Site icon Vistara News

Karnataka Live News: ರಾಜ್ಯದ ಇಂದಿನ ಪ್ರಮುಖ ಸುದ್ದಿಗಳು; ಕೆರಳಿದ ಹಿಜಾಬ್‌ ವಿವಾದ

ಬೆಂಗಳೂರು: ಹಿಜಾಬ್‌ ನಿಷೇಧ (Hijab ban) ವಾಪಸ್‌ ಕುರಿತು ಸಿಎಂ ಸಿದ್ದರಾಮಯ್ಯ (cm siddaramaiah) ಹೇಳಿಕೆಯಿಂದ ಮತ್ತೆ ವಿವಾದ ಗರಿಗೆದರಿದೆ. ದಾವಣಗೆರೆಯಲ್ಲಿ ವೀರಶೈವ ಲಿಂಗಾಯತ ಮಹಾಸಭೆ ಎರಡನೇ ದಿನ ನಡೆಯುತ್ತಿದೆ. ಇದರೊಂದಿಗೆ ರಾಜ್ಯದ ಇಂದಿನ ಇನ್ನಷ್ಟು ಮಹತ್ವದ ಸುದ್ದಿಗಳನ್ನು ಇಲ್ಲಿ ಫಾಲೋ (Karnataka Live News) ಮಾಡಿ.

Deepa S

ಬೈಕ್‌ ಸವಾರರಿಬ್ಬರ ಜೀವ ತೆಗೆದ ಅಪಘಾತ; ಲಾರಿ ಹರಿದು ಕುರಿಗಳು ಸಾವು

ಪ್ರತ್ಯೇಕ ಕಡೆಗಳಲ್ಲಿ ನಡೆದ ಅಪಘಾತದಲ್ಲಿ ಸವಾರರಿಬ್ಬರು ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ. ಲಾರಿ ಹರಿದು 30ಕ್ಕೂ ಹೆಚ್ಚು ಕುರಿಗಳು ಮೃತಪಟ್ಟಿವೆ.

Road Accident: ಬೈಕ್‌ ಸವಾರರಿಬ್ಬರ ಜೀವ ತೆಗೆದ ಅಪಘಾತ
Deepa S

ಶೋಭಾ ಯಾತ್ರೆಯಲ್ಲಿ ಪೊಲೀಸರ ಮೇಲೆ ಹಲ್ಲೆ; ಭಜರಂಗದಳ ಕಾರ್ಯಕರ್ತರ ಮೇಲೆ ಕೇಸ್‌

ಚಿಕ್ಕಮಗಳೂರು ತಾಲೂಕಿನ ಆಲ್ದೂರು ಪಟ್ಟಣದಲ್ಲಿ ನಡೆದ ಶೋಭಾಯಾತ್ರೆಯಲ್ಲಿ (Shobha yatra) ಪೊಲೀಸರ ಮೇಲೆ ಭಜರಂಗದಳ (Bhajarangadal) ಕಾರ್ಯಕರ್ತರು ಹಲ್ಲೆಗೆ (Datta Jayanti) ಯತ್ನಿಸಿದ್ದಾರೆ (assault case) ಎಂಬ ಆರೋಪ ಕೇಳಿ ಬಂದಿದೆ. ಈ ಸಂಬಂಧ ಆಲ್ದೂರು ಠಾಣೆಯಲ್ಲಿ 7 ಭಜರಂಗದಳ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಾಗಿದೆ. ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದಲ್ಲದೇ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಕ್ಕೆ ದೂರು ದಾಖಲಾಗಿದೆ.

Datta Jayanti : ಶೋಭಾ ಯಾತ್ರೆಯಲ್ಲಿ ಪೊಲೀಸರ ಮೇಲೆ ಹಲ್ಲೆ; ಬಜರಂಗದಳ ಕಾರ್ಯಕರ್ತರ ಮೇಲೆ ಕೇಸ್‌
Harish Kera

ಲಿಂಗಾಯತ ಅಧಿವೇಶನದಲ್ಲಿ ಬಿಎಸ್‌ವೈ, ಬೊಮ್ಮಾಯಿ, ವಿಜಯೇಂದ್ರ

ದಾವಣಗೆರೆ: ಇಲ್ಲಿ ನಡೆಯುತ್ತಿರುವ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ 24ನೇ ರಾಷ್ಟ್ರೀಯ ಮಹಾ ಅಧಿವೇಶನದ ಎರಡನೇ ದಿನವಾದ ಇಂದು ಮಾಜಿ ಸಿಎಂಗಳಾದ ಬಿಎಸ್ ಯಡಿಯೂರಪ್ಪ, ಬಸವರಾಜ್ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಆಗಮಿಸಲಿದ್ದಾರೆ.

Harish Kera

ಮತ್ತೆ ಕೆರಳಿದ ಹಿಜಾಬ್‌ ವಿವಾದ

ಬೆಂಗಳೂರು: ಹಿಜಾಬ್‌ ನಿಷೇಧ ವಾಪಸ್‌ ಕುರಿತಂತೆ ಸೂಚನೆ ನೀಡಿರುವ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಯಿಂದ ಪ್ರತಿಪಕ್ಷ ಬಿಜೆಪಿ ಕೆರಳಿದ್ದು, ಪಕ್ಷದ ಮುಖಂಡರು ʼʼಇದು ಕಾಂಗ್ರೆಸ್‌ ಸರ್ಕಾರದ ಅಲ್ಪಸಂಖ್ಯಾತ ತುಷ್ಟೀಕರಣʼʼ ಎಂದು ಟೀಕಿಸಿದ್ದಾರೆ.

Exit mobile version