ಬೆಂಗಳೂರು: ಕುಮಾರ ಬಂಗಾರಪ್ಪಗೆ ಆಪರೇಷನ್ ಹಸ್ತದ ಬಲೆಯನ್ನು ಡಿಸಿಎಂ ಬೀಸಿದ್ದಾರೆ ಎಂಬ ಮಾತು ಕಾಂಗ್ರೆಸ್ ಪಾಳಯದಲ್ಲಿ ಬಾರಿ ಚರ್ಚೆಗೆ ಗ್ರಾಸವಾಗಿದೆ. ಇದರೊಂದಿಗೆ ರಾಜ್ಯದ ಇಂದಿನ ಇನ್ನಷ್ಟು ಸುದ್ದಿಗಳನ್ನು ತಿಳಿಯಲು (Karnataka live news) ಇಲ್ಲಿ ಗಮನಿಸಿ.
ಜಸ್ಟ್ 24 ಗಂಟೆಯಲ್ಲಿ ರಾಜಧಾನಿಯಲ್ಲಿ 14 ಭೀಕರ ಅಪಘಾತ, 4 ಸಾವು!
ಐಟಿ ಸಿಟಿ ಬೆಂಗಳೂರಿನಲ್ಲಿ ವಾಹನಗಳನ್ನು ರಸ್ತೆಗಿಳಿಸುವ ಮುನ್ನ ಸವಾರರೇ ಎಚ್ಚರವಾಗಿರಿ. ಯಾಕೆಂದರೆ ನಗರದಲ್ಲಿ ಆಗುತ್ತಿರುವ ಅಪಘಾತಗಳನ್ನು (Bengaluru Accidents) ನೋಡಿದರೆ ಬೆಚ್ಚಿ ಬೀಳುಸುತ್ತಿದೆ. ಬೆಂಗಳೂರು ನಗರವೊಂದರಲ್ಲೇ ಕಳೆದ 24 ಗಂಟೆಗಳಲ್ಲಿ (Within 24 Hours) 14 ಭೀಕರ ಅಪಘಾತಗಳು ಸಂಭವಿಸಿವೆ. ಅಪಘಾತಗಳಲ್ಲಿ ನಾಲ್ವರು ದಾರುಣವಾಗಿ ಮೃತಪಟ್ಟಿದ್ದರೆ, 11 ಮಂದಿ ಗಂಭೀರ ಗಾಯಗೊಂಡಿದ್ದಾರೆ.
Bengaluru Accidents : ಜಸ್ಟ್ 24 ಗಂಟೆಯಲ್ಲಿ ರಾಜಧಾನಿಯಲ್ಲಿ 14 ಭೀಕರ ಅಪಘಾತ, 4 ಸಾವು!
ರಾಜ್ಯದಲ್ಲಿಂದು ಅಲ್ಲಲ್ಲಿ ಮಳೆ ಸಿಂಚನ, ಉಳಿದೆಡೆ ಸೂರ್ಯನ ದರ್ಶನ
ಆಗಸ್ಟ್ 22ರಂದು ಕರಾವಳಿ, ಮಲೆನಾಡು ಸೇರಿ ಒಳನಾಡಿನ ಜಿಲ್ಲೆಗಳಲ್ಲಿ ಚದುರಿದಂತೆ ಹಗುರವಾದ ಮಳೆಯಾಗುವ (Rain News) ಸಾಧ್ಯತೆಯಿದೆ. ಪ್ರತ್ಯೇಕ ಸ್ಥಳಗಳಲ್ಲಿ ಮಿಂಚು, ಗುಡುಗು (Weather report) ಇರಲಿದೆ. ರಾಜ್ಯಾದ್ಯಂತ ಬಿರುಗಾಳಿಯ ವೇಗವು ಗಂಟೆಗೆ 30-40 ಕಿ.ಮೀ ಇರಲಿದೆ.
Weather Report : ರಾಜ್ಯದಲ್ಲಿಂದು ಅಲ್ಲಲ್ಲಿ ಮಳೆ ಸಿಂಚನ, ಉಳಿದೆಡೆ ಸೂರ್ಯನ ದರ್ಶನ
ಕುಮಾರ ಬಂಗಾರಪ್ಪಗೆ ಹಸ್ತದ ಬಲೆ?
ಬೆಂಗಳೂರು: ಕುಮಾರ ಬಂಗಾರಪ್ಪ ಅವರನ್ನು ಕಾಂಗ್ರೆಸ್‌ಗೆ ಕರೆತರಬೇಕು ಎಂಬ ಡಿಮ್ಯಾಂಡ್ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್‌ನಿಂದ ಹೆಚ್ಚಿರುವ ಹಿನ್ನೆಲೆಯಲ್ಲಿ ಕುಮಾರ ಬಂಗಾರಪ್ಪಗೆ ಆಪರೇಷನ್ ಹಸ್ತದ ಬಲೆಯನ್ನು ಡಿಸಿಎಂ ಬೀಸಿದ್ದಾರೆ ಎಂಬ ಮಾತು ಕಾಂಗ್ರೆಸ್ ಪಾಳಯದಲ್ಲಿ ಬಾರಿ ಚರ್ಚೆಗೆ ಗ್ರಾಸವಾಗಿದೆ.