Site icon Vistara News

Karnataka live news: ರಾಜ್ಯದ ಪ್ರಮುಖ ಸುದ್ದಿ ಬೆಳವಣಿಗೆಗಳು; ʼವರ್ಗಾವಣೆ ದಂಧೆʼ ಪತ್ರ ತನ್ನದಲ್ಲವೆಂದ ಬಿ.ಆರ್.‌ ಪಾಟೀಲ್;‌ ಬಿಜೆಪಿ ಫೇಕ್‌ ಫ್ಯಾಕ್ಟರಿ ಎಂದ ಕಾಂಗ್ರೆಸ್!

karnataka live news

ಬೆಂಗಳೂರು: ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಸಚಿವರು ವರ್ಗಾವಣೆಗೆ ಶಾಸಕರಿಂದಲೇ ಹಣ ಕೇಳುತ್ತಿದ್ದಾರೆ ಎಂಬ ಆರೋಪವುಳ್ಳ ಪತ್ರವು ನಕಲಿ ಎಂದು ಆಳಂದ ಶಾಸಕ ಬಿ.ಆರ್.‌ ಪಾಟೀಲ್‌ ಸ್ಪಷ್ಟನೆ ನೀಡಿದ್ದಾರೆ. ನಾನು ಬರೆದಿರುವ ಪತ್ರವೇ ಬೇರೆ ಎಂದು ಅವರು ಹೇಳಿದ್ದಾರೆ. ಇನ್ನು ರಾಜ್ಯದೆಲ್ಲೆಡೆ ಧಾರಾಕಾರ ಮಳೆಯಾಗುತ್ತಿದೆ. ಹಲವೆಡೆ ಜನವಸತಿ ಪ್ರದೇಶಗಳಿಗೆ ನೀರು ನುಗ್ಗಿದ, ಕೆಲವೆಡೆ ಗುಡ್ಡ ಕುಸಿದ ಪ್ರಕರಣಗಳು ವರದಿಯಾಗುತ್ತಿವೆ. ಇದರೊಂದಿಗೆ ಇನ್ನಷ್ಟು ರಾಜ್ಯದ ಪ್ರಮುಖ ಸುದ್ದಿ ಬೆಳವಣಿಗೆಗಳ (Karnataka live news) ಕ್ಷಣಕ್ಷಣದ ಮಾಹಿತಿಗಾಗಿ ಇಲ್ಲಿ ನೋಡಿ.

Deepa S

ಮಾವು ತುಂಬಿದ್ದ ಟ್ರಾಕ್ಟರ್ ಟ್ರಾಲಿ ಪಲ್ಟಿ

ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದಲ್ಲಿರುವ ಮಾವು ಮಾರುಕಟ್ಟೆ ಸಮೀಪ ಮಾವು ತುಂಬಿದ್ದ ಟ್ರಾಕ್ಟರ್ ಟ್ರಾಲಿ ಪಲ್ಟಿಯಾಗಿ (Tractor Accident) ಕಾರ್ಮಿಕನೊಬ್ಬ ದಾರುಣವಾಗಿ (Road Accident) ಮೃತಪಟ್ಟಿದ್ದಾರೆ. ಕೂಲಿ ಕಾರ್ಮಿಕ ಇಂದಿರಾನಗರ ನಿವಾಸಿ ಶಫಿ (35) ಮೃತ ದುರ್ದೈವಿ.

Road Accident : ಮಾವು ತುಂಬಿದ್ದ ಟ್ರಾಕ್ಟರ್ ಟ್ರಾಲಿ ಪಲ್ಟಿ; ಕಾರ್ಮಿಕ ಸಾವು, ಮೂವರಿಗೆ ಗಾಯ
Deepa S

ತಾಳಗುಪ್ಪ ರೈಲಿಗೆ ತಲೆವೊಡ್ಡಿ ನಿವೃತ್ತ ಉಪನ್ಯಾಸಕ ಆತ್ಮಹತ್ಯೆ!

