ಬೆಂಗಳೂರು: ಇಂದು ವೀರಶೈವ ಲಿಂಗಾಯತ ಮಹಾಸಭಾದ 24ನೇ ರಾಷ್ಟ್ರೀಯ ಅಧಿವೇಶನ ದಾವಣಗೆರೆ ನಗರದ ಎಂಬಿಎ ಕಾಲೇಜು ಮೈದಾನದಲ್ಲಿ ನಡೆಯಲಿದೆ. ಇದರೊಂದಿಗೆ ರಾಜ್ಯದ ಇನ್ನಷ್ಟು ಮಹತ್ವದ ಸುದ್ದಿ ಬೆಳವಣಿಗೆಗಳಿಗಾಗಿ (Karnataka live news) ಇಲ್ಲಿ ಗಮನಿಸಿ.
ಆಟವಾಡುತ್ತಾ ನೀರಿನ ತೊಟ್ಟಿಗೆ ಬಿದ್ದ 3 ವರ್ಷದ ಮಗು ಸಾವು
ಆಟವಾಡುತ್ತಾ ಮಗುವೊಂದು ಅಚಾನಕ್ ಆಗಿ ನೀರಿನ ತೊಟ್ಟಿಗೆ ಬಿದ್ದು (Child Death) ಮೃತಪಟ್ಟಿದೆ. ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಲಕ್ಕೊಳ್ಳಿ ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ.
Child Death : ಆಟವಾಡುತ್ತಾ ನೀರಿನ ತೊಟ್ಟಿಗೆ ಬಿದ್ದ 3 ವರ್ಷದ ಮಗು ಸಾವು
ಓಂಶಕ್ತಿಗೆ ತೆರಳುತ್ತಿದ್ದ ಬಸ್ ಪಲ್ಟಿ; ಮಾಲಾಧಾರಿಗಳು ಗಂಭೀರ
ಬೆಂಗಳೂರು ಹೊರವಲಯದ ಆನೇಕಲ್ ತಾಲ್ಲೂಕಿನ ಬಿದರಗುಪ್ಪೆ ಕೆರೆ ಕಟ್ಟೆ ಸಮೀಪ ಓಂಶಕ್ತಿಗೆ ತೆರಳುತ್ತಿದ್ದ ಬಸ್ ಪಲ್ಟಿಯಾಗಿದೆ. ಓಂಶಕ್ತಿ ಮಾಲಾಧಾರಿಗಳಿಗೆ (Road Accident) ಗಂಭೀರ ಗಾಯವಾಗಿದೆ. ಬೆಳಗ್ಗೆ 5:30ರ ಸುಮಾರಿಗೆ ಈ ಘಟನೆ ನಡೆದಿದೆ.
Road Accident : ಓಂಶಕ್ತಿಗೆ ತೆರಳುತ್ತಿದ್ದ ಬಸ್ ಪಲ್ಟಿ; ಮಾಲಾಧಾರಿಗಳು ಗಂಭೀರ
ಜ.18 ರಿಂದ ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನ; ವಿಶ್ವ ಗುರು ಬಸವಣ್ಣ ಅನಾವರಣ
ಸಸ್ಯಕಾಶಿ ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನಕ್ಕೆ (Lalbagh Flower Show 2024) ಸಜ್ಜಾಗಿದ್ದು, ಈ ಬಾರಿ ಬಗೆ ಬಗೆಯ ಹೂಗಳ ಮೂಲಕ ವಿಶ್ವ ಗುರು ಬಸವಣ್ಣರ ಜೀವನ ಚರಿತ್ರೆ ಹಾಗೂ ವಚನ ಸಾಹಿತ್ಯದ (Basavanna Flower show) ದರ್ಶನವಾಗಲಿದೆ.
2024 ಜನವರಿ 26ರ ಗಣರಾಜ್ಯೋತ್ಸವದ ಅಂಗವಾಗಿ ತೋಟಗಾರಿಕೆ ಇಲಾಖೆ 215ನೇ ಫಲಪುಷ್ಪ ಪ್ರದರ್ಶನ ಆಯೋಜಿಸುತ್ತಿದೆ. ಜನವರಿ 18 ರಿಂದ 28ರವರಗೆ ಒಟ್ಟು 11 ದಿನಗಳ ಕಾಲ ಫ್ಲವರ್ ಶೋ ನಡೆಯಲಿದೆ.
Lalbagh Flower Show : ಜ.18 ರಿಂದ ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನ; ವಿಶ್ವ ಗುರು ಬಸವಣ್ಣ ಅನಾವರಣ
ಇಂದು ವೀರಶೈವ ಲಿಂಗಾಯತ ಅಧಿವೇಶನ
ದಾವಣಗೆರೆ: ಇಂದು ವೀರಶೈವ ಲಿಂಗಾಯತ ಮಹಾಸಭಾದ 24ನೇ ರಾಷ್ಟ್ರೀಯ ಅಧಿವೇಶನ ದಾವಣಗೆರೆ ನಗರದ ಎಂಬಿಎ ಕಾಲೇಜು ಮೈದಾನದಲ್ಲಿ ನಡೆಯಲಿದೆ. 50ಕ್ಕೂ ಹೆಚ್ಚು ಹಾಲಿ, ಮಾಜಿ ಶಾಸಕರು, ಸಚಿವರು, ಸಂಸದರು ಭಾಗಿಯಾಗಲಿದ್ದಾರೆ. ಜಾತಿಗಣತಿ ವರದಿ ಬಿಡುಗಡೆಗೆ ವಿರೋಧ ವ್ಯಕ್ತವಾಗುವ ಸಾಧ್ಯತೆ ಇದೆ.