Site icon Vistara News

Karnataka live news: ಸೆಪ್ಟೆಂಬರ್ 26ರಂದು ಬೆಂಗಳೂರು ಬಂದ್ ಕರೆ; ಹೆಚ್ಚಿದ ಕಾವೇರಿ ಕಿಚ್ಚು

Cauvery protest at Mandya

ಬೆಂಗಳೂರು: ಕಾವೇರಿ ವಿಚಾರದಲ್ಲಿ ರಾಜ್ಯಕ್ಕೆ ಆಗಿರುವ ಅನ್ಯಾಯ ಖಂಡಿಸಿ ಇಂದು ಮಂಡ್ಯ ಬಂದ್‌ ನಡೆದಿದೆ. ರಾಜದಾನಿಯೂ ಸೇರಿದಂತೆ ಇಡೀ ರಾಜ್ಯಕ್ಕೆ ಹೋರಾಟ (Cauvery protest) ವಿಸ್ತರಿಸುತ್ತಿದೆ. ಇದರ ನಡುವೆಯೇ ನಾನಾ ಸಂಘಟನೆಗಳು ಸೇರಿ ಬೆಂಗಳೂರು ಬಂದ್ ಕರೆ ನೀಡಿವೆ. ಫ್ರೀಡಂ ಪಾರ್ಕ್ ನಲ್ಲಿ ಕರ್ನಾಟಕ ಜಲ ಸಂರಕ್ಷಣಾ ಸಮಿತಿ ನೇತೃತ್ವದ ಸಭೆಯಲ್ಲಿ ಬಂದ್‌ಗೆ ನಿರ್ಧಾರ ಮಾಡಲಾಗಿದೆ. ಅಂದು ಎಲ್ಲಾ ಸಾರ್ವಜನಿಕ ಸೇವೆ ಸ್ಥಗಿತವಾಗಲಿದೆ, ಸಂಚಾರ ವ್ಯವಸ್ಥೆ ಇರುವುದಿಲ್ಲ. ಶಾಲಾ ಕಾಲೇಜ್‌ ,ಸರ್ಕಾರಿ ಕಚೇರಿ ಕಾರ್ಯಾ ಚಟುವಟಿಕೆ ಸ್ಥಗಿತವಾಗಲಿದೆ. ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿ ಬಂದ್ ಮಾಡಲಾಗುತ್ತದೆ ಎಂದು ಸಂಯೋಜಕರು ತಿಳಿಸಿದ್ದಾರೆ.

ರಾಜ್ಯದ ಇಂದಿನ ಇನ್ನಷ್ಟು ಮಹತ್ವದ ಸುದ್ದಿಗಳನ್ನು (Karnataka live news) ಓದಲು ಇಲ್ಲಿ ಗಮನಿಸಿ.

Harish Kera

ವಿಸ್ತರಿಸುತ್ತಿದೆ ಕಾವೇರಿ ಹೋರಾಟ

ಬೆಂಗಳೂರು: ಕಾವೇರಿ ವಿಚಾರದಲ್ಲಿ ರಾಜ್ಯಕ್ಕೆ ಸುಪ್ರೀಂ ಕೋರ್ಟ್‌ನಲ್ಲಿ ಆಗಿರುವ ಅನ್ಯಾಯ ಖಂಡಿಸಿ ಇಂದು ಮಂಡ್ಯ ಹಾಗೂ ಮದ್ದೂರುಗಳನ್ನು ಬಂದ್‌ ಮಾಡಲಾಗಿದೆ. ರಾಜಧಾನಿಯಲ್ಲೂ ಇಂದು ಅನೇಕ ಪ್ರತಿಭಟನೆಗಳು ಆಯೋಜನೆಯಾಗಿವೆ.

Exit mobile version