಿದ್ದಾಪುರ ರೌಡಿ ಶೀಟರ್ ನವೀನ್ ಅಲಿಯಾಸ್‌ ಸ್ಟಾರ್ ನವೀನ್ ಬಂಧಿತ ಆರೋಪಿ ಆಗಿದ್ದಾನೆ.

Assault Case : ಶತ್ರುಗೆ ರೂಂ ಕೊಡ್ತೀಯಾ ಎಂದು ಲಾಂಗ್‌ ಬೀಸಿದ; ಗರ್ಲ್‌ಫ್ರೆಂಡ್‌ ಜತೆಗಿದ್ದಾಗಲೇ ಅರೆಸ್ಟ್‌!
Deepa S

ಗೆಳೆಯನಿಗೆ ಚಾಕು ಹಾಕಿದ ಮಗ; ಅವಮಾನ ತಾಳಲಾರದೆ ತಾಯಿ ಆತ್ಮಹತ್ಯೆ, ತಂದೆಗೆ ಹೃದಯಾಘಾತ!

ಅರಮನೆನಗರೀ ಮೈಸೂರಲ್ಲಿ ಕ್ಷುಲಕ ಕಾರಣಕ್ಕೆ ಗೆಳೆಯರೇ ಸೇರಿ ಯುವಕನೊಬ್ಬನನ್ನು ಬರ್ಬರವಾಗಿ ಹತ್ಯೆ (Murder Case) ಮಾಡಿ ಜೈಲು ಸೇರಿದ್ದರು. ಬಾಲರಾಜ್‌ ಎಂಬಾತನನ್ನು ಆತನ ಸ್ನೇಹಿತರೇ ಆದ ಸಂಜಯ್, ಕಿರಣ್ ತೇಜಸ್ ಹತ್ಯೆ ಮಾಡಿದ್ದರು. ತೇಜಸ್‌ ಕೊಲೆ ಮಾಡಿ ಪರಾರಿ ಆಗಿದ್ದರೆ, ಅದೇ ಕೇಸ್​ನಲ್ಲಿ ಆತನ ತಂದೆ ಸಾಮ್ರಾಟ್‌ ಅರೆಸ್ಟ್ ಆಗಿದ್ದರು. ಇದೀಗ ಅಪ್ಪ-ಮಗ ಜೈಲುಪಾಲಾದ ವಿಷಯದಿಂದ ಮನನೊಂದ ತಾಯಿ ನೇಣಿಗೆ ಶರಣಾಗಿದ್ದಾರೆ. ತಾಯಿ ಇಂದ್ರಾಣಿ ಆತ್ಮಹತ್ಯೆ (Self Harming) ಮಾಡಿಕೊಂಡಿದ್ದಾರೆ. ಈ ವಿಷ್ಯ ಕೇಳಿ ಜೈಲಿನಲ್ಲಿದ್ದ ತಂದೆ ಸಾಮ್ರಾಟ್‌ಗೆ ಹೃದಯಾಘಾತವಾಗಿ (Heart Attack) ಮೃತಪಟ್ಟಿದ್ದಾರೆ.

Murder Case: ಗೆಳೆಯನಿಗೆ ಚಾಕು ಹಾಕಿದ ಮಗ; ಅವಮಾನದಿಂದ ತಾಯಿ ಆತ್ಮಹತ್ಯೆ, ತಂದೆ ಹೃದಯಾಘಾತಕ್ಕೆ ಬಲಿ!
Exit mobile version