Site icon Vistara News

Karnataka live news: ರಾಮಲಿಂಗಾ ರೆಡ್ಡಿ ಸಂಧಾನಕ್ಕೆ ತಾತ್ಕಾಲಿಕ ಜಯ; ಜುಲೈ 27ರ ಖಾಸಗಿ ಸಾರಿಗೆ ಬಂದ್‌ ಮುಂದಕ್ಕೆ

high court

ಬೆಂಗಳೂರು: ರಾಜ್ಯದ ಇಂದಿನ ಪ್ರಮುಖ ಸುದ್ದಿ ಬೆಳವಣಿಗೆಗಳ ಕ್ಷಣಕ್ಷಣದ ಅಪ್‌ಡೇಟ್ಸ್‌ (Karnataka live news) ನಿಮಗೆ ಇಲ್ಲಿ ದೊರೆಯಲಿವೆ.

Deepa S

ಕರಾವಳಿಯಲ್ಲಿ ನಾಳೆ ರಣಮಳೆ

ಮುಂದಿನ 24 ಗಂಟೆಯಲ್ಲಿ ರಾಜ್ಯಾದ್ಯಂತ ಬಿರುಗಾಳಿ ಸಹಿತ ಭಾರಿ ಮಳೆಯಾಗುವ (Rain News) ಎಚ್ಚರಿಕೆಯನ್ನು ಹವಾಮಾನ ಇಲಾಖೆ (Weather report) ನೀಡಿದೆ. ಕರಾವಳಿಯಲ್ಲಿ ಮಳೆ ಅಬ್ಬರ ಇದ್ದರೆ, ಮಲೆನಾಡು ಹಾಗೂ ಒಳನಾಡಿನ ಭಾಗದಲ್ಲೂ ಧಾರಾಕಾರ ಮಳೆಯಾಗಲಿದೆ.

Weather Report : ಕರಾವಳಿಯಲ್ಲಿ ನಾಳೆ ರಣಮಳೆ; ಮಲೆನಾಡು, ಒಳನಾಡಲ್ಲಿ ಧಾರಾಕಾರ
Deepa S

ಭಾರಿ ಮಳೆಗೆ ಗ್ರಾಮವೇ ಮುಳುಗಡೆ

ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನಲ್ಲಿ ಧಾರಾಕಾರ ಮಳೆಯಿಂದ (Rain News) ಗಂಗಾವಳಿ ನದಿ ಮೈದುಂಬಿ ಹರಿಯುತ್ತಿದೆ. ಪರಿಣಾಮ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ಇಲ್ಲಿನ ಬಿಳಿಹೊಂಯ್ಗಿ ಗ್ರಾಮದ 30ಕ್ಕೂ ಅಧಿಕ ಮನೆಗಳು ಜಲಾವೃತಗೊಂಡಿದೆ. ರಸ್ತೆಯ ಮೇಲೂ ನೀರು ನಿಂತು ಓಡಾಟಕ್ಕೂ ಅವ್ಯವಸ್ಥೆ ಆಗಿದೆ. ಸೊಂಟದವರೆಗೂ ನೀರು ನಿಂತಿದ್ದು, ಜನರಲ್ಲೂ ಆ ನೆರೆಯಲ್ಲೇ ನಡೆದಾಡುತ್ತಿದ್ದಾರೆ. ಮತ್ತೆ ಮಳೆ ಹೆಚ್ಚಾದಲ್ಲಿ ಮನೆಯೊಳಗೆ ನೀರು ನುಗ್ಗುವ ಆತಂಕ ಇದೆ.

Rain News : ಭಾರಿ ಮಳೆಗೆ ಗ್ರಾಮವೇ ಮುಳುಗಡೆ; ಉರುಳಿದ ಮರಗಳು, ನೆಲಸಮವಾದ ಮನೆಗಳು
Prabhakar R

