Site icon Vistara News

Karnataka live news: ಸೆಪ್ಟೆಂಬರ್ 26ರಂದು ಬೆಂಗಳೂರು ಬಂದ್ ಕರೆ; ಹೆಚ್ಚಿದ ಕಾವೇರಿ ಕಿಚ್ಚು

Cauvery protest at Mandya

ಬೆಂಗಳೂರು: ಕಾವೇರಿ ವಿಚಾರದಲ್ಲಿ ರಾಜ್ಯಕ್ಕೆ ಆಗಿರುವ ಅನ್ಯಾಯ ಖಂಡಿಸಿ ಇಂದು ಮಂಡ್ಯ ಬಂದ್‌ ನಡೆದಿದೆ. ರಾಜದಾನಿಯೂ ಸೇರಿದಂತೆ ಇಡೀ ರಾಜ್ಯಕ್ಕೆ ಹೋರಾಟ (Cauvery protest) ವಿಸ್ತರಿಸುತ್ತಿದೆ. ಇದರ ನಡುವೆಯೇ ನಾನಾ ಸಂಘಟನೆಗಳು ಸೇರಿ ಬೆಂಗಳೂರು ಬಂದ್ ಕರೆ ನೀಡಿವೆ. ಫ್ರೀಡಂ ಪಾರ್ಕ್ ನಲ್ಲಿ ಕರ್ನಾಟಕ ಜಲ ಸಂರಕ್ಷಣಾ ಸಮಿತಿ ನೇತೃತ್ವದ ಸಭೆಯಲ್ಲಿ ಬಂದ್‌ಗೆ ನಿರ್ಧಾರ ಮಾಡಲಾಗಿದೆ. ಅಂದು ಎಲ್ಲಾ ಸಾರ್ವಜನಿಕ ಸೇವೆ ಸ್ಥಗಿತವಾಗಲಿದೆ, ಸಂಚಾರ ವ್ಯವಸ್ಥೆ ಇರುವುದಿಲ್ಲ. ಶಾಲಾ ಕಾಲೇಜ್‌ ,ಸರ್ಕಾರಿ ಕಚೇರಿ ಕಾರ್ಯಾ ಚಟುವಟಿಕೆ ಸ್ಥಗಿತವಾಗಲಿದೆ. ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿ ಬಂದ್ ಮಾಡಲಾಗುತ್ತದೆ ಎಂದು ಸಂಯೋಜಕರು ತಿಳಿಸಿದ್ದಾರೆ.

ರಾಜ್ಯದ ಇಂದಿನ ಇನ್ನಷ್ಟು ಮಹತ್ವದ ಸುದ್ದಿಗಳನ್ನು (Karnataka live news) ಓದಲು ಇಲ್ಲಿ ಗಮನಿಸಿ.

Deepa S

ರಾಜ್ಯದಲ್ಲಿ ಮಳೆಯಾಟ ಆಟಕ್ಕುಂಟು ಆದರೆ ಲೆಕ್ಕಕ್ಕಿಲ್ಲ..

ರಾಜ್ಯದ ಹಲವೆಡೆ ಮಳೆರಾಯ ಕಣ್ಣಾಮುಚ್ಚಾಲೆ ಆಟವಾಡುತ್ತಿದ್ದಾನೆ. ಕರಾವಳಿ ಮತ್ತು ದಕ್ಷಿಣ ಒಳನಾಡಿನ ಪ್ರತ್ಯೇಕ ಕಡೆಗಳಲ್ಲಿ ಭಾರಿ ಮಳೆಯಾಗುವ (Weather report) ನಿರೀಕ್ಷೆ ಇದೆ. ಮಲೆನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದೆ. ಮಳೆಯಾಟ (Rain News) ಆಟಕ್ಕುಂಟು ಲೆಕ್ಕಿಲ್ಲ ಎಂಬಂತೆ ಆಗಿದೆ.

