ಬೆಂಗಳೂರು: ರಾಜ್ಯದ ಇಂದಿನ ಪ್ರಮುಖ ಸುದ್ದಿ ಬೆಳವಣಿಗೆಗಳ ಕ್ಷಣಕ್ಷಣದ ಅಪ್‌ಡೇಟ್ಸ್ (Karnataka live news) ನಿಮಗೆ ಇಲ್ಲಿ ದೊರೆಯಲಿವೆ.
ಗಾಳಿ-ಮಳೆಗೆ ಮನೆ ಚಾವಣಿ, ಗೋಡೆ ಕುಸಿತ; ಅಪಾಯದಲ್ಲಿ ಜಲಾಶಯ ಮಟ್ಟ
ರಾಜ್ಯದ ಹಲವೆಡೆ ಬಿರುಗಾಳಿ ಸಹಿತ ಭಾರಿ ಮಳೆಗೆ (Rain News) ಜನರು ತತ್ತರಿಸಿ ಹೋಗಿದ್ದಾರೆ. ಕೆಲವೆಡೆ ಸಾವು-ನೋವಿಗೆ ಕಾರಣವಾಗಿದ್ದರೆ, ಹೊಳೆಯಂತಾದ ರಸ್ತೆಗಳಲ್ಲಿ ಸೇತುವೆಗಳು ಮುಳುಗಿ (Rain Effect) ಹೋಗಿವೆ.
Rain News : ಗಾಳಿ-ಮಳೆಗೆ ಮನೆ ಚಾವಣಿ, ಗೋಡೆ ಕುಸಿತ; ಅಪಾಯದಲ್ಲಿ ಜಲಾಶಯ ಮಟ್ಟ
ಮಳೆ ಅಬ್ಬರಕ್ಕೆ ಚಿಕ್ಕಮಗಳೂರಲ್ಲಿ ಕಾರುಗಳು ಪಲ್ಟಿ; ಧಾರವಾಡದಲ್ಲಿ ರಸ್ತೆ ಕುಸಿತ
ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ ಅಬ್ಬರ (rain News) ಮುಂದುವರಿದಿದೆ. ಮಳೆಯಿಂದಾಗಿ ರಸ್ತೆ ತಿರುವು ಗೋಚರಿಸದೆ ಒಂದೇ ಸ್ಥಳದಲ್ಲಿ ಎರಡು ವಾಹನಗಳು (road accident) ಪಲ್ಟಿಯಾಗಿವೆ. ಇತ್ತ ಧಾರವಾಡದಲ್ಲಿ ರಸ್ತೆ ಕುಸಿದು ಲಾರಿಯೊಂದು ಮಧ್ಯೆ ಸಿಲುಕಿದೆ.
Road Accident : ಮಳೆ ಅಬ್ಬರಕ್ಕೆ ಚಿಕ್ಕಮಗಳೂರಲ್ಲಿ ಕಾರುಗಳು ಪಲ್ಟಿ; ಧಾರವಾಡದಲ್ಲಿ ರಸ್ತೆ ಕುಸಿತ
ಕರಾವಳಿಯಲ್ಲಿಂದು ಮಳೆ ಜೋರು
ರಾಜ್ಯಾದ್ಯಂತ ಬಿಸಿಲ ತಾಪಮಾನ ಕಡಿಮೆ ಆಗಿದ್ದು, ಸೋಮವಾರ ವಾತಾವರಣವು ಥಂಡಿಯಿಂದ (Cold weather) ಕೂಡಿದೆ. ಬೆಂಗಳೂರಲ್ಲಿ ತುಂತುರು ಮಳೆಯ (Rain News) ಜತೆಗೆ ಜೋರಾದ ಗಾಳಿಯು ಬೀಸುತ್ತಿದೆ. ಜು.24ರಂದು ಮೋಡ ಕವಿದ ವಾತಾವರಣ ಇರಲಿದ್ದು, ಅಲ್ಲಲ್ಲಿ ಹಗುರದಿಂದ ಸಾಧಾರಣ ಮಳೆ ಬೀಳುವ ಸಾಧ್ಯತೆ ಇದೆ. ಇತ್ತ ಕರಾವಳಿ, ಮಲೆನಾಡಿನ ಜಿಲ್ಲೆಗಳೆಲ್ಲವೂ (Weather report) ಮಳೆನಾಡಾಗಲಿದೆ.
Weather report : ಥಂಡಾ ಹೊಡೆದ ಬೆಂಗಳೂರು; ಕರಾವಳಿಯಲ್ಲಿ ಮಳೆ ಜೋರು
ಮಾಜಿ ಸಚಿವ ಮುನಿರತ್ನ ವಿರುದ್ಧ ಹನಿಟ್ರ್ಯಾಪ್ ಆರೋಪ
ಬೆಂಗಳೂರು: ಚುನಾವಣೆಯಲ್ಲಿ ಬೆಂಬಲ ನೀಡುವಂತೆ ಒತ್ತಡ ಹೇರಲು ಆರ್‌ಆರ್ ನಗರದ ಶಾಸಕ ಮುನಿರತ್ನ ಅವರು ಹನಿಟ್ರ್ಯಾಪ್ ಬಳಸಿಕೊಳ್ಳುತಿದ್ದರು ಎಂದು ಮುನಿರತ್ನ ಬೆಂಬಲಿಗ ವೇಲು ನಾಯ್ಕರ್ ಗಂಭೀರ ಆರೋಪ ಮಾಡಿದ್ದಾರೆ. ಆರ್‌ಆರ್ ನಗರದಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆ ಆದ ಬಳಿಕ ಅವರು ಈ ಆರೋಪ ಮಾಡಿದರು.