Site icon Vistara News

Karnataka Live News: ಕಣ್ಮನ ಸೆಳೆದ ಪಂಜಿನ ಕವಾಯತು; ಮೈಸೂರು ದಸರಾ ಅದ್ಧೂರಿಯಾಗಿ ಮುಗಿಯಿತು!

chamundeshwari devi

ಬೆಂಗಳೂರು: ಐತಿಹಾಸಿಕ ಮೈಸೂರು ದಸರಾದ (Mysuru dasara) ಜಂಬೂಸವಾರಿ ಮೆರವಣಿಗೆಗೆ ಕ್ಷಣಗಣನೆ ಆರಂಭವಾಗಿದೆ. ನಾಡಹಬ್ಬ ದಸರಾ ಮೆರವಣಿಗೆ ಹಾಗೂ ರಾಜ್ಯದ ಇನ್ನಿತರ ಮಹತ್ವದ ಸುದ್ದಿಗಳಿಗೆ (Karnataka Live News) ಇಲ್ಲಿ ಭೇಟಿ ಕೊಡಿ.

Deepa S

ಕತ್ತು, ಎದೆಗೆ ಇರಿದು ಯುವಕ ಕೊಚ್ಚಿ ಕೊಲೆ ಮಾಡಿದ ದುಷ್ಕರ್ಮಿಗಳು!

ಇತ್ತೀಚೆಗೆ ಅಪರಾಧ ಕೃತ್ಯಗಳು ಹೆಚ್ಚಾಗುತ್ತಿದ್ದು, ಅಪರಿಚಿತ ಯುವಕನೊಬ್ಬ ಕೊಲೆಯಾದ (Murder Case) ಸ್ಥಿತಿಯಲ್ಲಿ ಮೃತದೇಹವು ಪತ್ತೆಯಾಗಿದೆ. ಹುಬ್ಬಳ್ಳಿ- ಶಿವಳ್ಳಿ ರಸ್ತೆಯಲ್ಲಿರುವ ಬ್ರಿಜ್ ಕೆಳಗೆ ದುಷ್ಕರ್ಮಿಗಳು ಬರ್ಬರವಾಗಿ ಕೊಲೆ ಮಾಡಿ ಮೃತದೇಹವನ್ನು ಬಿಸಾಡಿ ಹೋಗಿದ್ದಾರೆ.

Murder Case : ಕತ್ತು, ಎದೆಗೆ ಇರಿದು ಯುವಕ ಕೊಚ್ಚಿ ಕೊಲೆ ಮಾಡಿದ ದುಷ್ಕರ್ಮಿಗಳು!
Deepa S

ಅತ್ತಿಗೆಯೊಂದಿಗೆ ಸರಸ; ಅಡ್ಡಿಯಾಗಿದ್ದ ಅಣ್ಣನನ್ನೇ ಕೊಂದ ತಮ್ಮ!

ಬೆಂಗಳೂರು ಗ್ರಾಮಾಂತರದ ದೊಡ್ಡಬಳ್ಳಾಪುರದ ದೊಡ್ಡಮಂಕಲಾಳದಲ್ಲಿ ತಮ್ಮನಿಂದಲೇ ಅಣ್ಣನೊಬ್ಬ ಕೊಲೆಯಾಗಿ (Murder Case) ಹೋಗಿದ್ದಾನೆ. ಗಂಗರಾಜು (35) ಹತ್ಯೆಯಾದ ದುರ್ದೈವಿ.

https://vistaranews.com/karnataka/bengaluru-rural/murder-case-younger-brother-killed-his-elder-brother-for-illicit-relationship/488699.html

