Site icon Vistara News

Karnataka live news: ರಾಜ್ಯದ ಪ್ರಮುಖ ಸುದ್ದಿ ಬೆಳವಣಿಗೆಗಳು; ʼವರ್ಗಾವಣೆ ದಂಧೆʼ ಪತ್ರ ತನ್ನದಲ್ಲವೆಂದ ಬಿ.ಆರ್.‌ ಪಾಟೀಲ್;‌ ಬಿಜೆಪಿ ಫೇಕ್‌ ಫ್ಯಾಕ್ಟರಿ ಎಂದ ಕಾಂಗ್ರೆಸ್!

karnataka live news

ಬೆಂಗಳೂರು: ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಸಚಿವರು ವರ್ಗಾವಣೆಗೆ ಶಾಸಕರಿಂದಲೇ ಹಣ ಕೇಳುತ್ತಿದ್ದಾರೆ ಎಂಬ ಆರೋಪವುಳ್ಳ ಪತ್ರವು ನಕಲಿ ಎಂದು ಆಳಂದ ಶಾಸಕ ಬಿ.ಆರ್.‌ ಪಾಟೀಲ್‌ ಸ್ಪಷ್ಟನೆ ನೀಡಿದ್ದಾರೆ. ನಾನು ಬರೆದಿರುವ ಪತ್ರವೇ ಬೇರೆ ಎಂದು ಅವರು ಹೇಳಿದ್ದಾರೆ. ಇನ್ನು ರಾಜ್ಯದೆಲ್ಲೆಡೆ ಧಾರಾಕಾರ ಮಳೆಯಾಗುತ್ತಿದೆ. ಹಲವೆಡೆ ಜನವಸತಿ ಪ್ರದೇಶಗಳಿಗೆ ನೀರು ನುಗ್ಗಿದ, ಕೆಲವೆಡೆ ಗುಡ್ಡ ಕುಸಿದ ಪ್ರಕರಣಗಳು ವರದಿಯಾಗುತ್ತಿವೆ. ಇದರೊಂದಿಗೆ ಇನ್ನಷ್ಟು ರಾಜ್ಯದ ಪ್ರಮುಖ ಸುದ್ದಿ ಬೆಳವಣಿಗೆಗಳ (Karnataka live news) ಕ್ಷಣಕ್ಷಣದ ಮಾಹಿತಿಗಾಗಿ ಇಲ್ಲಿ ನೋಡಿ.

Prabhakar R

ಯಳಂದೂರಿನಲ್ಲಿ ಬಾಲಕನ ಮೇಲೆ ಚಿರತೆ ದಾಳಿ

ಒಂಬತ್ತು ವರ್ಷದ ಬಾಲಕನ ಮೇಲೆ ಚಿರತೆ ದಾಳಿ ಮಾಡಿರುವ ಘಟನೆ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಮಲ್ಲಿಗೆಹಳ್ಳಿಯಲ್ಲಿ ಮಂಗಳವಾರ ನಡೆದಿದೆ. ನೆಂಟರ ಮನೆಯಿಂದ ತನ್ನ ಮನೆಗೆ ಬಾಲಕ ತೆರಳುವಾಗ ಚಿರತೆ ದಾಳಿ ನಡೆಸಿದ್ದು, ಬಾಲಕನಿಗೆ ಗಾಯಗಳಾಗಿವೆ.

Leopard Attack: ಯಳಂದೂರಿನಲ್ಲಿ ಬಾಲಕನ ಮೇಲೆ ಚಿರತೆ ದಾಳಿ

Prabhakar R

ಶಿಗ್ಗಾವಿಯಲ್ಲಿ ಬಿಸಿಯೂಟ ಸೇವಿಸಿ 34 ಶಾಲಾ ಮಕ್ಕಳು ಅಸ್ವಸ್ಥ

ಮಧ್ಯಾಹ್ನದ ಬಿಸಿಯೂಟ ಸೇವಿಸಿ 34 ಶಾಲಾ ಮಕ್ಕಳು ಅಸ್ವಸ್ಥಗೊಂಡಿರುವ ಘಟನೆ ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಚಿಕ್ಕಮಲ್ಲೂರು ಸರ್ಕಾರಿ ಶಾಲೆಯಲ್ಲಿ ನಡೆದಿದೆ. ಮಕ್ಕಳನ್ನು ಶಿಗ್ಗಾವಿ ತಾಲೂಕು ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ ಅವರು ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದ್ದಾರೆ. ಸದ್ಯ ಎಲ್ಲ ಮಕ್ಕಳು ಆರೋಗ್ಯವಾಗಿದ್ದಾರೆ.

