Site icon Vistara News

Karnataka Live News: ಕಣ್ಮನ ಸೆಳೆದ ಪಂಜಿನ ಕವಾಯತು; ಮೈಸೂರು ದಸರಾ ಅದ್ಧೂರಿಯಾಗಿ ಮುಗಿಯಿತು!

chamundeshwari devi

ಬೆಂಗಳೂರು: ಐತಿಹಾಸಿಕ ಮೈಸೂರು ದಸರಾದ (Mysuru dasara) ಜಂಬೂಸವಾರಿ ಮೆರವಣಿಗೆಗೆ ಕ್ಷಣಗಣನೆ ಆರಂಭವಾಗಿದೆ. ನಾಡಹಬ್ಬ ದಸರಾ ಮೆರವಣಿಗೆ ಹಾಗೂ ರಾಜ್ಯದ ಇನ್ನಿತರ ಮಹತ್ವದ ಸುದ್ದಿಗಳಿಗೆ (Karnataka Live News) ಇಲ್ಲಿ ಭೇಟಿ ಕೊಡಿ.

Harish Kera

ದೇವಿಗೆ ಹಸಿರು ಸೀರೆಯ ಅಲಂಕಾರ

ಮೆರವಣಿಗೆಗೊಳ್ಳಲಿರುವ ಚಾಮುಂಡೇಶ್ವರಿ ದೇವಿಯ ಉತ್ಸವಮೂರ್ತಿಗೆ ಹಸಿರು ಸೀರೆಯ ಅಲಂಕಾರ ಮಾಡಲಾಗಿದೆ. ಇನ್ನು ಕೆಲವೇ ಗಂಟೆಗಳಲ್ಲಿ ಬೆಳ್ಳಿಯ ರಥದಲ್ಲಿ ದೇವಿಯ ಮೂರ್ತಿಯನ್ನು ತೆಗೆದುಕೊಂಡು ಹೋಗಲಾಗುತ್ತದೆ. ಅದೇ ಅಲಂಕಾರದಲ್ಲಿ ಜಂಬೂಸವಾರಿಯಲ್ಲಿ ದೇವಿಯ ಮೆರವಣಿಗೆ ಮಾಡಲಾಗುತ್ತದೆ.

Harish Kera

ಅಭಿಮನ್ಯುವಿಗೆ ಅಲಂಕಾರ

ನಾಲ್ಕನೇ ಬಾರಿಗೆ ಅಂಬಾರಿ ಹೊರಲು ಸಿದ್ಧವಾಗಿರುವ ಅಭಿಮನ್ಯುವಿಗೆ ಅಲಂಕಾರ ಮಾಡಲಾಗಿದೆ. 750 ಕೆಜಿ ತೂಗುವ ಚಿನ್ನದ ಅಂಬಾರಿಯನ್ನು ಇದುವರೆಗೂ ಮೂರು ಬಾರಿ ಹೊತ್ತು ಅಭಿಮನ್ಯು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದ್ದಾನೆ. ಈತ 25 ವರ್ಷಗಳಿಂದ ದಸರಾದ ಭಾಗವಾಗಿದ್ದಾನೆ. ದೇಶಾದ್ಯಂತ 200 ಆನೆ, 50ಕ್ಕೂ ಹೆಚ್ಚು ಹುಲಿ ಸೆರೆ ಕಾರ್ಯಾಚರಣೆಗಳಲ್ಲಿ ಅಭಿಮನ್ಯು ಭಾಗಿಯಾಗಿದ್ದಾನೆ.

Exit mobile version