Deepa S

ವಿದ್ಯುತ್‌ ಕಡಿತ! ಅ.27 ರವರೆಗೆ ಬೆಂಗಳೂರಿನ ಈ ಏರಿಯಾಗಳು ಕತ್ತಲು

ನೈರುತ್ಯ ಮುಂಗಾರು ಕೈಕೊಟ್ಟಿದ್ದರಿಂದ ಜಲ ವಿದ್ಯುತ್‌ ಶಕ್ತಿ ಉತ್ಪಾದನೆಯಲ್ಲಿ ತೀವ್ರ ಅಭಾವ ಉಂಟಾಗಿದೆ. ರಾಜ್ಯದಲ್ಲಿ ವಿದ್ಯುತ್‌ ಉತ್ಪಾದನೆಯಲ್ಲಿ ಭಾರಿ ಕುಸಿತ ಉಂಟಾಗಿದ್ದು, ಅಕ್ಟೋಬರ್‌ನಲ್ಲಿ ಅಂದಾಜು 15,000 ಮೆಗಾವ್ಯಾಟ್‌ಗಿಂತ ಹೆಚ್ಚಿನ ಬೇಡಿಕೆ ಉಂಟಾಗಿದೆ. ಈಗಾಗಲೇ ಕೆಲವು ಕಡೆಗಳಲ್ಲಿ ಲೋಡ್‌ ಶೆಡ್ಡಿಂಗ್‌ ಶುರುವಾಗಿದೆ. ಈ ಮಧ್ಯೆ ಬೆಂಗಳೂರಲ್ಲಿ ನಿರ್ವಹಣಾ ಕಾರ್ಯಗಳನ್ನು ಕೈಗೊಂಡಿರುವುದರಿಂದ ಅ.24ರಿಂದ 27ರವರೆಗೆ ವಿದ್ಯುತ್‌ ವ್ಯತ್ಯಯ (Power Cut) ಉಂಟಾಗಲಿದೆ.

https://vistaranews.com/karnataka/bengaluru/power-cut-power-cut-these-areas-of-bengaluru-will-remain-dark-till-october-27/488628.html

Deepa S

ಚಾಮರಾಜನಗರ, ಮೈಸೂರಲ್ಲಿ ತುಂತುರು ಮಳೆ ಸವಾರಿ

ಮುಂದಿನ 24 ಗಂಟೆಯಲ್ಲಿ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಹಗುರದಿಂದ ಕೂಡಿದ ಮಳೆಯಾಗುವ (Rain News) ಸಾಧ್ಯತೆ ಇದೆ. ಉತ್ತರ ಒಳನಾಡಿನಲ್ಲಿ ಒಣ ಹವೆ ಇರಲಿದೆ. ಮುಂದಿನ 48 ಗಂಟೆಯಲ್ಲಿ ರಾಜ್ಯಾದ್ಯಂತ ಒಣ ಹವೆ ಇರಲಿದೆ ಎಂದು ಹವಾಮಾನ ಇಲಾಖೆ (Karnataka weather Forecast) ಮುನ್ಸೂಚನೆಯನ್ನು ನೀಡಿದೆ.

https://vistaranews.com/weather/karnataka-weather-rain-likely-in-chamarajanagar-mysuru-otherwise-dry-weather-in-rest/488568.html

Harish Kera

ಕಣ್ಮನ ಸೆಳೆಯಲಿರುವ ಸ್ತಬ್ಧಚಿತ್ರಗಳು

ಮೈಸೂರು : ವಿಶ್ವ ವಿಖ್ಯಾತ ನಾಡಹಬ್ಬ ಮೈಸೂರು ದಸರಾ ಜಂಬೂ ಸವಾರಿಯಲ್ಲಿ ಈ ಬಾರಿ ರಾಜ್ಯದ ವಿವಿಧ ಜಿಲ್ಲೆಗಳ 31 ಸ್ತಬ್ದ ಚಿತ್ರಗಳು ಹಾಗೂ ವಿವಿಧ ಇಲಾಖೆಗಳ 18 ಸ್ತಬ್ದ ಚಿತ್ರಗಳು ಸೇರಿದಂತೆ ಒಟ್ಟು 49 ವಿವಿಧ ಸ್ತಬ್ದ ಚಿತ್ರಗಳು ಮೆರವಣಿಗೆಯಲ್ಲಿ ಸಾಗಲಿವೆ.

Exit mobile version