Weather report : ರಾಜ್ಯದಲ್ಲಿ ಮಳೆಯಾಟ ಆಟಕ್ಕುಂಟು ಆದರೆ ಲೆಕ್ಕಕ್ಕಿಲ್ಲ..
Deepa S

ಸಿಲಿಂಡರ್‌ ಸ್ಫೋಟ; 7 ದಿನಗಳು ನರಳಾಡಿ ಪ್ರಾಣಬಿಟ್ಟ ಮಹಿಳೆ

ಗ್ಯಾಸ್‌ ಸಿಲಿಂಡರ್‌ ಸ್ಫೋಟಗೊಂಡು (Cylinder blast) ಗಂಭೀರ ಗಾಯಗೊಂಡಿದ್ದ ಮಹಿಳೆ ಚಿಕಿತ್ಸೆ ಫಲಿಸದೇ ಶುಕ್ರವಾರ (ಸೆ.23) ಮೃತಪಟ್ಟಿದ್ದಾರೆ. ಸುಧಾ ಬಾಯಿ (34) ಮೃತ ದುರ್ದೈವಿ.

Cylinder blast : ಸಿಲಿಂಡರ್‌ ಸ್ಫೋಟ; 7 ದಿನಗಳು ನರಳಾಡಿ ಪ್ರಾಣಬಿಟ್ಟ ಮಹಿಳೆ
Deepa S

ಸಕ್ಕರೆ ಕಾರ್ಖಾನೆಯಲ್ಲಿ ವಿದ್ಯುತ್‌ ಸ್ಪರ್ಶಿಸಿ ಸುಟ್ಟು ಕರಕಲಾದ ಕಾರ್ಮಿಕ

ಅಫಜಲಪುರ ತಾಲೂಕಿನ ಚುಣಮಗೇರಾದಲ್ಲಿರುವ ಕೆಪಿಆರ್‌ ಸಕ್ಕರೆ ಕಾರ್ಖಾನೆಯಲ್ಲಿ ಕರೆಂಟ್‌ ಶಾಕ್‌ಗೆ (Electric shock) ಕಾರ್ಮಿಕನೊರ್ವ ಮೃತಪಟ್ಟಿರುವ ಘಟನೆ ನಡೆದಿದೆ. ಯುವರಾಜ್ ಚೌಹಾಣ್ (20) ಮೃತ ದುರ್ದೈವಿ.

Electric shock : ಸಕ್ಕರೆ ಕಾರ್ಖಾನೆಯಲ್ಲಿ ವಿದ್ಯುತ್‌ ಸ್ಪರ್ಶಿಸಿ ಸುಟ್ಟು ಕರಕಲಾದ ಕಾರ್ಮಿಕ
Deepa S

ನೀರಿನ ತೊಟ್ಟಿಯಲ್ಲಿ ತೇಲುತ್ತಿತ್ತು ಮಗುವಿನ ಶವ; ಮೊಮ್ಮಗಳನ್ನೇ ಕೊಂದು ಬಿಟ್ಟನಾ!

ಕೌಟುಂಬಿಕ ಕಲಹಕ್ಕೆ ತಾತನೇ ಮೊಮ್ಮಗಳನ್ನು ಹತ್ಯೆ ಮಾಡಿದ್ದಾಗಿ ಮೃತಳ ತಾಯಿ ಪೊಲೀಸ್‌ ಠಾಣೆ (Murder Case) ಮೆಟ್ಟಿಲೇರಿದ್ದಾಳೆ.

http://vistaranews.com/karnataka/chikkaballapura/murder-case-did-grandfather-kill-his-granddaughter/461945.html

Deepa S

ಮಲಗಿದ್ದವಳ ಮೇಲೆ ಕಲ್ಲು ಎತ್ತಿಹಾಕಿ ಕೊಂದ; ಬಳಿಕ ಮರಕ್ಕೆ ನೇಣು ಬಿಗಿದುಕೊಂಡ ಕುಡುಕ ಪತಿ

ರಾಯಚೂರಿನ ಮಾನ್ವಿ ತಾಲೂಕಿನ ರಾಜೋಳ್ಳಿ ಗ್ರಾಮದಲ್ಲಿ ಪತ್ನಿಯನ್ನು ಹತ್ಯೆಗೈದು (Murder case) ಪತಿ ನೇಣಿಗೆ ಶರಣಾಗಿದ್ದಾನೆ. ಅಂಬಮ್ಮ (31) ಹತ್ಯೆಯಾದ ದುರ್ದೈವಿ.

Murder Case : ಮಲಗಿದ್ದವಳ ಮೇಲೆ ಕಲ್ಲು ಎತ್ತಿಹಾಕಿ ಕೊಂದ; ಬಳಿಕ ಮರಕ್ಕೆ ನೇಣು ಬಿಗಿದುಕೊಂಡ ಕುಡುಕ ಪತಿ!
Exit mobile version