Site icon Vistara News

Karnataka Live News: ಕಣ್ಮನ ಸೆಳೆದ ಪಂಜಿನ ಕವಾಯತು; ಮೈಸೂರು ದಸರಾ ಅದ್ಧೂರಿಯಾಗಿ ಮುಗಿಯಿತು!

chamundeshwari devi

ಬೆಂಗಳೂರು: ಐತಿಹಾಸಿಕ ಮೈಸೂರು ದಸರಾದ (Mysuru dasara) ಜಂಬೂಸವಾರಿ ಮೆರವಣಿಗೆಗೆ ಕ್ಷಣಗಣನೆ ಆರಂಭವಾಗಿದೆ. ನಾಡಹಬ್ಬ ದಸರಾ ಮೆರವಣಿಗೆ ಹಾಗೂ ರಾಜ್ಯದ ಇನ್ನಿತರ ಮಹತ್ವದ ಸುದ್ದಿಗಳಿಗೆ (Karnataka Live News) ಇಲ್ಲಿ ಭೇಟಿ ಕೊಡಿ.

Deepa S

ಬೆಂಗಳೂರಿಗರ ಉಸಿರು ಸೇರುತ್ತಿರುವ ವಿಷ ಗಾಳಿ!

ರಾಜಧಾನಿ ಬೆಂಗಳೂರಿನಲ್ಲಿ ನೆಮ್ಮದಿಯ ಉಸಿರಾಟಕ್ಕೂ ಇನ್ನು ಮುಂದೆ ಕಷ್ಟವಾಗಲಿದೆ. ಕಾರಣ ಗಾಳಿಯ ಮಾನದಂಡಕ್ಕಿಂತ ಐದು ಪಟ್ಟು ವಿಷ ಗಾಳಿಯನ್ನು ಜನರು (Air Pollution) ಸೇವಿಸುತ್ತಿದ್ದಾರೆ. ದಿನದಿಂದ ದಿನಕ್ಕೆ ನಗರದ ಹಲವು ಭಾಗಗಳಲ್ಲಿ ಗಣನೀಯ ಮಟ್ಟದಲ್ಲಿ ವಾಯು ಹದಗೆಡುತ್ತಿದೆ. ಹಾಗಾದರೆ ನಗರದಲ್ಲಿನ ಮಾಲಿನ್ಯ ಪ್ರಮಾಣ ಹೇಗಿದೆ? ಯಾವ ಏರಿಯಾದಲ್ಲಿ ವಾಯುಮಾಲಿನ್ಯ (Bengaluru News) ಹೆಚ್ಚಾಗಿದೆ ಎಂಬುದರ ವಿವರ ಇಲ್ಲಿದೆ.

https://vistaranews.com/karnataka/bengaluru-air-pollution-there-has-been-a-five-fold-increase-in-toxic-air-in-bengaluru/488992.html

Deepa S

ಬಸವನಗುಡಿ ಹೆಸ್ರು ಬದಲಾಗುತ್ತಾ? ಶುರುವಾಯ್ತು ಮರು ನಾಮಕರಣಕ್ಕೆ ವಿರೋಧ

ಬಿಬಿಎಂಪಿ ವ್ಯಾಪ್ತಿಯಲ್ಲಿರುವ (BBMP Ward) ವಾರ್ಡ್‌ಗಳ ಮರು ವಿಂಗಡಣೆ ವಿಚಾರದಲ್ಲಿ ಈಗಾಗಳೇ ಒಂದರ ಹಿಂದೆ ಒಂದು ರಾದ್ಧಾಂತಗಳೇ ಆಗಿದೆ. ಈ ಹಿಂದಿನ ಬಿಜೆಪಿ ಸರ್ಕಾರ ಏರಿಕೆ ಮಾಡಿದ್ದ ವಾರ್ಡ್‌ಗಳ ಸಂಖ್ಯೆಯನ್ನು 225ಕ್ಕೆ ಇಳಿಕೆ ಮಾಡಲಾಗಿದೆ. ಆದರೆ ಈಗ ಬಿಬಿಎಂಪಿ ಮಾಡಿರುವ ಯಡವಟ್ಟು (Basavanagudi Name) ಬಸವನಗುಡಿ ವಾರ್ಡ್‌ (basavanagudi residential) ಜನರ ಕೆಂಗಣ್ಣಿಗೆ ಗುರಿಯಾಗಿದೆ.

https://vistaranews.com/karnataka/bengaluru/basavanagudi-name-will-basavanagudis-name-change-opposition-to-renaming-begins/488926.html

Deepa S

ಬೈಕ್‌ಗಳ ಮುಖಾಮುಖಿ ಡಿಕ್ಕಿ; ಸವಾರ ಸ್ಥಳದಲ್ಲೇ ಸಾವು

ಪ್ರತ್ಯೇಕ ಕಡೆಗಳಲ್ಲಿ ರಸ್ತೆ ಅಪಘಾತಗಳು ನಡೆದಿದ್ದು, ಸವಾರನೊಬ್ಬ ಮೃತಪಟ್ಟಿದ್ದರೆ ಮತ್ತೊಬ್ಬ ಗಂಭೀರ ಗಾಯಗೊಂಡಿರುವ ಘಟನೆ ನಡೆದಿದೆ.

https://vistaranews.com/karnataka/road-accident-bikes-accident-the-rider-died-on-the-spot/488851.html

Deepa S

ರಿಹ್ಯಾಬಿಲಿಟೇಷನ್ ಸೆಂಟರ್‌ನ 3ನೇ ಮಹಡಿಯಿಂದ ಜಿಗಿದು ವ್ಯಕ್ತಿ ಸಾವು

ಬೆಂಗಳೂರಿನ ಕೆಂಚನಪುರದಲ್ಲಿರುವ ರಿಹ್ಯಾಬಿಲಿಟೇಷನ್ ಸೆಂಟರ್‌ನ ಮೂರನೇ ಮಹಡಿಯಿಂದ ಜಿಗಿದು ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ನಡೆದಿದೆ. ಶುಕೂರ್ ಪಟೇಲ್ ಮೃತ ದುರ್ದೈವಿ.

https://vistaranews.com/karnataka/bengaluru/bengaluru-news-man-dies-after-jumping-from-3rd-floor-of-rehabilitation-centre/488823.html

Adarsha Anche

Mysore Dasara : ನೆರವೇರಿದ ನಂದಿ ಪೂಜೆ; ವಿಜಯ ದಶಮಿ ಜಂಬೂ ಸವಾರಿಗೆ ಮುನ್ನುಡಿ ಬರೆದ ಸಿಎಂ

ಮಂಗಳವಾರ (ಅಕ್ಟೋಬರ್‌ 24) ಮಧ್ಯಾಹ್ನ 1.46ರಿಂದ 2.08ರೊಳಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಂದಿ ಧ್ವಜಕ್ಕೆ ಪೂಜೆ ನೆರವೇರಿಸಿದರು. ಇವರಿಗೆ ಡಿಸಿಎಂ ಡಿ.ಕೆ. ಶಿವಕುಮಾರ್‌ ಸಾಥ್‌ ನೀಡಿದರು.


https://vistaranews.com/karnataka/cm-siddaramaiah-performs-nandi-pooja-in-mysore-dasara/488791.html

Exit mobile version