Site icon Vistara News

Karnataka live news: ವಿಶ್ವೇಶ್ವರ ಭಟ್‌ ಅವರ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಗೈರು

Siddaramaiah V Bhat

ವಿಶ್ವವಾಣಿ ಪ್ರಕಾಶನದ ವತಿಯಿಂದ ಬೆಂಗಳೂರಿನ ಟೌನ್‌ ಹಾಲ್‌ನಲ್ಲಿ ಆಯೋಜನೆಯಾಗಿರುವ ಆರು ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮ ಆರಂಭಗೊಂಡಿದೆ. ಈ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್‌ ಈಶ್ವರ್‌ ಭಾಗಿಯಾಗಿದ್ದಾರೆ. ಆದರೆ, ಪುಸ್ತಕ ಲೋಕಾರ್ಪಣೆ ಮಾಡಲಿದ್ದಾರೆ ಎಂದು ಆಮಂತ್ರಣ ಪತ್ರಿಕೆಯಲ್ಲಿ ಮುದ್ರಿಸಲಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇನ್ನೂ ಆಗಮಿಸಿಲ್ಲ. ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬಾರದು ಎಂಬ ಬಗ್ಗೆ ಪ್ರಗತಿಪರರಿಂದ ಒತ್ತಡವಿತ್ತು. ಅವರ ಒತ್ತಡಕ್ಕೆ ಮಣಿದು ಸಿದ್ದರಾಮಯ್ಯ ಕಾರ್ಯಕ್ರಮದಿಂದ ದೂರ ಉಳಿದರೇ ಎಂಬ ಪ್ರಶ್ನೆ ಎದುರಾಗಿದೆ. ಅವರು ಕಾರ್ಯಕ್ರಮದ ಕೊನೆಯಲ್ಲಿ ಆಗಮಿಸಬಹುದು ಎಂಬ ಮಾತೂ ಕೇಳಿಬರುತ್ತಿದೆ.

Deepa S

ರಾತ್ರಿಯಿಡಿ ಸುರಿದ ಮಳೆ ಎಫೆಕ್ಟ್‌ ಹೇಗಿದೆ ಗೊತ್ತಾ?

ಉತ್ತರ ಕರ್ನಾಟ ಸೇರಿ ಕರಾವಳಿ, ಮಲೆನಾಡಿನಲ್ಲಿ ಬಿರುಗಾಳಿ ಸಹಿತ ಮಳೆಯಾಗುತ್ತಿದ್ದು, ನಾನಾ ಅವಾಂತರವನ್ನೇ (Rain effected) ಸೃಷ್ಟಿಸಿದೆ. ರಾತ್ರಿಯಿಡಿ ಸುರಿದ ಮಳೆಗೆ (Rain News) ಜನರು ಜಾಗರಣೆ ಮಾಡುವಂತಾಗಿದೆ. ಶಾಲೆಗೆ, ಮನೆಗಳಿಗೆ ಎಲ್ಲ ನೀರು ನುಗ್ಗಿದ್ದು ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ.

Rain News : ರಾತ್ರಿಯಿಡಿ ಸುರಿದ ಮಳೆ ಎಫೆಕ್ಟ್‌; ಮನೆಗಳಿಗೆ ನುಗ್ಗಿದ ನೀರು, ಉರುಳಿದ ಮರಗಳು
Deepa S

ಬೆಳಗಾವಿಯಲ್ಲಿ ಹತ್ತಕ್ಕೂ ಹೆಚ್ಚು ಸೇತುವೆಗಳು ಮುಳುಗಡೆ

ಮಳೆ ಅವಾಂತರಕ್ಕೆ ಜನರು ತತ್ತರಿಸಿ ಹೋಗಿದ್ದಾರೆ. ಪಶ್ಚಿಮ ಘಟ್ಟ ಪ್ರದೇಶದಲ್ಲಿ ವರುಣನ ಅಬ್ಬರ ಜೋರಾಗಿದ್ದು, ಬಳ್ಳಾರಿ ನಾಲಾಗೆ ಒಳಹರಿವು ಹೆಚ್ಚಳಗೊಂಡಿದೆ. ಹೀಗಾಗಿ ಬೆಳಗಾವಿಯ ಯಳ್ಳೂರ ಗ್ರಾಮದಲ್ಲಿ ಸಾವಿರ ಎಕರೆ ಪ್ರದೇಶದ ಭತ್ತದ ಬೆಳೆ ಜಲಾವೃತಗೊಂಡಿದೆ.

Rain News : ʻಮಹಾʼ ಮಳೆಗೆ ಜನರು ತತ್ತರ; ಹತ್ತಕ್ಕೂ ಹೆಚ್ಚು ಸೇತುವೆಗಳು ಮುಳುಗಡೆ
Krishna Bhat

