Site icon Vistara News

Karnataka Live News: ರಾಜ್ಯದ ಇಂದಿನ ಪ್ರಮುಖ ಸುದ್ದಿಗಳು; ಕೆರಳಿದ ಹಿಜಾಬ್‌ ವಿವಾದ

ಬೆಂಗಳೂರು: ಹಿಜಾಬ್‌ ನಿಷೇಧ (Hijab ban) ವಾಪಸ್‌ ಕುರಿತು ಸಿಎಂ ಸಿದ್ದರಾಮಯ್ಯ (cm siddaramaiah) ಹೇಳಿಕೆಯಿಂದ ಮತ್ತೆ ವಿವಾದ ಗರಿಗೆದರಿದೆ. ದಾವಣಗೆರೆಯಲ್ಲಿ ವೀರಶೈವ ಲಿಂಗಾಯತ ಮಹಾಸಭೆ ಎರಡನೇ ದಿನ ನಡೆಯುತ್ತಿದೆ. ಇದರೊಂದಿಗೆ ರಾಜ್ಯದ ಇಂದಿನ ಇನ್ನಷ್ಟು ಮಹತ್ವದ ಸುದ್ದಿಗಳನ್ನು ಇಲ್ಲಿ ಫಾಲೋ (Karnataka Live News) ಮಾಡಿ.

Prabhakar R

ಮತ್ತೆ ಕೇಳಿದ ಪ್ರತ್ಯೇಕ ಲಿಂಗಾಯತ ಧರ್ಮದ ಕೂಗು; ಹೋರಾಟಕ್ಕೆ ಶೆಟ್ಟರ್‌ ಕರೆ

ಪ್ರತ್ಯೇಕ ಲಿಂಗಾಯತ ಧರ್ಮ (separate Lingayat religion) ಹೋರಾಟಕ್ಕೆ ಬೆಂಬಲಿಸಿದ ಆರೋಪಕ್ಕೆ ಗುರಿಯಾಗಿದ್ದ ಕಾಂಗ್ರೆಸ್‌ಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹಿನ್ನಡೆಯಾಗಿತ್ತು. ಇದೀಗ ಜಾತಿಗಣತಿ ವರದಿ ಸ್ವೀಕಾರಕ್ಕೆ ಮುಂದಾಗಿರುವ ರಾಜ್ಯ ಸರ್ಕಾರದ ನಿರ್ಧಾರ ವಿರೋಧಿಸಿ ವೀರಶೈವ-ಲಿಂಗಾಯತ ಸಮುದಾಯದ ನಾಯಕರು ಒಗ್ಗಟ್ಟಾಗಿದ್ದಾರೆ. ಈ ನಡುವೆ ಮತ್ತೊಮ್ಮೆ ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರ ಮುನ್ನೆಲೆಗೆ ಬಂದಿದ್ದು, ವೀರಶೈವ ಲಿಂಗಾಯತ ಅಧಿವೇಶನದಲ್ಲಿ ಮಾಜಿ ಸಿಎಂ, ಕಾಂಗ್ರೆಸ್‌ ಎಂಎಲ್‌ಸಿ ಜಗದೀಶ್‌ ಶೆಟ್ಟರ್‌ ಅವರು ಪ್ರತ್ಯೇಕ ಧರ್ಮ ಹೋರಾಟಕ್ಕೆ ಕರೆ ನೀಡಿದ್ದಾರೆ.

ಮತ್ತೆ ಕೇಳಿದ ಪ್ರತ್ಯೇಕ ಲಿಂಗಾಯತ ಧರ್ಮದ ಕೂಗು; ಹೋರಾಟಕ್ಕೆ ಶೆಟ್ಟರ್‌ ಕರೆ
Deepa S

ಚಳಿ ಇರಲಿ, ಮಳೆ ಬರಲಿ; ಆರೋಗ್ಯದ ಕುರಿತು ಕಾಳಜಿ ಇರಲಿ

ಶನಿವಾರ ರಾಜ್ಯಾದ್ಯಂತ ಒಣ ಹವೆ (Dry weather) ಮೇಲುಗೈ ಸಾಧಿಸಿದೆ. ವಿಜಯಪುರದಲ್ಲಿ ಕಡಿಮೆ ಉಷ್ಣಾಂಶ 10.2 ಡಿ.ಸೆ ದಾಖಲಾಗಿತ್ತು. ಮುಂದಿನ 24 ಗಂಟೆಯಲ್ಲಿ ರಾಜ್ಯದಲ್ಲಿ ಒಣಹವೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ (Karnataka Weather Forecast) ಮುನ್ಸೂಚನೆಯನ್ನು ನೀಡಿದೆ.