ಶಿವಮೊಗ್ಗದ ವಿನೋಬ ನಗರದ  2ನೇ ಹಂತದ ಡೆಡ್ ಎಂಡ್‌ನಲ್ಲಿರುವ ರೈಲ್ವೆ ಟ್ರ್ಯಾಕ್ (Railway Track) ಬಳಿ ನಿವೃತ್ತ ಉಪನ್ಯಾಸಕ ಆತ್ಮಹತ್ಯೆ (Retired Lecturer) ಮಾಡಿಕೊಂಡಿದ್ದಾರೆ. ಡಿವಿಎಸ್ ಕಾಲೇಜಿನ (Dvs college) ನಿವೃತ್ತ ಉಪನ್ಯಾಸಕ ವಿಶ್ವನಾಥ್‌ (70) (Self Harming) ಮೃತ ದುರ್ದೈವಿ.

Self Harming : ತಾಳಗುಪ್ಪ ರೈಲಿಗೆ ತಲೆವೊಡ್ಡಿ ನಿವೃತ್ತ ಉಪನ್ಯಾಸಕ ಆತ್ಮಹತ್ಯೆ!
Deepa S

ಮಳೆ ಅವಾಂತರ; ರಾಯಚೂರಿನ 105 ಗ್ರಾಮಗಳಿಗೆ ಜಲ ಕಂಟಕ

Rain News : ಪಶ್ಚಿಮ ಘಟ್ಟದಲ್ಲಿ ಸುರಿಯುತ್ತಿರುವ ಮಳೆಯು ಉತ್ತರ ಕರ್ನಾಟದಲ್ಲಿ ನಾನಾ ಅವಾಂತರವನ್ನೇ (Rain Effect) ಸೃಷ್ಟಿಸಿದೆ. ರಾಯಚೂರಿನ 105 ಗ್ರಾಮಗಳಿಗೆ ಜಲ ಕಂಟಕ ಎದುರಾಗಿದ್ದರೆ, ಕೆಲವು ಕಡೆ ಸೇತುವೆಗಳು ಮುಳುಗಿವೆ. ಎಲ್ಲೆಲ್ಲಿ ಮಳೆಯ ಅವಘಡಗಳು ನಡೆದಿವೆ ಎಂಬ ಮಾಹಿತಿ (Weather report) ಇಲ್ಲಿದೆ.

Rain News : ಮಳೆ ಅವಾಂತರ; ರಾಯಚೂರಿನ 105 ಗ್ರಾಮಗಳಿಗೆ ಜಲ ಕಂಟಕ!
Krishna Bhat

Rain News: ಮಳೆ ಅಬ್ಬರಕ್ಕೆ ಮತ್ತೆರಡು ಬಲಿ, ಮನೆ ಚಾವಣಿ ಕುಸಿದು 15 ತಿಂಗಳ ಮಗು, ವೃದ್ಧೆ ಬಲಿ
Deepa S

ಮುಂದುವರಿದ ಮಳೆ ರಗಳೆ

ನೈರುತ್ಯ ಮುಂಗಾರು (Southwest monsoon) ರಾಜ್ಯಾದ್ಯಂತ ಚುರುಕಾಗಿದ್ದು, ಬಹುತೇಕ ಕಡೆಗಳಲ್ಲಿ ಭಾರಿ (Rain News) ಮಳೆಯಾಗುತ್ತಿದೆ. ಮುಂದಿನ 24 ಗಂಟೆಯಲ್ಲಿ ರಾಜ್ಯಾದ್ಯಂತ ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ (weather report) ನೀಡಿದೆ. ಕರಾವಳಿಯಲ್ಲಿ ಮಳೆ ಅಬ್ಬರ ಇದ್ದರೆ, ಮಲೆನಾಡು ಹಾಗೂ ಒಳನಾಡಿನ ಭಾಗದಲ್ಲೂ ಧಾರಾಕಾರ ಮಳೆಯಾಗಲಿದೆ.

Weather Report : ಮನೆಯಿಂದ ಹೊರ ಹೋಗುವ ಮುನ್ನ ಎಚ್ಚರ; ಮುಂದುವರಿದ ಮಳೆ ರಗಳೆ
Exit mobile version