Students Fall Sick: ಶಿಗ್ಗಾವಿಯಲ್ಲಿ ಬಿಸಿಯೂಟ ಸೇವಿಸಿ 34 ಶಾಲಾ ಮಕ್ಕಳು ಅಸ್ವಸ್ಥ

Adarsha Anche

Karnataka Politics : ‌ʼವರ್ಗಾವಣೆ ದಂಧೆʼ ಪತ್ರ ತನ್ನದಲ್ಲವೆಂದ ಬಿ.ಆರ್.‌ ಪಾಟೀಲ್;‌ ಬಿಜೆಪಿ ಫೇಕ್‌ ಫ್ಯಾಕ್ಟರಿ ಎಂದ ಕಾಂಗ್ರೆಸ್!

ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಸಚಿವರು ವರ್ಗಾವಣೆಗೆ ಶಾಸಕರಿಂದಲೇ ಹಣ ಕೇಳುತ್ತಿದ್ದಾರೆ ಎಂಬ ಆರೋಪವುಳ್ಳ ಪತ್ರವು ನಕಲಿ ಎಂದು ಆಳಂದ ಶಾಸಕ ಬಿ.ಆರ್.‌ ಪಾಟೀಲ್‌ ಸ್ಪಷ್ಟನೆ ನೀಡಿದ್ದಾರೆ. ನಾನು ಬರೆದಿರುವ ಪತ್ರವೇ ಬೇರೆ ಎಂದು ಅವರು ಹೇಳಿದ್ದಾರೆ.

https://vistaranews.com/karnataka/br-patil-says-transfer-racket-letter-is-not-his-congress-calls-bjp-fake-factory-karnataka-politics/410527.html

Prabhakar R

ಗೃಹಲಕ್ಷ್ಮೀ ಯೋಜನೆಯಲ್ಲಿ ನಿಲ್ಲದ ಹಣ ವಸೂಲಿ; ಅರ್ಜಿ ಸಲ್ಲಿಕೆಗೆ ಕೊಡಬೇಕು 50-100 ರೂ.

ಗೃಹಲಕ್ಷ್ಮೀ ಯೋಜನೆಯಲ್ಲಿ ಹಣ ವಸೂಲಿ ಇನ್ನೂ ನಿಂತಿಲ್ಲ. ಅರ್ಜಿ ಸಲ್ಲಿಕೆಗೆ ಜನರಿಂದ ಹಣ ಸ್ವೀಕರಿಸಬಾರದು ಎಂದು ರಾಜ್ಯ ಸರ್ಕಾರ ಎಚ್ಚರಿಕೆ ನೀಡಿದ್ದರೂ ಚಿಕ್ಕಬಳ್ಳಾಪುರದ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಮಿಟ್ಟೇಮರಿ ಗ್ರಾಮ ಒನ್ ಕೇಂದ್ರದ ಸಿಬ್ಬಂದಿ ವಿರುದ್ಧ ಹಣ ವಸೂಲಿ ಆರೋಪ ಕೇಳಿಬಂದಿದೆ. ಸರ್ಕಾರಿ‌ ಯೋಜನೆ ಹೆಸರಲ್ಲಿ ಕಂಪ್ಯೂಟರ್‌ ಆಪರೇಟರ್ಸ್‌ ಹಣ ವಸೂಲಿಗಿಳಿದಿದ್ದು, ಅರ್ಜಿ ಸಲ್ಲಿಸಲು ಬರುವ ಪ್ರತಿ ಮಹಿಳೆಯಿಂದ 50 ರಿಂದ 100 ರೂ.ಗಳವರೆಗೆ ವಸೂಲಿ ಮಾಡಲಾಗುತ್ತಿದೆ.

Chikkaballapur News: ಗೃಹಲಕ್ಷ್ಮೀ ಯೋಜನೆಯಲ್ಲಿ ನಿಲ್ಲದ ಹಣ ವಸೂಲಿ; ಅರ್ಜಿ ಸಲ್ಲಿಕೆಗೆ ಕೊಡಬೇಕು 50-100 ರೂ.
Adarsha Anche

Karnataka Politics : ಸರ್ಕಾರದಲ್ಲಿ ಅನುದಾನ ಎಲ್ಲಿದೆ? ಕಾಂಗ್ರೆಸ್‌ ಶಾಸಕರಿಗೆ ಡಿಕೆಶಿ ತಿರುಗೇಟು!

ಕಾಂಗ್ರೆಸ್‌ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಹಿನ್ನೆಲೆಯಲ್ಲಿ ಸರ್ಕಾರದಲ್ಲಿ ಅನುದಾನವೇ ಇಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ. ಇಲ್ಲದ ಅನುದಾನವನ್ನು ಯಾರಿಗೆ ಕೊಡುವುದು ಎಂದು ಪ್ರಶ್ನೆ ಮಾಡಿದ್ದಾರೆ.

Karnataka Politics : ಸರ್ಕಾರದಲ್ಲಿ ಅನುದಾನ ಎಲ್ಲಿದೆ? ಕಾಂಗ್ರೆಸ್‌ ಶಾಸಕರಿಗೆ ಡಿಕೆಶಿ ತಿರುಗೇಟು!
Exit mobile version