Site icon Vistara News

Cauvery water dispute : ಕಾವೇರಿ ಜಲ ವಿವಾದ; ಕಾನೂನು ಹೋರಾಟಕ್ಕೆ ಸರ್ವಪಕ್ಷ ಮುಖಂಡರ ತೀರ್ಮಾನ

Anna From Mexico Poster

ಬೆಂಗಳೂರು: ಕಾವೇರಿ, ಮೇಕೆದಾಟು ಮತ್ತು ಮಹದಾಯಿ ಜಲ ವಿವಾದಗಳ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರ ಅಧ್ಯಕ್ಷತೆಯಲ್ಲಿ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸರ್ವಪಕ್ಷ ಸಭೆ ನಡೆದಿದ್ದು, ಕಾವೇರಿ ನೀರು ಬಿಡುವ ವಿಚಾರವಾಗಿ ಕಾನೂನು ಹೋರಾಟ ನಡೆಸುವುದೇ ಸೂಕ್ತ ಎಂಬ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ.

Deepa S

ಕರಾವಳಿಯಲ್ಲಿ ತುಂತುರು, ಬೆಂಗಳೂರಲ್ಲಿ ಹಗುರ ಮಳೆ

ಮುಂಗಾರು ಮಂಕಾಗಿರುವ ಈ ಹೊತ್ತಿನಲ್ಲೂ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಕೆಲವು ಕಡೆಗಳಲ್ಲಿ, ಉತ್ತರ ಒಳನಾಡಿನ ಒಂದೆರಡು ಸ್ಥಳಗಳಲ್ಲಿ ಮಳೆಯಾಗುವ (Rain News) ಸಾಧ್ಯತೆ ಇದೆ. ರಾಜ್ಯದ ಪ್ರತ್ಯೇಕ ಸ್ಥಳಗಳಲ್ಲಿ ಮಿಂಚು ಸಹಿತ ಗುಡುಗು ಇರಲಿದೆ ಎಂದು ಹವಾಮಾನ ಇಲಾಖೆ (Weather report) ಮುನ್ಸೂಚನೆಯನ್ನು ನೀಡಿದೆ.

Weather Report : ಕರಾವಳಿಯಲ್ಲಿ ತುಂತುರು, ಬೆಂಗಳೂರಲ್ಲಿ ಹಗುರ ಮಳೆ
Krishna Bhat

ಇಸ್ರೊ, ವಿಜ್ಞಾನಿಗಳಿಗೆ ಶುಭ ಹಾರೈಸಿದ ಶ್ರೀಶೈಲ‌ ಪೀಠಾಧಿಪತಿಗಳು

ಬೆಳಗಾವಿ: ಚಂದ್ರಯಾನ-3 ಯಶಸ್ವಿಯಾಗಲಿ ಎಂದು ಭಾರತೀಯ ವಿಜ್ಞಾನ ಸಂಸ್ಥೆ ಹಾಗೂ ವಿಜ್ಞಾನಿಗಳಿಗೆ ೧೦೦೮ ಶ್ರೀಶೈಲ‌ ಪೀಠಾಧಿಪತಿಗಳು ಡಾ. ಚನ್ನಸಿದ್ದರಾಮ ಪಂಡೀತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಶುಭ ಹಾರೈಸಿದ್ದಾರೆ.

ಶ್ರೀಶೈಲ ಮಲ್ಲಿಕಾರ್ಜುನ ಹಾಗೂ ಪಂಡಿತಾರಾಧ್ಯರಿಗೆ ವಿಶೇಷ ಪೂಜೆ ಸಲ್ಲಿಸಿದ ಸ್ವಾಮೀಜಿಗಳು ಕಳೆದ ಪ್ರಯತ್ನ ವಿಫಲವಾಗಿತ್ತು. ಈ ಬಾರಿ ಚಂದ್ರಯಾನ 3 ದೇವರ ಕೃಪಾಶೀರ್ವಾದಿಂದ ಯಶಸ್ವಿಯಾಗಲಿ ಎಂದು ಪ್ರಾರ್ಥನೆ ಸಲ್ಲಿಸಿದರು.