ವಿಶ್ವವಾಣಿ ಪ್ರಕಾಶನದ ಆರು ಪುಸ್ತಕ ಬಿಡುಗಡೆ ಮಾಡಿದ ಮಾಜಿ ಸಿಎಂ ಬೊಮ್ಮಾಯಿ

ಬೆಂಗಳೂರು: ವಿಶ್ವವಾಣಿ ಪ್ರಕಾಶನದಿಂದ ಪ್ರಕಟಿಸಿರುವ ಆರು ಪುಸ್ತಕಗಳನ್ನು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಬಿಡುಗಡೆ ಮಾಡಿದರು. ಬೆಂಗಳೂರಿನ ಟೌನ್‌ ಹಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಶ್ವೇಶ್ವರ ಭಟ್ ಅವರ ಸಂಪಾದಕರ ಸದ್ಯ ಶೋಧನೆ ಭಾಗ 1,2 & 3, ರೂಪಾ ಗುರುರಾಜ್ ಅವರ ಒಂದೊಳ್ಳೆ ಮಾತು, ಶಿಶಿರ್ ಹೆಗಡೆ ಅವರ ಶಿಶಿರ ಕಾಲ, ಕಿರಣ್ ಉಪಾಧ್ಯಾಯ ಅವರ ಹೊರದೇಶ ವಾಸಿ ಕೃತಿಗಳ ಲೋಕಾರ್ಪಣೆ ನಡೆಯಿತು.

ದೀಪ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್‌ ಈಶ್ವರ್‌, ವಿಧಾನಪರಿಷತ್‌ ಸಭಾಪತಿ ಬಸವರಾಜ ಶೆಟ್ಟಿ ಅವರ ಉಪಸ್ಥಿತಿಯಲ್ಲಿ ಆರು ಪುಸ್ತಕಗಳನ್ನು ಬಿಡುಗಡೆ ಮಾಡಿದರು.

ವಿಸ್ತಾರ ನ್ಯೂಸ್ ಪ್ರಧಾನ ಸಂಪಾದಕರಾದ ಹರಿಪ್ರಕಾಶ್ ಕೋಣೆಮನೆ, ಮಾಜಿ ಸಚಿವ ಅರವಿಂದ್ ಲಿಂಬಾವಳಿ, ನಿವೃತ್ತ IPS ಅಧಿಕಾರಿ ಭಾಸ್ಕರ್ ಪ್ರಸಾದ್ ಸೇರಿ ಗಣ್ಯರು ಉಪಸ್ಥಿತರಿದ್ದಾರೆ.

ವಾಸ್ತವವಾಗಿ ಈ ಪುಸ್ತಕಗಳನ್ನು ಸಿಎಂ ಸಿದ್ದರಾಮಯ್ಯ ಅವರು ಲೋಕಾರ್ಪಣೆ ಮಾಡಬೇಕಾಗಿತ್ತು. ಆದರೆ, ಅವರು ಆಗಮಿಸಿರಲಿಲ್ಲ. ಸಿದ್ದರಾಮಯ್ಯ ಅವರು ಈ ಕಾರ್ಯಕ್ರಮಕ್ಕೆ ಹೋಗಬಾರದು ಎಂಬ ಒತ್ತಡ ಪ್ರಗತಿಪರರಿಂದ ಕೇಳಿಬಂದಿತ್ತು.

Deepa S

ಕೇರ್‌ ಲೆಸ್‌ ಮಾಡಿದ್ದಕ್ಕೆ ಅಪ್ಪ-ಅಮ್ಮನ ಕೊಂದ ಮಗ ಅರೆಸ್ಟ್‌

ಬೆಂಗಳೂರಿನ ಬ್ಯಾಟರಾಯನಪುರದಲ್ಲಿ ಮಗನೇ ಅಪ್ಪ-ಅಮ್ಮನನ್ನು ರಾಡ್‌ನಿಂದ ಹೊಡೆದು (Double murder) ಕೊಂದಿದ್ದ. ಇದೀಗ ತಲೆಮರಿಸಿಕೊಂಡಿದ್ದ ಆರೋಪಿಯನ್ನು ಪೊಲೀಸರು (Murder case) ಬಂಧಿಸಿದ್ದಾರೆ. ಶರತ್ (26) ಬಂಧಿತ ಆರೋಪಿ. ಶಾಂತ (60), ಭಾಸ್ಕರ್ (63) ಕೊಲೆಯಾದ ದುರ್ದೈವಿಗಳು.

Murder Case : ಅಪ್ಪ-ಅಮ್ಮನ ಕೊಂದವನು ಅರೆಸ್ಟ್‌; ಕೇರ್‌ ಲೆಸ್‌ ಮಾಡಿದ್ದಕ್ಕೆ ಹತ್ಯೆ
Deepa S

ವಾರಾಂತ್ಯದಲ್ಲಿ ಬೆಂಗಳೂರು ಗಡಗಡ; ಉತ್ತರ ಕರ್ನಾಟಕದಲ್ಲಿ ಮಳೆಯ ಅಬ್ಬರ

ಈ ವೀಕೆಂಡ್‌ನಲ್ಲಿ ಏನಾದರೂ ಔಟಿಂಗ್‌ ಪ್ಲ್ಯಾನ್ಸ್‌ ಹಾಕಿಕೊಂಡಿದ್ದರೆ ನಿಮಗೆ ಮಳೆ (Rain News) ಅಡ್ಡಿಯಾಗಲಿದೆ. ಯಾಕೆಂದರೆ ವಾರಾಂತ್ಯದಲ್ಲಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ (Weather report) ನೀಡಿದೆ.

Weather report : ವಾರಾಂತ್ಯದಲ್ಲಿ ಬೆಂಗಳೂರು ಗಡಗಡ; ಉತ್ತರ ಕರ್ನಾಟಕದಲ್ಲಿ ಮಳೆಯ ಅಬ್ಬರ
Exit mobile version