ಹೈಕೋರ್ಟ್‌ನ 6 ಜಡ್ಜ್‌ಗಳಿಗೆ ಕೊಲೆ ಬೆದರಿಕೆ; ಪಾಕ್‌ ಕೈವಾಡ ಶಂಕೆ

ಹೈಕೋರ್ಟ್‌ನ 6 ನ್ಯಾಯಮೂರ್ತಿಗಳಿಗೆ ಕೊಲೆ ಬೆದರಿಕೆ (Death Threats) ಹಾಕಿ, 50 ಲಕ್ಷ ರೂ.ಗಳಿಗೆ ಬೇಡಿಕೆ ಇಟ್ಟಿರುವುದು ಕಂಡುಬಂದಿದೆ. ಹಣವನ್ನು ಪಾಕಿಸ್ತಾನ ಮೂಲದ ಬ್ಯಾಂಕ್‌ ಖಾತೆಗೆ ವರ್ಗಾವಣೆ ಮಾಡಿ ಎಂದು ಹೇಳಿರುವುದರಿಂದ ಕೃತ್ಯದಲ್ಲಿ ಪಾಕ್‌ ಕೈವಾಡದ ಶಂಕೆ ಮೂಡಿದೆ. ಈ ಸಂಬಂಧ ನಗರದ ಕೇಂದ್ರ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Death Threats: ಹೈಕೋರ್ಟ್‌ನ 6 ಜಡ್ಜ್‌ಗಳಿಗೆ ಕೊಲೆ ಬೆದರಿಕೆ; ಪಾಕ್‌ ಕೈವಾಡ ಶಂಕೆ
Deepa S

ಮಳೆಗೆ ಮುಳುಗಿದ ಕಡಬ; ಒದ್ದೆ ಮೈಯಲ್ಲಿ ನಡುಗುತ್ತಲೇ ಪರೀಕ್ಷೆ ಬರೆದರು!

ಮೊಣಕಾಲು ಮಟ್ಟಕ್ಕೆ ನೀರು ಬಂದು ಮೈಪೂರಾ ಒದ್ದೆಯಾದರೂ ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯದಲ್ಲಿ (kukke subramanya) ಘಟನೆ ನಡೆದಿದೆ. ಸತತ ಒಂದು ವಾರದಿಂದ ಬಿಟ್ಟು ಬಿಡದೆ ಮಳೆ (Rain News) ಸುರಿಯುತ್ತಿದ್ದು, ರಸ್ತೆಗಳೆಲ್ಲವೂ ಜಲಾವೃತಗೊಂಡಿದೆ.

Rain News : ಮಳೆಗೆ ಮುಳುಗಿದ ಕಡಬ; ಒದ್ದೆ ಮೈಯಲ್ಲಿ ನಡುಗುತ್ತಲೇ ಪರೀಕ್ಷೆ ಬರೆದರು!
Prabhakar R

ವಿದ್ಯಾರ್ಥಿಗಳ 25 ಲಕ್ಷ ರೂ. ಕದ್ದು ಲೇಡಿ ಪ್ರೊಫೆಸರ್‌ ಎಸ್ಕೇಪ್

ವಿದ್ಯಾರ್ಥಿಗಳು ಕಟ್ಟಿದ್ದ ಸುಮಾರು 25 ಲಕ್ಷ ರೂ. ಪರೀಕ್ಷಾ ಶುಲ್ಕದ ಹಣವನ್ನು ಕದ್ದು ಲೇಡಿ ಅಸಿಸ್ಟೆಂಟ್ ಪ್ರೊಫೆಸರ್‌ ಪರಾರಿಯಾಗಿರುವ ಘಟನೆ ಮೈಸೂರಿನ ಪ್ರತಿಷ್ಠಿತ ಎಟಿಎಂಇ ಕಾಲೇಜಿನಲ್ಲಿ ನಡೆದಿದೆ. ಪರೀಕ್ಷೆ ಹೊಸ್ತಿಲಲ್ಲಿ ಪ್ರೊಫೆಸರ್ ನಾಪತ್ತೆಯಾಗಿರುವುದರಿಂದ ವಿದ್ಯಾರ್ಥಿಗಳಿಗೆ ಸಂಕಷ್ಟ ಎದುರಾಗಿದೆ.

Fraud Case: ವಿದ್ಯಾರ್ಥಿಗಳ 25 ಲಕ್ಷ ರೂ. ಕದ್ದು ಲೇಡಿ ಪ್ರೊಫೆಸರ್‌ ಎಸ್ಕೇಪ್
Exit mobile version