Krishna Bhat

ಮಂತ್ರಾಲಯ ಸನ್ನಿಧಿಯಲ್ಲಿ ಚಂದ್ರಯಾನ 3 ಯಶಸ್ಸಿಗೆ ಪೂಜೆ

ಮೈಸೂರು ಬಿಜೆಪಿ ಸದಸ್ಯರು ಮಂತ್ರಾಲಯ ರಾಯರ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಶಾಸಕ ಟಿ.ಎಸ್.ಶ್ರೀವತ್ಸ ನೇತೃತ್ವದಲ್ಲಿ ರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೆ ಪೂಜೆ ನಡೆಯಿತು. ಪೂಜೆಗಾಗಿ ಮೈಸೂರಿನಿಂದ ತೆರಳಿರುವ 82 ಜನರ ಬಿಜೆಪಿ ನಿಯೋಗವು ವಿಜ್ಞಾನಿಗಳ ಶ್ರಮಕ್ಕೆ ಫಲ ನೀಡುವಂತೆ ಬೇಡಿಕೊಂಡಿತು.

ವಿಜ್ಞಾನಿಗಳು ಹಾಗೂ ಪ್ರಧಾನಿ ನರೇಂದ್ರ ಮೋದಿಗೆ ಜೈಕಾರ ಕೂಗಿದರು.

Krishna Bhat

ಕಾಶಿ ವಿಶ್ವನಾಥ ದೇವರ ಮೊರೆ ಹೋದ ರಾಯಚೂರಿನ ಪುಟಾಣಿಗಳು

ರಾಯಚೂರು: ಚಂದ್ರಯಾನ 3 ಸಕ್ಸಸ್‌ಗಾಗಿ ಕಾಶಿ ವಿಶ್ವನಾಥೇಶ್ವರ ದೇವರ ಮೊರೆ ಹೋಗಿದ್ದಾರೆ ರಾಯಚೂರಿನ ಪುಟಾಣಿ ಮಕ್ಕಳು. ನಗರದ ಎನ್ ಐ ಜಿ ಕಾಲೊನಿಯಲ್ಲಿರುವ ಪ್ರಸಿದ್ಧ ದೇವಸ್ಥಾನದಲ್ಲಿ ದೇವರಿಗೆ ಪಂಚಾಮೃತ ಅಭಿಷೇಕ ಮಾಡಿ ಪ್ರಾರ್ಥನೆ ಸಲ್ಲಿಸಿದರು.

ಬೆಳಗ್ಗೆಯಿಂದಲೇ ವಿಶೇಷ ಪ್ರಾರ್ಥನೆ ಆರಂಭವಾಗಿದ್ದು, ದೇವರ ಮುಂದೆ ಮಕ್ಕಳು ಭಜನೆ, ಶ್ಲೋಕ ಪಠಣ ನಡೆಸುತ್ತಿದ್ದಾರೆ. ಪುಟಾಣಿ ಮಕ್ಕಳ ಪ್ರಾರ್ಥನೆಗೆ ಹೆತ್ತವರು ಸಾಥ್‌ ನೀಡಿದ್ದಾರೆ.

ʻʻಚಂದ್ರಯಾನ 3 ಯಶಸ್ವಿಯಾಗಲಿ ಎಂದು ಅಭಿಷೇಕ ಮಾಡ್ತಿದ್ದೀವಿ. ದೇವರ ಮುಂದೆ ಭಜನೆ ಶ್ಲೋಕಗಳನ್ನ ಹೇಳಿದ್ವಿ. ಚಂದ್ರಯಾನ 3 ಸಕ್ಸಸ್ ಆದ್ರೆ ನಮಗೆ ಚಂದ್ರನನ್ನು ಹತ್ತಿರದಿಂದ ನೋಡಲು ಸಿಗುತ್ತೆ. ನಮಗೆ ಇವತ್ತು ತುಂಬಾ ಖುಷಿಯಾಗ್ತಾ ಇದೆ. ಚಂದ್ರಯಾನ 3 ಸಕ್ಸಸ್ ಆಗಬೇಕು ಅಂತʼʼ ಎಂದು ಪುಟಾಣಿ ಮಕ್ಕಳು ಹೇಳಿದರು.

