ಬೆಂಗಳೂರು: ಐತಿಹಾಸಿಕ ಮೈಸೂರು ದಸರಾದ (Mysuru dasara) ಜಂಬೂಸವಾರಿ ಮೆರವಣಿಗೆಗೆ ಕ್ಷಣಗಣನೆ ಆರಂಭವಾಗಿದೆ. ನಾಡಹಬ್ಬ ದಸರಾ ಮೆರವಣಿಗೆ ಹಾಗೂ ರಾಜ್ಯದ ಇನ್ನಿತರ ಮಹತ್ವದ ಸುದ್ದಿಗಳಿಗೆ (Karnataka Live News) ಇಲ್ಲಿ ಭೇಟಿ ಕೊಡಿ.
Mysore Dasara : ಕಣ್ಮನ ಸೆಳೆದ ಪಂಜಿನ ಕವಾಯತು; ಮೈಸೂರು ದಸರಾ ಅದ್ಧೂರಿಯಾಗಿ ಮುಗಿಯಿತು!
ಯೋಧರು ಮತ್ತು ಪೊಲೀಸರ ಬೈಕ್ ಸಾಹಸಗಳ ಪ್ರದರ್ಶನಗಳು ಸೇರಿದ್ದವರ ಮೈನವಿರೇಳುವಂತೆ ಮಾಡಿತು. ಕೆಲ ಕಾಲ ಮೈದಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದಿದ್ದು, ಗಮನ ಸೆಳೆದವು. ಅಂತಿಮವಾಗಿ ಸುಮಾರು 25 ನಿಮಿಷಗಳ ಕಾಲ ಪಂಜಿನ ಕವಾಯತು ನಡೆಯಿತು. ಈ ಕವಾಯತು ಪ್ರದರ್ಶನದ ಅಷ್ಟೂ ಸಮಯವು ನೋಡುಗರು ಉಸಿರು ಬಿಗಿಹಿಡಿದು ವೀಕ್ಷಣೆ ಮಾಡಿದ್ದು ಕಂಡು ಬಂತು.
Mysore Dasara : ಕಣ್ಮನ ಸೆಳೆದ ಪಂಜಿನ ಕವಾಯತು; ಮೈಸೂರು ದಸರಾ ಅದ್ಧೂರಿಯಾಗಿ ಮುಗಿಯಿತು!
ಕನಕಪುರವನ್ನು ಬೆಂಗಳೂರಿಗೆ ಸೇರಿಸುವ ಡಿಕೆಶಿ ಹೇಳಿಕೆಗೆ ಎಚ್‌ಡಿಕೆ ಆಕ್ಷೇಪ
ಕನಕಪುರ ಮುಂದಿನ ದಿನಗಳಲ್ಲಿ ಬೆಂಗಳೂರಿಗೆ ಸೇರ್ಪಡೆಯಾಗಲಿದೆ (Kanakapura will be joined to Bangalore) ಎಂಬ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ (HD Kumaraswamy) ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕನಕಪುರದ ಶಿವಳ್ಳಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಿ.ಕೆ. ಶಿವಕುಮಾರ್ ಅವರು, ನೀವ್ಯಾರೂ ನಿಮ್ಮ ಜಾಗವನ್ನು ಬೆಂಗಳೂರಿನವರಿಗೆ ಮಾರಬೇಡಿ, ಮುಂದೆ ನಗರ ಇಲ್ಲಿವರೆಗೂ ವಿಸ್ತರಣೆಯಾಗಲಿದೆ ಎಂದಿದ್ದರು.
HD Kumaraswamy : ಕನಕಪುರವನ್ನು ಬೆಂಗಳೂರಿಗೆ ಸೇರಿಸುವ ಡಿಕೆಶಿ ಹೇಳಿಕೆಗೆ ಎಚ್‌ಡಿಕೆ ಆಕ್ಷೇಪ
ಆನೇಕಲ್‌ನಲ್ಲಿ ಜಂಬೂ ಸವಾರಿಗೆ ಮೆರುಗು ನೀಡಿದ ಕೇರಳದ ಸಾಧು ಆನೆ
ಬೆಂಗಳೂರು ಹೊರವಲಯದ ಆನೇಕಲ್ ಹಾಗೂ ಬನ್ನೇರುಘಟ್ಟದಲ್ಲಿ ವಿಜೃಂಭಣೆಯಿಂದ ಜಂಬೂ ಸವಾರಿ ಜರುಗಿತು. ಮಿನಿ ಮೈಸೂರು ಖ್ಯಾತಿಯ ಆನೇಕಲ್‌ನಲ್ಲಿ ಚೌಡೇಶ್ವರಿ ಜಂಬೂಸವಾರಿಗೆ ಕೇರಳದ ಸಾಧು ಆನೆ ಮೆರಗು ನೀಡಿತು.
https://vistaranews.com/karnataka/bengaluru-rural/anekal-dasara-grand-jumboo-savari-celebrations-in-anekal-and-bannerghatta/489089.html
ಮಳೆಯಾಟ ಬಂದ್; ಇನ್ನೆರಡು ದಿನ ಕರ್ನಾಟಕ ಸಿಕ್ಕಾಪಟ್ಟೆ Hot
ಮುಂದಿನ 48 ಗಂಟೆಯಲ್ಲಿ ರಾಜ್ಯಾದ್ಯಂತ ಒಣ ಹವೆ (Dry Weather) ಇರಲಿದೆ. ಮಲೆನಾಡು ಮತ್ತು ಕರಾವಳಿಯ ಪ್ರತ್ಯೇಕ ಕಡೆಗಳಲ್ಲಿ ಅಲ್ಲಲ್ಲಿ ಸಣ್ಣ ಪ್ರಮಾಣದಲ್ಲಿ (Rain News) ಮಳೆಯಾಗಲಿದೆ. ಉಳಿದಂತೆ ದಕ್ಷಿಣ ಹಾಗೂ ಉತ್ತರ ಒಳನಾಡಿನಲ್ಲಿ ಒಣಹವೆ ಇರಲಿದೆ ಎಂದು ಹವಾಮಾನ ಇಲಾಖೆ (Karnataka weather Forecast) ಮುನ್ಸೂಚನೆಯನ್ನು ನೀಡಿದೆ.
Karnataka Weather : ಮಳೆಯಾಟ ಬಂದ್; ಇನ್ನೆರಡು ದಿನ ಕರ್ನಾಟಕ ಸಿಕ್ಕಾಪಟ್ಟೆ Hot
Mysore Dasara : ವೈಭವದ ಜಂಬೂ ಸವಾರಿಗೆ ಸಿಎಂ ಚಾಲನೆ; ರಾಜ ಬೀದಿಯಲ್ಲಿ ಚಾಮುಂಡಿ ವಿಲಾಸ
ಮಂಗಳವಾರ ಸಂಜೆ 4.40ರಿಂದ 5ರವರೆಗೆ ಸಂದ ಶುಭ ಮೀನ ಲಗ್ನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾಗಿ ಕುಳಿತಿರುವ ಮಾತೆ ಚಾಮುಂಡೇಶ್ವರಿ ಮೂರ್ತಿಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಜಂಬೂ ಸವಾರಿ ಮೆರವಣಿಗೆಗೆ ಚಾಲನೆ ನೀಡಿದರು.
Mysore Dasara : ವೈಭವದ ಜಂಬೂ ಸವಾರಿಗೆ ಸಿಎಂ ಚಾಲನೆ; ರಾಜ ಬೀದಿಯಲ್ಲಿ ಚಾಮುಂಡಿ ವಿಲಾಸ