Site icon Vistara News

Karnataka live news: ಸೆಪ್ಟೆಂಬರ್ 26ರಂದು ಬೆಂಗಳೂರು ಬಂದ್ ಕರೆ; ಹೆಚ್ಚಿದ ಕಾವೇರಿ ಕಿಚ್ಚು

Cauvery protest at Mandya

ಬೆಂಗಳೂರು: ಕಾವೇರಿ ವಿಚಾರದಲ್ಲಿ ರಾಜ್ಯಕ್ಕೆ ಆಗಿರುವ ಅನ್ಯಾಯ ಖಂಡಿಸಿ ಇಂದು ಮಂಡ್ಯ ಬಂದ್‌ ನಡೆದಿದೆ. ರಾಜದಾನಿಯೂ ಸೇರಿದಂತೆ ಇಡೀ ರಾಜ್ಯಕ್ಕೆ ಹೋರಾಟ (Cauvery protest) ವಿಸ್ತರಿಸುತ್ತಿದೆ. ಇದರ ನಡುವೆಯೇ ನಾನಾ ಸಂಘಟನೆಗಳು ಸೇರಿ ಬೆಂಗಳೂರು ಬಂದ್ ಕರೆ ನೀಡಿವೆ. ಫ್ರೀಡಂ ಪಾರ್ಕ್ ನಲ್ಲಿ ಕರ್ನಾಟಕ ಜಲ ಸಂರಕ್ಷಣಾ ಸಮಿತಿ ನೇತೃತ್ವದ ಸಭೆಯಲ್ಲಿ ಬಂದ್‌ಗೆ ನಿರ್ಧಾರ ಮಾಡಲಾಗಿದೆ. ಅಂದು ಎಲ್ಲಾ ಸಾರ್ವಜನಿಕ ಸೇವೆ ಸ್ಥಗಿತವಾಗಲಿದೆ, ಸಂಚಾರ ವ್ಯವಸ್ಥೆ ಇರುವುದಿಲ್ಲ. ಶಾಲಾ ಕಾಲೇಜ್‌ ,ಸರ್ಕಾರಿ ಕಚೇರಿ ಕಾರ್ಯಾ ಚಟುವಟಿಕೆ ಸ್ಥಗಿತವಾಗಲಿದೆ. ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿ ಬಂದ್ ಮಾಡಲಾಗುತ್ತದೆ ಎಂದು ಸಂಯೋಜಕರು ತಿಳಿಸಿದ್ದಾರೆ.

ರಾಜ್ಯದ ಇಂದಿನ ಇನ್ನಷ್ಟು ಮಹತ್ವದ ಸುದ್ದಿಗಳನ್ನು (Karnataka live news) ಓದಲು ಇಲ್ಲಿ ಗಮನಿಸಿ.

Deepa S

ಚಲಿಸುತ್ತಿದ್ದಾಗಲೇ ಸುಟ್ಟು ಕರಕಲಾದ ಕಾರು; ಬೈಕ್‌ಗೆ ಬಸ್‌ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಸಾವು

ರಸ್ತೆ ಅಪಘಾತದಲ್ಲಿ ಡಿಎಸ್‌ಎಸ್‌ ಮುಖಂಡ ಮೃತಪಟ್ಟಿರುವ ಘಟನೆ ತುಮಕೂರಲ್ಲಿ ನಡೆದಿದೆ. ಇತ್ತ ಚಿಕ್ಕಮಗಳೂರಲ್ಲಿ ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಕ್ಷಣಾರ್ಧದಲ್ಲೇ ಸುಟ್ಟು ಕರಕಲಾಗಿದೆ.

https://vistaranews.com/karnataka/accident-case-a-car-that-was-burnt-down-while-moving-bus-hits-bike-rider-dies-on-the-spot/461845.html

Deepa S

ಮನೆಯಲ್ಲಿ ನೇತಾಡುತ್ತಿತ್ತು ಹೆಂಡ್ತಿ ಶವ; ಚಿತೆಯ ಫೋಟೊ ಹಾಕಿದ ಗಂಡ!

ಚಿತ್ರದುರ್ಗದಲ್ಲಿ ಗೃಹಿಣಿಯೊಬ್ಬಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಪೋಷಕರು ಕೊಲೆ ಎಂದು ಶಂಕೆ ವ್ಯ‌ಕ್ತಪಡಿಸಿದ್ದಾರೆ. ಇತ್ತ ಮೃತಳ ಪತಿ ಮಾರ್ಮಿಕವಾಗಿ ಸ್ಟೇಟಸ್‌ವೊಂದನ್ನು ಹಾಕಿದ್ದಾನೆ.

https://vistaranews.com/karnataka/chitradurga/suspicious-deathwoman-found-hanging/461806.html

Krishna Bhat

Cauvery Protest : ಕಾಂಗ್ರೆಸ್‌ ಪಕ್ಷ ತಮಿಳುನಾಡಿನ ಏಜೆಂಟ್‌ ಎಂದ ಬಿಎಸ್‌ವೈ, ಬಿಜೆಪಿಯಿಂದ ಬೀದಿಗಿಳಿದು ಹೋರಾಟ
Deepa S

ಹಿಟ್‌ ಆ್ಯಂಡ್‌ ರನ್‌; ಬೈಕ್‌ ಸವಾರ ಸತ್ತರೂ ನೋಡದೆ ಹೋದ ಕಾರು ಚಾಲಕ!

ಬೆಂಗಳೂರಿನ ಕೆಂಗೇರಿ ಸಮೀಪದ ಗಾಣಕಲ್ ರಸ್ತೆಯಲ್ಲಿ ಹಿಟ್‌ ಆ್ಯಂಡ್‌ ರನ್‌ಗೆ (Hit And Run case) ಬೈಕ್ ಸವಾರ (Road Accident) ಬಲಿಯಾಗಿದ್ದಾನೆ. ಅಜಯ್ ಕುಮಾರ್ ಮೃತ ದುರ್ದೈವಿ.

https://vistaranews.com/karnataka/bengaluru/road-accident-car-hits-bike-rider-dies-on-the-spot/461749.html

Deepa S

ನಾಳೆವರೆಗೂ ರಾಜ್ಯದ ಹಲವೆಡೆ ಮಳೆ ಮುನ್ಸೂಚನೆ

ಸೆ.23-24ರಂದು ಹಲವೆಡೆ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ (Weather report) ನೀಡಿದೆ. ಕರಾವಳಿಯ ಬಹುತೇಕ ಕಡೆಗಳಲ್ಲಿ ಮತ್ತು ಒಳನಾಡಿನ ಹಲವು ಕಡೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ (Rain News) ಸಾಧ್ಯತೆ ಇದೆ. ಆದರೆ ಉತ್ತರ ಒಳನಾಡಲ್ಲಿ ಕೆಲವು ಜಿಲ್ಲೆಗಳಲ್ಲಿ ಭಾರಿ ಮಳೆಯ ಮುನ್ನೆಚ್ಚರಿಕೆ ನೀಡಲಾಗಿದೆ.

https://vistaranews.com/weather/weather-report-heavy-rains-predicted-in-several-parts-of-the-state-till-tomorrow/461637.html

Exit mobile version