Karnataka Weather : ಚಳಿ ಇರಲಿ, ಮಳೆ ಬರಲಿ; ಆರೋಗ್ಯದ ಕುರಿತು ಕಾಳಜಿ ಇರಲಿ
Deepa S

ಪ್ರಾಣ ಬೆದರಿಕೆ ಹಾಕಿದ ಪುನೀತ್‌ ಕೆರೆಹಳ್ಳಿ; ಮಾಲ್ ಆಫ್ ಏಷ್ಯಾ ಸಿಬ್ಬಂದಿ ದೂರು

ಹಿಂದು ಕಾರ್ಯಕರ್ತ ಪುನೀತ್ ಕೆರೆಹಳ್ಳಿ (Puneeth Kerehalli) ವಿರುದ್ಧ ಮತ್ತೊಂದು ಎಫ್‌ಐಆರ್ ದಾಖಲಾಗಿದೆ. ಮಾಲ್ ಆಫ್ ಏಷಿಯಾ ಶಾಪಿಂಗ್ (Mall Of Asia) ಮಾಲ್‌ನ ಸೆಕ್ಯೂರಿಟಿ ಅಸಿಸ್ಟೆಂಟ್ ಮ್ಯಾನೇಜರ್ ಸ್ಟೀಫನ್ ವಿಕ್ಟೋರ್ ಎಂಬುವವರು ನೀಡಿದ ದೂರಿನ ಮೇರೆಗೆ ಕೊಡಿಗೆಹಳ್ಳಿ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ.

Puneeth Kerehalli : ಪ್ರಾಣ ಬೆದರಿಕೆ ಹಾಕಿದ ಪುನೀತ್‌ ಕೆರೆಹಳ್ಳಿ; ಮಾಲ್ ಆಫ್ ಏಷ್ಯಾ ಸಿಬ್ಬಂದಿ ದೂರು
Deepa S

ಹಿಂಬದಿಯಿಂದ ಗುದ್ದಿ ಮಹಿಳೆಯರ ಮೇಲೆ ಹರಿದ ಟ್ಯಾಂಕರ್‌; ಸಿಸಿ ಕ್ಯಾಮೆರಾದಲ್ಲಿ ಸೆರೆ

ನಡೆದು ಹೋಗುತ್ತಿದ್ದ ಮಹಿಳೆಯರಿಬ್ಬರಿಗೆ ಪೆಟ್ರೋಲ್ ಟ್ಯಾಂಕರ್ ಡಿಕ್ಕಿ (Road Accident) ಹೊಡೆದಿದೆ. ಪರಿಣಾಮ ಸ್ಥಳದಲ್ಲಿಯೇ ಓರ್ವ ಮಹಿಳೆ ಮೃತಪಟ್ಟಿದ್ದರೆ, ಮತ್ತೊಬ್ಬ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಬಳ್ಳಾರಿ ನಗರದ ಮೋತಿ‌ ಸರ್ಕಲ್‌ನಲ್ಲಿ ಭಾನುವಾರ ಈ ದುರ್ಘಟನೆ ನಡೆದಿದೆ‌.

Road Accident : ಹಿಂಬದಿಯಿಂದ ಗುದ್ದಿ ಮಹಿಳೆಯರ ಮೇಲೆ ಹರಿದ ಟ್ಯಾಂಕರ್‌; ಸಿಸಿ ಕ್ಯಾಮೆರಾದಲ್ಲಿ ಸೆರೆ
Deepa S

ಜಮೀನಿಗೆ ತೆರಳಿದ್ದ ವೃದ್ಧೆ ಮೇಲೆ ಕರಡಿಗಳು ದಾಳಿ

ವೃದ್ಧೆ ಮೇಲೆ ಕರಡಿಗಳು ದಾಳಿ (Bear attack) ಮಾಡಿವೆ. ಚಿತ್ರದುರ್ಗದ ಚಳ್ಳಕೆರೆ ತಾಲೂಕಿನ ದೊಡ್ಡ ಉಳ್ಳಾರ್ತಿ ಗ್ರಾಮದಲ್ಲಿ ನಡೆದಿದೆ. ಮಂಜಮ್ಮ (64) ಕರಡಿಗಳ ದಾಳಿಗೆ ಒಳಗಾದವರು.

Bear attack: ಜಮೀನಿಗೆ ತೆರಳಿದ್ದ ವೃದ್ಧೆ ಮೇಲೆ ಕರಡಿಗಳು ದಾಳಿ
Exit mobile version