ʻʻನಾವು ಚಂದಮಾಮ ಬಾ ಅಂತ ಕರೆಯುತ್ತೇವೆ. ನಮಗೆ ಚಂದಮಾಮ ಅಂದ್ರೆ ಬಹಳ ಇಷ್ಟ. ಅದಕ್ಕೆ ದೇವರಿಗೆ ನಾವು ಪೂಜೆಯನ್ನ ಮಾಡಿದ್ವಿ. ಚಂದ್ರಯಾನ ಸಕ್ಸಸ್ ಆಗ್ಲಿ ಅಂತ ಬೇಡಿಕೊಂಡಿದ್ದೀವಿ. ನಾವು ಗುರುವಿಗೆ ಹನುವಂತ ಶ್ಲೋಕವನ್ನು ಹೇಳಿದ್ದೀವಿʼʼ ಎಂದರು.

Krishna Bhat

ಚಂದ್ರಯಾನ-3 ಗೆ ಶುಭ ಹಾರೈಸಿದ ರಂಭಾಪುರಿ ಶ್ರೀಗಳು

ಚಿಕ್ಕಮಗಳೂರು: ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಪೀಠದ ಡಾ.ವೀರಸೋಮೇಶ್ವರ ಜಗದ್ಗುರುಗಳು ಚಂದ್ರಯಾನ ಯಶಸ್ಸಿಗೆ ಶುಭ ಹಾರೈಸಿದ್ದಾರೆ. ʻʻಇಂದು ಇಡೀ ಜಗತ್ತೆ ಭಾರತದತ್ತ ಮುಖ ಮಾಡಿದೆ. ನಮ್ಮ ವಿಜ್ಞಾನಿಗಳ ಈ ಕೆಲಸ ವಿಶ್ವಕ್ಕೆ ಮಾದರಿಯಾಗಲಿ. ವಿಜ್ಞಾನಿಗಳಿಗೆ ಬೆನ್ನುಲುಬಾಗಿ ನಿಂತ ಪ್ರಧಾನಿ ಮೋದಿಗೂ ಅಭಿನಂದನೆಗಳುʼʼ ಎಂದು ರಂಭಾಪುರಿ ಶ್ರೀಗಳು ಹೇಳಿದ್ದಾರೆ.

ʻʻಸಾವಿರಾರು ವಿಜ್ಞಾನಿಗಳ ತಂಡದಲ್ಲಿ ಬಾಳೆಹೊನ್ನೂರು ಮಹಿಳೆಯೂ ಇರುವುದು ನಮ್ಮ ಹೆಮ್ಮೆ. ಚಂದ್ರಯಾನ-3 ಇಸ್ರೋ ತಂಡದಲ್ಲಿ ಬಾಳೆಹೊನ್ನೂರಿನ ಕೇಶವಮೂರ್ತಿ-ಮಂಗಳ ಪುತ್ರಿ ಡಾ.ಕೆ.ನಂದಿನಿ ಅವರೂ ಇರುವುದು ನಮಗೆ ಹೆಮ್ಮೆʼʼ ಎಂದು ಸ್ವಾಮೀಜಿ ಹೇಳಿದರು. ಚಂದ್ರಯಾನ-3 ಲ್ಯಾಂಡಿಂಗ್ ಸುವರ್ಣ ಘಳಿಗೆಯನ್ನು ನಾನು ಕಣ್ತುಂಬಿಕೊಳ್ಳುತ್ತೇನೆ. ಆ ಕ್ಷಣಕ್ಕಾಗಿ ಕಾಯುತ್ತಿದ್ದೇನೆ ಎಂದು ಹೇಳಿದರು.

Exit mobile version